

ಬಡವರು, ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಎಲ್ಲೆಡೆ ಬಡವರ ಬಂಧುವಿನ ಜಯಂತಿ ಆಚರಣೆ
ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪನವರ 87 ನೇ ಹುಟ್ಟುಹಬ್ಬದ ಅಂಗವಾಗಿ ಇಂದು ರಾಜ್ಯಾದ್ಯಂತ ಬಂಗಾರಪ್ಪ ಜಯಂತ್ಯುತ್ಸವ ಆಚರಿಸಲಾಯಿತು.
ಸೊರಬದಲ್ಲಿ ಅವರ ಸಮಾಧಿ ಬಳಿ ನಡೆದ ಸರಳ ಸಮಾರಂಭದಲ್ಲಿ ಪಾಲ್ಗೊಂಡ ಅವರ ಹಿತೈಶಿಗಳು, ಅಭಿಮಾನಿಗಳು ಧಾರ್ಮಿಕ ವಿಧಿಗಳ ಮೂಲಕ ಜನ್ಮದಿನ ಆಚರಿಸಿದರು. ಶಿರಸಿ ಮತ್ತು ಸಿದ್ದಾಪುರ ತಾಲೂಕುಗಳು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ದಲಿತರು, ಧಮನಿತರು, ವಯೋವೃದ್ಧರುಗಳಿಗೆ ಹಣ್ಣು ಹಾಲು ವಿತರಿಸುವ ಮೂಲಕ ಬಂಗಾರಪ್ಪ ದಿನಾಚರಣೆ ನಡೆಸಲಾಯಿತು.
ಶಿರಸಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪಂಡಿತ್ ಸಾರ್ವಜನಿಕ ಆಸ್ಫತ್ರೆಯಲ್ಲಿ ಹಣ್ಣು-ಹಾಲು ವಿತರಿಸಿ ಬಂಗಾರಪ್ಪ ಹುಟ್ಟುಹಬ್ಬ ಆಚರಿಸಿದರೆ, ನಗರದ ಸುಯೋಗಾಶ್ರಮದಲ್ಲಿ ಬಂಗಾರಪ್ಪ ಅಭಿಮಾನಿಗಳು ವಯೋವೃದ್ಧರಿಗೆ ಹಣ್ಣು ಮತ್ತು ಸಿಹಿ ವಿತರಿಸುವ ಮೂಲಕ ಬಂಗಾರಪ್ಪ ಜಯಂತಿ ಆಚರಿಸಿದರು.
ಸಿದ್ಧಾಪುರದ ಮುಗದೂರಿನ ಪ್ರಚಲಿತ ಆಶ್ರಮದಲ್ಲಿ ಹಿರಿಯರಿಗೆ ಊಟೋಪಚಾರ ಮಾಡುವ ಮೂಲಕ ಬಂಗಾರಪ್ಪ ಜಯಂತಿ ನಡೆಸಲಾಯಿತು.
ಬಂಗಾರಪ್ಪ 87 ಎಲ್ಲೆಡೆ ಆಚರಣೆ
ಸಿದ್ದಾಪುರ ತಾಲೂಕು ಸೇರಿದಂತೆ ರಾಜ್ಯದ ಕೆಲವೆಡೆ ಇಂದು ಬಂಗಾರಪ್ಪನವರ ಹುಟ್ಟುಹಬ್ಬದ ನಿಮಿತ್ತ ನಾನಾ ಕಾರ್ಯಕ್ರಮಗಳು ನಡೆದವು.
ಸೊರಬದ ಸಾರೆಕೊಪ್ಪ ಬಂಗಾರಪ್ಪ ಕುಬಟೂರಿನಲ್ಲಿ ಹುಟ್ಟಿ 90 ರ ದಶಕದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗೆ ಬಂಗಾರಪ್ಪ ಸವೆಸಿದ ಹಾದಿ ಕಠಿಣ. ಸಂಘಟನೆ,ಹೋರಾಟ, ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಬಂಗಾರಪ್ಪ ಬದುಕಿದ್ದರೆ ಅ.26 ಕ್ಕೆ 87ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತಿದ್ದರು.
ಬಂಗಾರಪ್ಪ ಭೌತಿಕವಾಗಿ ಇಲ್ಲದಿದ್ದರೂ ಅವರ ನೆನಪಿನಲ್ಲಿ ಸಾಗರ ಸೊರಬ, ಶಿರಸಿ-ಸಿದ್ದಾಪುರ ಸೇರಿದಂತೆ ಅನೇಕ ಕಡೆ ಬಂಗಾರಪ್ಪ ಜಯಂತಿ ನಡೆಯುತ್ತಿದೆ.ಅಬಲರು,ಅಸಹಾಯಕರಿಗೆ ನೆರವು ನೀಡುವ ಮೂಲಕ ಅವರ ಅಭಿಮಾನಿಗಳು ಬಂಗಾರಪ್ಪ ಜಯಂತಿ ಆಚರಿಸಿದ್ದು ವಿಶೇಶ.





