ಇದು ಸತ್ವ ಪರೀಕ್ಷೆಯ ಕಾಲವೆ? ದೇಶಪಾಂಡೆ ಹೀಗಂದಿದ್ಯಾಕೆ?

ಈ ಕರೋನಾ ಕಾಲ ಸತ್ವ ಪರೀಕ್ಷೆಯ ಕಾಲವಾಗಿದ್ದು ಈಗ ಜನಸಾಮಾನ್ಯರ ಎಚ್ಚರ, ಸರ್ಕಾರದ ಮುತುವರ್ಜಿ, ಜನರ ಸೇವಾಮನೋಭಾವಗಳೆಲ್ಲಾ ಪರೀಕ್ಷೆಗೊಳಪಡುತ್ತಿವೆ ಎಂದ ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಕರೋನಾ ನಿರ್ವಹಣೆಯ ಬಗ್ಗೆ ಸಾರ್ವಜನಿಕರ ಸಮಾಧಾನವಿಲ್ಲ, ಸರ್ಕಾರ ಮುತುವರ್ಜಿ, ಮುಂದಾಲೋಚನೆಯಿಂದ ಕೆಲಸ ಮಾಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಬೇಸರಿಸಿದ್ದಾರೆ.

ಕಾಂಗ್ರೆಸ್ ನಿಂದ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಅವಶ್ಯವಿರುವ ಔಷಧ, ಪಿ.ಪಿ.ಇ. ಕಿಟ್,ಕೋವಿಡ್ ಪ್ರತಿರೋಧ ಸಲಕರಣೆಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ ನಂತರ ಸಿದ್ದಾಪುರದಲ್ಲಿ ಮಾತನಾಡಿದ ಅವರು ಕರೋನಾ ಸೇನಾನಿಗಳು ಪ್ರಾಮಾಣಿಕವಾಗಿ ಅವರ ಕೆಲಸ ಮಾಡುತಿದ್ದಾರೆ.

ಸರ್ಕಾರದಿಂದ ಔಷಧ, ಲಸಿಕೆ, ಅಗತ್ಯ ವಸ್ತುಗಳೇ ಬರದಿದ್ದರೆ ಅವರೇನು ಮಾಡುತ್ತಾರೆ. ಸಮಾಜದ ಬಗ್ಗೆ ಕಾಳಜಿ ಇರುವವರೆಲ್ಲಾ ತಮ್ಮ ಮಿತಿಯಲ್ಲಿ ಕೆಲಸ ಮಾಡುತಿದ್ದಾರೆ. ಸರ್ಕಾರದ ಅವ್ಯವಸ್ಥೆಗಳ ಬಗ್ಗೆ ಮಾತನಾಡಿದರೆ ರಾಜಕಾರಣ ಮಾಡುತ್ತಾರೆ ಎನ್ನುತ್ತಾರೆ. ಜನಸಾಮಾನ್ಯರ ಜಾಗೃತಿ, ಸರ್ಕಾರದ ಜವಾಬ್ಧಾರಿ, ಜನರ ಸೇವಾ ಮನೋಭಾವ ಎಲ್ಲವೂ ಪರೀಕ್ಷೆಗೆ ಒಳಪಡುತ್ತಿರುವ ಸಮಯವಿದು. ಕರೋನಾ ಸಮಾಜದ ಸತ್ವ ಪರೀಕ್ಷೆ ಮಾಡುತ್ತಿದೆ. ಇದನ್ನು ಎಲ್ಲರೂ ನೋಡುತಿದ್ದಾರೆಮತ್ತು ಎಲ್ಲರಿಗೂ ಅರ್ಥವಾಗುತ್ತದೆ ಈ ಸ್ಥಿತಿಯಲ್ಲಿ ದೇವರಿಗೆ ಬೇಡಿಕೊಳ್ಳುವುದೊಂದೇ ನಮಗಿರುವ ಮಾರ್ಗ ಎಂದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮಿನಿಕರ್ನಾಟಕ ಕ್ರೀಡಾಕೂಟದಲ್ಲಿ ಅಹನಾ ಹೆಗಡೆ ಪ್ರಥಮ

ಸಿದ್ದಾಪುರ, ತಾಲೂಕಿನ ಹೊಸಚಿಗುರು ಅಹನಾಹೆಗಡೆ ಗುಂಜಗೋಡು ಬೆಂಗಳೂರಿನ ಮಿನಿಕರ್ನಾಟಕಕ್ರೀಡಾಕೂಟದಲ್ಲಿ ಟೇಕ್ವಾಂಡೋ ದಲ್ಲಿ ಮೊದಲ ಸ್ಥಾನ ಪಡೆದು ಉತ್ತರ ಕನ್ನಡ ಜಿಲ್ಲೆಗೆ ಹೆಸರು ತಂದಿದ್ದಾಳೆ. ಸಿದ್ದಾಪುರದ...

