ಗೌರಮ್ಮನ ಹಬ್ಬ..ಭಾಸ್ಕರ್ ಅಣ್ಣ‌, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ…! ವಿಠ್ಠಲ್‌ ಶೆಟ್ಟಿ ಇತ್ಯಾದಿ….. gouri habba part-01

ಕೋಲುವಿದ್ಯೆ ಪ್ರವೀಣ ಸೈನಿಕರ ನೆಲೆಯಾಗಿದ್ದ ಕೋಲಶಿರ್ಸಿಯಲ್ಲಿ ದೇವರ ಕೆರೆ, ಗ್ರಾಮದೇವರು, ಕೆಲವು ಕುಟುಂಬಗಳ ವೀರಭದ್ರ, ಕುಮಾರ ರಾಮ ರಾಮನಾಗಿ ನಂತರ ಗಾಮನಾಗಿ ನೆಲೆನಿಂತ ಇತಿಹಾಸ. ಹುಲಿಹೊಡೆಯುವ ಕೆರೆಜ್ಜ, ಸ್ವಾತಂತ್ರ್ಯ ಹೋರಾಟದ ಗೌಡರು, ಈರಾ ಮಾರ್ಯಾ ಕತ್ತಿ, ಇವರಿಗೆ ಎದುರಾಗಿ ಅಂದಿನ ಕಾಂಗ್ರೆಸ್‌ ನ ಕನ್ನಣ್ಣ, ನಂತರ ಬಂಗಾರಪ್ಪ ಗಾಳಿ, ಹೆಗಡೆಯವರ ವಿರೋಧ! ಹೀಗೆ ಕೋಲಶಿರ್ಸಿಗೆ ಅದರದ್ದೇ ಆದ ವಿಶಿಷ್ಟ ಹಿನ್ನೆಲೆ, ಚರಿತ್ರೆ,ಇತಿಹಾಸಗಳಿವೆ.

ಮಳೆ ಬಿದ್ದು ಶಾಲೆಗೆ ರಜೆಕೊಟ್ಟು ಶಾಲೆಯ ಹುಡುಗರು ಹೊಡಸಲು ಸೇರಿದ್ದಾಗ ಎಲ್ಲಾದರೂ ಮೈಕ್‌ ನಲ್ಲಿ ಗಜಮುಖನೇ… ಗಣಪತಿಯೆ ಎಂದು ಕೇಳಿದಾಗ ನಿಮುರುತಿದ್ದವು ಪಡ್ಡೆಗಳ ಕಿವಿಗಳು. ಇದು ಚೌತಿಯ ಆಗಮನದ ಮುನ್ಸೂಚನೆ.

ವಡೆ, ಚಕ್ಕುಲಿ, ಕರ್ಜಿಕಾಯಿ, ಹಸಿಮೀನ ಸಾರು, ಹೊಸಬಟ್ಟೆ ಹೀಗೆ ನೆನಪಿನ ಮೆರವಣಿಗೆ ಮಾಸುವುದರೊಳಗೆ ಬಂದೇ ಬಿಡುತಿತ್ತು ಚೌತಿ!

ಅಪ್ಪ, ಅಣ್ಣ ಚಿಕ್ಕಪ್ಪ ಸುತ್ತೂರು ಸೈಕಲ್‌ ನಲ್ಲಿ ಸುತ್ತಾಡಿ ಮನೆಗೆ ಬಂದು ಟ್ರಿಣ್‌ ಎಂದು ಬೆಲ್‌ ಬಾರಿಸಿದಾಗ ಹತ್ತೂರ ಕಥೆಗಳ ಜಾನಪದ!

ಈಗ ಈ ಸಂಬ್ರಮ ಮರೆಯಾಗುತ್ತಿದೆ. ಮನೆಯ ಹೆಣ್ಮಕ್ಕಳು ತಪ್ಪದೇ ಚೌತಿ ಹಬ್ಬಕ್ಕೆ ಊರಿಗೆ ಬಂದರೂ ಎಲ್ಲರಿಗೂ ಧಾವಂತ! ಗೌರಿಗೆ ದಿನಕ್ಕೆ ನಾಲ್ಕೈದು ಊಟ ಮಾಡಲುಅದಕ್ಕೆ ಬೇಕಾಗುವ ಕಳಲೆ, ಕೆಸಪ್ಪು,ತುಪ್ಪದ ಅತ್ರಸ ತಯಾರಿಸಲು ಹೆಣಗಾಡುತಿದ್ದ ಜೀವಗಳು ಉಪ್ಪಾಗೆ, ಅರಿಶಿಣಹಳ್ಳು, ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ ಮಾಡಿಸಲು ಪೇಟೆಗೆ ಹೋಗುವುದೇನು? ಎತ್ತಿನ ಗಾಡಿ, ಸೈಕಲ್‌, ಬಹುತೇಕರು ಬಸ್‌ ನಿಂದ ತುಂಬಿದ ಚೀಲ ಹೊತ್ತು ಬಾಗುತ್ತಾ- ಬಳಕುತ್ತಾ ಮನೆ ಸೇರುವುದೇನು? ಗೋಧೂಳಿ ಮುಹೂರ್ತ ಕೇವಲ ದನ- ಎತ್ತುಗಳನ್ನು ಮನೆಗೆ ಸೇರಿಸುತ್ತಿರಲಿಲ್ಲ ಮನೆ ಯಜಮಾನನನ್ನೂ!

ರಾತ್ರಿ ಒಂಬತ್ತಕ್ಕೇ ಕೈ ಕೊಡುತಿದ್ದ ಕರೆಂಟ್‌ ಚೌತಿಯಲ್ಲಿ ಮಾತ್ರ ಅಹೋರಾತ್ರಿ ಊರಿಗೆ ಬೆಳಕು ಹಾಯಿಸುತಿತ್ತು.

ಕೋಲಶಿರ್ಸಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಗಿ ಒಂದೈವತ್ತು ವರ್ಷ ಕಳೆದಿರಬಹುದು… ಅದರ ಆಸು ಪಾಸಿನಲ್ಲಿಯೇ ನಮ್ಮಜ್ಜ ಕನ್ನ ನಾಯ್ಕ, ಬಂಧೀಸರದ ಆನಂದ ಗೌಡರು ಸೇರಿದ ತಂಡ ಊರಿನಲ್ಲಿ ಸೊಸೈಟಿ, ಸಾರ್ವಜನಿಕ ಗಣೇಶೋತ್ಸವಗಳನ್ನೆಲ್ಲಾ ಪ್ರಾರಂಭಿಸಿದ ಚರಿತ್ರೆ ಹೊಸಬರಿಗೆ ತಿಳಿಯದ ಸತ್ಯ.

ನಾವೆಲ್ಲಾ ಸಣ್ಣವರಿದ್ದಾಗ ಸಾರ್ವಜನಿಕ ಗಣೇಶೋತ್ಸವದ ವೇದಿಕೆ ಮೇಲೆ ತಮ್ಮ ಆರಂಗೇಟ್ರಂ ಮಾಡಲು ತವಕಿಸುತಿದ್ದ ಯುವಕ\ ಯುವತಿಯರು ಮೊದಲ ಬಾರಿ ಸಂಪೂರ್ಣ ಸಾರ್ವಜನಿಕ ವೇದಿಕೆ ಏರಿದ ಖುಷಿ ಅನುಭವಿಸುತಿದ್ದರು.

ಊರಿನ ತಳವಾರ ಗಣಪತಣ್ಣ ನಂತರ ಲಕ್ಷಣಣ್ಣ ಆರಿದ್ರ ಮಳೆ ಹಬ್ಬದ ನಂತರ ಮತ್ತೆ ಡಂಗೂರ ಹಿಡಿದು ಗೌರಿ ತರುವ ಮುಹೂರ್ತ ತಿಳಿಸುತಿದ್ದರು. ಶಾಲೆಯ ಯುನಿಫಾರ್ಮ ನಿಂದ ಬೇಸತ್ತ ನಾವೆಲ್ಲಾ ರಂಗಿನ ಹೊಸ ಅಂಗಿ ಕನಸು ಕಾಣುತಿದ್ದೆವು. ಇನ್ನೇನು ಬರಲಿದೆ ಚೌತಿ ಹಬ್ಬ ಎನ್ನುತ್ತಿರುವಾಗಲೇ ಎದುರಾಗುತಿದ್ದ ಗೌರಿ-ಗಣೇಶ ಚತುರ್ಥಿಗೆಪಳಯುಳಿಕೆ, ಮಂಟಪದ ತಯಾರಿಗೆ ಸಭೆಯೇ ನಡೆಯುತಿತ್ತು. ಮಂಟಪ, ಬೆಳಕು, ಡೆಕೋರೇಶನ್‌ ಸ್ಫರ್ಧೆಯಲ್ಲಿ ತೆಂಗಿನ್ಮನೆ ಪರಮೇಶಣ್ಣ, ಧರ್ಮಣ್ಣ,ಕೊಠಾರಿ ಶಿವಾನಂದಣ್ಣರ ತಂಡಗಳೊಂದಿಗೆ ಕನಿಷ್ಟ ನಾಲ್ಕೈದು ಗುಂಪುಗಳು ಆರೋಗ್ಯಕರ ಸ್ಪರ್ಧೆ ನಡೆಸುತಿದ್ದವು.

ಶಾನಭಾಗರ ಗೋಪಾಲಣ್ಣನ ಹೆಂಡತಿಯೊಬ್ಬಳು…. ನ್ಯಾರ್ಸೆ ರವಿಯಣ್ಣನ ತಿಂಗಾಳು ಮುಳುಗಿದವೋ.. ಮರನ್‌ ರಾಜಣ್ಣನ ಕಾಮಿಡಿ-ಹಾಡು ಇವುಗಳೊಂದಿಗೆ ಮತ್ತಷ್ಟು…. ಹೊಸ ಪೋರರಿಗೆ ಮೊದಲು ಇವೆಲ್ಲಾ ಕಿವಿಗೆ ಬಿದ್ದದ್ದೇ ನಮ್ಮೂರ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಲ್ಲಿ.

ತಳವಾರರ ಜಾಗಟೆ ಶಬ್ಧದಂತೆಯೇ ಪ್ರತಿಬಾರಿ ಭಾಸ್ಕರಣ್ಣನ ಉದ್ಘೋಷಣೆ, ಜೊತೆಗೆ ಹಾಡು‌, ಕೊಠಾರಿ ಗೋವಿದಣ್ಣನ ಮೊಡರ್ನ್‌ ಡಾನ್ಸ್, ಕತ್ತಿ ದ್ಯಾವಪ್ಪಣ್ಣನ ಕಾರ್ಯಕ್ರಮ ಇವೆಲ್ಲಾ ಫೇಮಸ್‌ ಆಗಿದ್ದೇ ಚೌತಿ ವೇದಿಕೆಯಲ್ಲಿ…..

ನಮ್ಮೂರ ಚೌತಿಯ ಗೌರಮ್ಮನ ಮೆರವಣಿಗೆ, ಪಟಾಕಿ ಸದ್ದು, ಲಿಲಾವು ಹಿಡಿಯುವ ವೇಳೆ ಮರೆತೇನೆಂದರೂ ಮರೆಯಲಿ ಹ್ಯಾಂಗ ಎನ್ನುವ ಹೆಸರು ವಿಠ್ಠಲ್‌ ಶೆಟ್ಟಿ, ಮುಂಬೈನಿಂದ ಪ್ರತಿವರ್ಷ ಗಣೇಶ ಚೌತಿಗೆ ಊರಿಗೆ ಕಡ್ಡಾಯವಾಗಿ ಪಟಾಕಿ ಹೊರೆಯೊಂದಿಗೆ ಬರುತಿದ್ದ ವಿಠ್ಠಲ್‌ ಶೆಟ್ಟರು ಆಗಿನ ಕಾಲದಲ್ಲೇ ಸಾವಿರಾರು ರೂಪಾಯಿಗಳ ದೇವರ ಫಲಾವಳಿ ಲಿಲಾವು ಹಿಡಿದು ಸಾರ್ವಜನಿಕರಿಗೆ ಬೆರಗು ಮೂಡಿಸುತಿದ್ದರು. ಲಿಲಾವಿನ ಪ್ರತಿಶತ ಹತ್ತರಷ್ಟು ವಸ್ತ್ರ-ವಸ್ತು ಖರೀದಿಸುತಿದ್ದ ವಿಠ್ಠಲ್‌ ಶೆಟ್ಟರು ನಮ್ಮಂಥವರ ಸ್ಮೃತಿ ಪಟಲ ಸೇರಿದ್ದರೆ ಅವರ ಪಟಾಕಿ ಅವಾಜು, ಹಬ್ಬದ ಅದ್ದೂರಿ ತನ ಲೆಕ್ಕ ಹಾಕಿ….. (ಸಶೇಷ..)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *