

ಮಲೆನಾಡಿನ ವಿಶಿಷ್ಟ ಆಚರಣೆ ಭೂಮಿಹುಣ್ಣಿಮೆಗಾಗಿ ರೈತರ ತಯಾರಿ ನಡೆದಿದೆ.
ಮಲೆನಾಡಿನ ರೈತರಿಗೆ ಭೂಮಿಹುಣ್ಣಿಮೆಯೆಂದರೆ ಭೂಮಿಯ ಬಯಕೆಯ ಹಬ್ಬ. ಭೂಮಿಯಲ್ಲಿ ಬೆಳೆದ ಎಲ್ಲಾ ವಸ್ತುಗಳನ್ನು ಬೇಯಿಸಿ ಭೂಮಿಗೆ ನೀಡುವ ಈ ಹಬ್ಬಕ್ಕಾಗಿ ಭೂಮಣಿಬುಟ್ಟಿ ತಯಾರಿಸುವ ಹೆಂಗಳೆಯರು ಹಬ್ಬದ ದಿನದ ಖಾದ್ಯಗಳನ್ನು ಇದರಲ್ಲಿ ಕೊಂಡೊಯ್ಯಲು ಚಿತ್ತಾರದಿಂದ ಅಲಂಕರಿಸುವುದು ರೂಢಿ.
ಶಿರಸಿ-ಸಿದ್ಧಾಪುರ, ಹೊಸನಗರ, ಸಾಗರ,ಸೊರಬಗಳ ಮೂಲನಿವಾಸಿಗಳು ಬಹುಸಂಭ್ರಮದಿಂದ ಆಚರಿಸುವ ಭೂಮಣಿ ಹಬ್ಬ.13 ರ ರ ರವಿವಾರ ಇರುವುದ (ಆಚರಣೆ)ರಿಂದ ರೈತರು ಭೂಮಣಿಹಬ್ಬಕ್ಕಾಗಿ ಭೂಮಣಿ ಬುಟ್ಟಿ ಅಲಂಕಾರ ಮತ್ತು ಪದಾರ್ಥಗಳ ಖರೀದಿ,
ಸಂಗ್ರಹಿಸುವಿಕೆಯಲ್ಲಿ ತೊಡಗಿದ್ದಾರೆ.
ಸಿದ್ಧಾಪುರದಲ್ಲಿ ಪ್ರತಿ ಬುಧವಾರದ ವಾರದ ಸಂತೆಯ ನಂತರ ಈ ಶುಕ್ರವಾರ ಮತ್ತು ಶನಿವಾರ ವಿಶೇಶ ಸಂತೆ ನಡೆದಿರುವುದು ಭೂಮಿ ಹುಣ್ಣಿಮೆಯ ಮಹತ್ವ, ಪ್ರಾಮುಖ್ಯತೆಗೆ ಸಾಕ್ಷಿ.
ಕಾಗೇರಿಗೆ ಕ್ಯಾರೆ ಎನ್ನದೆ ಮನೆ ಕಿತ್ತೆಸೆದ ಅಧಿಕಾರಿಗಳು
ಅನಧೀಕೃತ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿದ್ದಾರೆ ಎನ್ನಲಾದ ರೈತರೊಬ್ಬರ ಮನೆ ಅಡಿಪಾಯವನ್ನು ಕಿತ್ತೆಸೆದ ಪ್ರಕರಣ ಸಿದ್ಧಾಪುರದ ಬಿಳಗಿ ಕಳೂರು ಮುಂಡಗೆಮನೆಯಲ್ಲಿ ನಡೆದಿದ್ದು,ಅರಣ್ಯ ಇಲಾಖೆಯ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕಳೂರು ಮುಂಡಗೆಮನೆಯ ಪುಟ್ಟಾ ಗಿರಿಯಾ ನಾಯ್ಕ ಜಿ.ಪಿ.ಎಸ್. ಆದ ಪ್ರದೇಶ ಬಿಟ್ಟು ಬೇರೆ ಪ್ರದೇಶದಲ್ಲಿ ಮನೆ ನಿರ್ಮಾಣ ಪ್ರಾರಂಭಿಸಿದ್ದರು ಈ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ವಿರೋಧವ್ಯಕ್ತಪಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಅಡಿಪಾಯ ಉರುಳಿಸುವ ಮೂಲಕ ಸಾರ್ವಜನಿಕರ ಅಕ್ರೋಶಕ್ಕೆ ಗುರಿಯಾಗಿದ್ದಾರೆ.
ಜಿ.ಪಿ.ಎಸ್. ಆದ ಪ್ರದೇಶ ನದಿ ದಂಡೆಯ ಮುಳುಗಡೆ ಪ್ರದೇಶವಾಗಿದ್ದರಿಂದ ಪುಟ್ಟಾ ನಾಯ್ಕ ಜಾಗ ಬದಲಿಸಿ ಮನೆ ನಿರ್ಮಾಣ ಪ್ರಾರಂಭಿಸಿದ್ದರು. ಈ ಬಗ್ಗೆ ರಾಜ್ಯ ವಿಧಾನಸಭಾ ಅಧ್ಯಕ್ಷರ ಕಛೇರಿಯಿಂದ ಬಂದ ಕರೆಯನ್ನು ಧಿಕ್ಕರಿಸಿ ಅಧಿಕಾರಿಗಳು ನಿರ್ಮಾಣ ಹಂತದ ಮನೆ ಕಾಮಗಾರಿ ಹಾಳುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.


