

ಕಾಶ್ಮೀರದ ವಿಶೇಶ ಸ್ಥಾನಮಾನ ರದ್ಧತಿ ಮತ್ತು ಒಂದೇ ದೇಶ, ಒಂದೇ ಸಂವಿಧಾನ ಅಭಿಯಾನದ ಹಿಂದೆ ಬಿ.ಜೆ.ಪಿ.ಗೆ ರಾಜಕೀಯ ಉದ್ಧೇಶವಿಲ್ಲ ಬದಲಾಗಿ ಪಕ್ಷ,ಸಂಘದ ಧ್ಯೇಯದ ಉದ್ಧೇಶವಿದೆ ಎಂದು ಬಿ.ಜೆ.ಪಿ. ಪ್ರತಿಪಾದಿಸಿದೆ.
ಇಂದು ಇಲ್ಲಿಯ ಲಯನ್ಸ್ ಬಾಲಭವನದಲ್ಲಿ ನಡೆದ ರಾಷ್ಟ್ರೀಯ ಏಕತಾ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಈ ಅಭಿಯಾನದ ಜಿಲ್ಲಾ ಸಂಚಾಲಕ,ಮಾಜಿ ಶಾಸಕ ಸುನಿಲ್ ಹೆಗಡೆ ಮಾಧ್ಯಮಗಳು, ವಿರೋಧಿಗಳು, ಪ್ರತಿಪಕ್ಷಗಳು ಬಿ.ಜೆ.ಪಿ.ಯ ಏಕತಾ ಅಭಿಯಾನವನ್ನು ರಾಜಕೀಯ ಅಭಿಯಾನ, ರಾಜಕೀಯ ಲಾಭದ ತಂತ್ರ ಎಂದು ದೂರುತ್ತಿವೆ. ಆದರೆ ಈ ಅಭಿಯಾನ ಪಕ್ಷ ಮತ್ತು ಜನಸಂಘದ ಧ್ಯೇಯದ ಅಭಿಯಾನ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಜೆ.ಪಿ. ಜಿಲ್ಲಾ ವಕ್ತಾರ ರವಿಹೆಗಡೆ ಹೂವಿನಮನೆ ಬುದ್ಧಿಜೀವಿಗಳು, ಕೆಲವು ಹಿತಾಸಕ್ತಿಗಳಿಗೆ ಹಿಂದಿನ ಅವಧಿಯ ಎನ್.ಡಿ.ಎ.ಸರ್ಕಾರ ದಿಂದ ಪ್ರಾರಂಭವಾದ ಅಸಹನೆ ಈಗಲೂ ಮುಂದುವರಿದಿದೆ. ಹಿಂದೆ ಅವಲೋಕನ ನಡೆಸಿದ ಪಕ್ಷ ಈಗ ಏಕರೂಪ ನಾಗರಿಕ ಸಂಹಿತೆಗೆ ಅವಶ್ಯವಿರುವ ಒಂದೇ ದೇಶ ಒಂದೇ ಸಂವಿಧಾನದ ಪ್ರಣಾಳಿಕೆಯಂತೆ ಕೆಲಸ ಮಾಡುತ್ತಿದೆ ಎಂದರು.
ಹಿಂದೆ ದೇಶವನ್ನಾಳಿದ ದುರ್ಭಲ ನಾಯಕತ್ವದಿಂದ ಅಖಂಡ ಭಾರತ ದೇಶದ ಕನಸು ನನಸಾಗಿಲ್ಲ ಈಗ ದೇಶಕ್ಕೆ ವಿಶ್ವಗುರುವಿನ ಗೌರವ ದೊರೆಯುತ್ತಿದೆ ಎಂದು ಸಮರ್ಥಿಸಿದರು.
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ವಿ.ಎಸ್.ಪಾಟೀಲ್
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮುಂಡಗೋಡಿನ ಬಿ.ಜೆ.ಪಿ.ಮುಖಂಡ ಮತ್ತು ಮಾಜಿ ಶಾಸಕ ವಿ.ಎಸ್ ಪಾಟೀಲ್ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಸದ್ಯದಲ್ಲಿ ಚುನಾವಣೆ ನಡೆಯಲಿರುವ ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಹಿಂದೆ ಈ ವಾ.ಕ.ರ.ಸಾ.ಸಂಸ್ಥೆಯ ಅಧ್ಯಕ್ಷರಾಗಿದ್ದರು. ಈಗಿನ ಅಧ್ಯಕ್ಷ ವಿ.ಎಸ್.ಪಾಟೀಲ್ ಹಿಂದೆ ಯಲ್ಲಾಪುರ ಕ್ಷೇತ್ರದ ಶಾಸಕರಾಗಿದ್ದರು. ಈಗಲೂ ಅವರು ಉಪಚುನಾವಣೆಯ ಬಿ.ಜೆ.ಪಿ. ಟಿಕೇಟ್ ನ ಪ್ರಬಲ ಆಕಾಂಕ್ಷಿಯಾಗಿದ್ದು ಬಿ.ಜೆ.ಪಿ.ಅನರ್ಹಶಾಸಕ ಹೆಬ್ಬಾರ್ ಅಥವಾ ಅವರ ಕುಟುಂಬಸ್ಥರಿಗೆ ಟಿಕೇಟ್ ನೀಡಿದರೆ ಪಾಟೀಲ್ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗುತಿತ್ತು. ಬಿ.ಜೆ.ಪಿ. ವಿ.ಎಸ್.ಪಾಟೀಲ್ ರನ್ನು ನಿಗಮದ ಅಧ್ಯಕ್ಷರನ್ನಾಗಿಸುವ ಮೂಲಕ ಮಾಜಿ ಶಾಸಕರ ಅಸಮಾಧಾನಕ್ಕೆ ತಣ್ಣಿರು ಎರಚಿದೆ ಎನ್ನಲಾಗುತ್ತಿದೆ.ಪಾಟೀಲ್‍ರೊಂದಿಗೆ ಇತರ 8 ಜನ ಬಿ.ಜೆ.ಪಿ. ಪ್ರಮುಖರನ್ನು ನಾನಾ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇಮಕಾತಿ ಆದೇಶ ಮಾಡಿದ್ದಾರೆ.