KOLSIRSI VSS….ಆಡಳಿತಮಂಡಳಿ & ಸಿಬ್ಬಂದಿ ಗಳ ವಿರುದ್ಧ ಪೊಲೀಸ್ ದೂರು

ಸಿದ್ದಾಪುರ ಕೋಲಸಿರ್ಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಜಮಾಸು ೨೦ ಕೋಟಿ ಅವ್ಯವಹಾರದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು ನಕಲಿ ಖಾತೆ...

ಮುಂದುವರಿದ ನಾಮಧಾರಿ ಸಂಘರ್ಷ! ಸದಸ್ಯತ್ವಕ್ಕಾಗಿ ಹೋರಾಟ?!

ಸದಸ್ಯತ್ವ,ನಾಯಕತ್ವಗಳ ಬೇಡಿಕೆ, ಮೇಲಾಟದ ಸಿದ್ದಾಪುರನಾಮಧಾರಿ ಅಭಿವೃದ್ಧಿ ಸಂಘದ ಸಂಘರ್ಷ ಪರಸ್ಪರಪೊಲೀಸ್ ದೂರಿನವರೆಗೆ ಮುಂದುವರಿದಿದೆ. ಇತ್ತೀಚೆಗೆ ನಡೆದ ಸಂಘದ ಮುಂದುವರಿದ ಸಭೆಯಲ್ಲಿ ಕೂಡಾ ಆಹ್ವಾನಿತರಲ್ಲದವರು ಹೊರಗೆ...

ಸಂಘ- ಸಮಾಜದ ಹಿತಾಸಕ್ತಿಗೆ ಹೊರಗಿನಿಂದ ಅಡ್ಡಿ # ನಾಮಧಾರಿ ಅಭಿವೃದ್ಧಿ ಸಂಘದ ವಾರ್ಷಿಕ ಸಭೆ ಸಂಪನ್ನ#

ಸಿದ್ದಾಪುರ , ನ.೦೪- ಆಗಬೇಕಾದಕೆಲಸ ಬಿಟ್ಟು ಕೆಲವು ಚಿಕ್ಕ- ಪುಟ್ಟ ತೊಂದರೆ ಮಾಡುವುದರಿಂದ ಸಂಘ, ಸಮಾಜಕ್ಕೆ ಗೌರವ ತರಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು...

ಸಾಲಭಾದೆಗೆ ರೈತನ ಆತ್ಮ# ಹತ್ಯೆ#

ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದದುರ್ಘಟನೆ ಸಿದ್ದಾಪುರಕೋಲಶಿರಸಿ ಯಲ್ಲಿ ನಡೆದಿದೆ. ಮೃತ ಈಶ್ವರ ಹಾಲಾ ನಾಯ್ಕ ಕೃಷಿ- ಕೂಲಿಮಾಡಿಕೊಂಡಿದ್ದು ಪಿತ್ರಾರ್ಜಿತ ಆಸ್ತಿ ಇದ್ದರೂ ಅವರ...

Latest Posts

ಮಿನಿಕರ್ನಾಟಕ ಕ್ರೀಡಾಕೂಟದಲ್ಲಿ ಅಹನಾ ಹೆಗಡೆ ಪ್ರಥಮ

ಸಿದ್ದಾಪುರ, ತಾಲೂಕಿನ ಹೊಸಚಿಗುರು ಅಹನಾಹೆಗಡೆ ಗುಂಜಗೋಡು ಬೆಂಗಳೂರಿನ ಮಿನಿಕರ್ನಾಟಕಕ್ರೀಡಾಕೂಟದಲ್ಲಿ ಟೇಕ್ವಾಂಡೋ ದಲ್ಲಿ ಮೊದಲ ಸ್ಥಾನ ಪಡೆದು ಉತ್ತರ ಕನ್ನಡ ಜಿಲ್ಲೆಗೆ ಹೆಸರು ತಂದಿದ್ದಾಳೆ. ಸಿದ್ದಾಪುರದ ಅಡಿಕೆ ವರ್ತಕ ಪ್ರಕಾಶ ಹೆಗಡೆ ಕುಟುಂಬದ ಅಹನಾ ಅಲಕಾ & ಹರ್ಷ ಹೆಗಡೆಯವರ ಮಗಳಾಗಿದ್ದು ಸೈಕ್ಲಿಂಗ್, ಟೇಕ್ವಾಂಡೋ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಬೆಳೆಯುವ ಸಿರಿ...

Recommended For You

About the Author: Kanneshwar Naik

Leave a Reply

Your email address will not be published. Required fields are marked *