ಒಂದೇ ದೇಶ, ಒಂದೇ ಸಂವಿಧಾನ ಪಕ್ಷ,ಜನಸಂಘದ ಧ್ಯೇಯ


ಕಾಶ್ಮೀರದ ವಿಶೇಶ ಸ್ಥಾನಮಾನ ರದ್ಧತಿ ಮತ್ತು ಒಂದೇ ದೇಶ, ಒಂದೇ ಸಂವಿಧಾನ ಅಭಿಯಾನದ ಹಿಂದೆ ಬಿ.ಜೆ.ಪಿ.ಗೆ ರಾಜಕೀಯ ಉದ್ಧೇಶವಿಲ್ಲ ಬದಲಾಗಿ ಪಕ್ಷ,ಸಂಘದ ಧ್ಯೇಯದ ಉದ್ಧೇಶವಿದೆ ಎಂದು ಬಿ.ಜೆ.ಪಿ. ಪ್ರತಿಪಾದಿಸಿದೆ.
ಇಂದು ಇಲ್ಲಿಯ ಲಯನ್ಸ್ ಬಾಲಭವನದಲ್ಲಿ ನಡೆದ ರಾಷ್ಟ್ರೀಯ ಏಕತಾ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಈ ಅಭಿಯಾನದ ಜಿಲ್ಲಾ ಸಂಚಾಲಕ,ಮಾಜಿ ಶಾಸಕ ಸುನಿಲ್ ಹೆಗಡೆ ಮಾಧ್ಯಮಗಳು, ವಿರೋಧಿಗಳು, ಪ್ರತಿಪಕ್ಷಗಳು ಬಿ.ಜೆ.ಪಿ.ಯ ಏಕತಾ ಅಭಿಯಾನವನ್ನು ರಾಜಕೀಯ ಅಭಿಯಾನ, ರಾಜಕೀಯ ಲಾಭದ ತಂತ್ರ ಎಂದು ದೂರುತ್ತಿವೆ. ಆದರೆ ಈ ಅಭಿಯಾನ ಪಕ್ಷ ಮತ್ತು ಜನಸಂಘದ ಧ್ಯೇಯದ ಅಭಿಯಾನ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿ.ಜೆ.ಪಿ. ಜಿಲ್ಲಾ ವಕ್ತಾರ ರವಿಹೆಗಡೆ ಹೂವಿನಮನೆ ಬುದ್ಧಿಜೀವಿಗಳು, ಕೆಲವು ಹಿತಾಸಕ್ತಿಗಳಿಗೆ ಹಿಂದಿನ ಅವಧಿಯ ಎನ್.ಡಿ.ಎ.ಸರ್ಕಾರ ದಿಂದ ಪ್ರಾರಂಭವಾದ ಅಸಹನೆ ಈಗಲೂ ಮುಂದುವರಿದಿದೆ. ಹಿಂದೆ ಅವಲೋಕನ ನಡೆಸಿದ ಪಕ್ಷ ಈಗ ಏಕರೂಪ ನಾಗರಿಕ ಸಂಹಿತೆಗೆ ಅವಶ್ಯವಿರುವ ಒಂದೇ ದೇಶ ಒಂದೇ ಸಂವಿಧಾನದ ಪ್ರಣಾಳಿಕೆಯಂತೆ ಕೆಲಸ ಮಾಡುತ್ತಿದೆ ಎಂದರು.
ಹಿಂದೆ ದೇಶವನ್ನಾಳಿದ ದುರ್ಭಲ ನಾಯಕತ್ವದಿಂದ ಅಖಂಡ ಭಾರತ ದೇಶದ ಕನಸು ನನಸಾಗಿಲ್ಲ ಈಗ ದೇಶಕ್ಕೆ ವಿಶ್ವಗುರುವಿನ ಗೌರವ ದೊರೆಯುತ್ತಿದೆ ಎಂದು ಸಮರ್ಥಿಸಿದರು.

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ವಿ.ಎಸ್.ಪಾಟೀಲ್
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮುಂಡಗೋಡಿನ ಬಿ.ಜೆ.ಪಿ.ಮುಖಂಡ ಮತ್ತು ಮಾಜಿ ಶಾಸಕ ವಿ.ಎಸ್ ಪಾಟೀಲ್ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಸದ್ಯದಲ್ಲಿ ಚುನಾವಣೆ ನಡೆಯಲಿರುವ ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಹಿಂದೆ ಈ ವಾ.ಕ.ರ.ಸಾ.ಸಂಸ್ಥೆಯ ಅಧ್ಯಕ್ಷರಾಗಿದ್ದರು. ಈಗಿನ ಅಧ್ಯಕ್ಷ ವಿ.ಎಸ್.ಪಾಟೀಲ್ ಹಿಂದೆ ಯಲ್ಲಾಪುರ ಕ್ಷೇತ್ರದ ಶಾಸಕರಾಗಿದ್ದರು. ಈಗಲೂ ಅವರು ಉಪಚುನಾವಣೆಯ ಬಿ.ಜೆ.ಪಿ. ಟಿಕೇಟ್ ನ ಪ್ರಬಲ ಆಕಾಂಕ್ಷಿಯಾಗಿದ್ದು ಬಿ.ಜೆ.ಪಿ.ಅನರ್ಹಶಾಸಕ ಹೆಬ್ಬಾರ್ ಅಥವಾ ಅವರ ಕುಟುಂಬಸ್ಥರಿಗೆ ಟಿಕೇಟ್ ನೀಡಿದರೆ ಪಾಟೀಲ್ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗುತಿತ್ತು. ಬಿ.ಜೆ.ಪಿ. ವಿ.ಎಸ್.ಪಾಟೀಲ್ ರನ್ನು ನಿಗಮದ ಅಧ್ಯಕ್ಷರನ್ನಾಗಿಸುವ ಮೂಲಕ ಮಾಜಿ ಶಾಸಕರ ಅಸಮಾಧಾನಕ್ಕೆ ತಣ್ಣಿರು ಎರಚಿದೆ ಎನ್ನಲಾಗುತ್ತಿದೆ.ಪಾಟೀಲ್‍ರೊಂದಿಗೆ ಇತರ 8 ಜನ ಬಿ.ಜೆ.ಪಿ. ಪ್ರಮುಖರನ್ನು ನಾನಾ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇಮಕಾತಿ ಆದೇಶ ಮಾಡಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *