

ಭಾಷಾ ಪ್ರಯೋಗಾಲಯ ಉದ್ಘಾಟನೆ- ಸದ್ಭಾವನಾ ಪ್ರಶಸ್ತಿ ಪ್ರದಾನ
ಕಳೆದ 25 ವರ್ಷಗಳಿಂದ ವಿಕಲಚೇತನÀ, ಮುಖ್ಯವಾಗಿ ಅಂಧ ವಿದ್ಯಾರ್ಥಿಗಳ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿಸಿ ಅಗತ್ಯವಾದ ಶಿಕ್ಷಣ ನೀಡುತ್ತಿರುವ ಆಶಾ ಕಿರಣ ಟ್ರಸ್ಟಿನ ಕಾರ್ಯ ಶಾಘ್ಲನೀಯ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ಲಾಘಿಸಿದರು.
ಅವರು ಇಲ್ಲಿನ ಆಶಾ ಕಿರಣ ಟ್ರಸ್ಟ್‍ನ ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆಯಲ್ಲಿ ಡಾ| ಎ.ಪಿ.ಜೆ.ಅಬ್ದುಲ್ ಕಲಾಂ ಜನ್ಮದಿನದಂದು ನೂತನವಾಗಿ ಆರಂಭಿಸಿದ ಭಾಷಾ ಪ್ರಯೋಗಾಲಯ ಉದ್ಘಾಟಿಸಿ, ಸಾಧಕರಿಗೆ ಸದ್ಭಾವನಾ ಪ್ರಶಸ್ತಿ ಪುರಸ್ಕರಿಸಿ ಮಾತನಾಡಿದರು.
ಶಾರೀರಿಕವಾಗಿ ಉತ್ತಮವಾಗಿರುವವರಿಗಿಂತ ವಿಕಲಚೇತನರು ಹೆಚ್ಚಿನ ಸಾಧನೆ ಮಾಡುತ್ತಾರೆ. ಸಮಾಜ ವಿಕಲಚೇತನರನ್ನು ನೋಡುವ ದೃಷ್ಟಿಕೋನ ಭಿನ್ನವಾದದ್ದು. ಅವರಿಗೆ ಕನಿಕರದ ಮಾತಿಗಿಂತ ಅವರ ಸಾಧನೆ ಗುರುತಿಸಿ ಪ್ರೋತ್ಸಾಹಿಸುವದು ಅಗತ್ಯ. ಅವರಿಗೆ ಸೂಕ್ತ ಶಿಕ್ಷಣ, ಸಂಸ್ಕಾರ ನೀಡಿದಾಗ ಅವರು ಇನ್ನಷ್ಟು ಸಾಧನೆ ಮಾಡಲು, ರಾಷ್ಟ್ರದ ಆಸ್ತಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಆಶಾಕಿರಣ ಟ್ರಸ್ಟ ಹಲವಾರು ದಾನಿಗಳ, ಸಂಸ್ಥೆಗಳ ನೆರವಿನೊಂದಿಗೆ ಉತ್ತಮ ಕಾರ್ಯ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಕಾರ್ಯಗಳನ್ನು ನಡೆಸಲಿ.ನಮ್ಮೆಲ್ಲರ ಸಹಾಯ, ಸಹಕಾರ ಸದಾ ಇರುತ್ತದೆ ಎಂದರು.
ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕಿ ಕೆ.ಲೀಲಾವತಿ ಮಾತನಾಡಿ ಅಬ್ದುಲ್ ಕಲಾಂ ಕೇವಲ ವಿಜ್ಞಾನಿಯಾಗಿರದೇ ಸರಳ ಬದುಕಿನ ಮೂಲಕ ಎಲ್ಲರಿಗೆ ಮಾದರಿಯಾಗಿದ್ದರು.
ಮನುಷ್ಯ ಹೇಗೆ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟವರು. ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶಕರಾಗಿದ್ದರು. ಪ್ರತಿಭೆ ಯಾರ ಸೊತ್ತಲ್ಲ. ಎಲ್ಲರಲ್ಲೂ ಇರುತ್ತದೆ. ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವದು ಮುಖ್ಯ. ಆಶಾಕಿರಣ ಟ್ರಸ್ಟ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಅದು ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ, ವಿದ್ಯಾಪೋಷಕ ಕೃಷ್ಣಮೂರ್ತಿ ಭಟ್ಟ ಹೊನ್ನಾವರ ರಿಗೆ ಆಶಾಕಿರಣ ಟ್ರಸ್À್ಟ ಕೊಡಮಾಡುವ ಸದ್ಭಾವನಾ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ವೇದಿಕೆಯಲ್ಲಿ ಜಿಪಂ ಸದಸ್ಯರಾದ ಎಂ.ಜಿ.ಹೆಗಡೆ, ನಾಗರಾಜ ನಾಯ್ಕ, ತಹಸೀಲದಾರ ಗೀತಾ ಸಿ.ಜಿ., ಮುಂತಾದವರಿದ್ದರು.
ಅಂಧರ ಶಾಲೆಯ ವಿದ್ಯಾರ್ಥಿನಿ ರೋಜಾ ಸ್ವಾಗತಿಸಿದಳು. ಟ್ರಸ್ಟಿನ ಉಪಾಧ್ಯಕ್ಷ ಸಿ.ಎಸ್.ಗೌಡರ್ ಪ್ರಾಸ್ತಾವಿಕ ಮಾತನಾಡಿದರು. ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು.
