

ದಕ್ಷಿಣ ಕನ್ನಡ ಜಿಲ್ಲೆಯ ಕಾಂತಾವರ ಕನ್ನಡ ಸಂಘದವರು ವಾರ್ಷಿಕವಾಗಿ ಕೊಡ ಮಾಡುವ ದತ್ತಿ ಪ್ರಶಸ್ತಿಗೆ ಉ.ಕ.ಜಿಲ್ಲೆಯ ಹಿರಿಯ ಸಾಹಿತಿ, ಕುಮಟಾದ ಪುಟ್ಟು ಕುಲಕರ್ಣಿಯವರು ಭಾಜನರಾಗಿದ್ದಾರೆ.
ಕಾಂತಾವರ ಕನ್ನಡ ಸಂಘವು ನೀಡುವ ಡಾ. ಯು.ಪಿ. ಉಪಾಧ್ಯ್ಯಾಯ ಸಂಶೋಧನಾ ಪ್ರಶಸ್ತಿಗೆ ಆಯ್ಕೆಯಾಗಿರುವ ಪುಟ್ಟು ಕುಲಕರ್ಣಿಯವರು ಜಿಲ್ಲೆಯ ಸಾಹಿತ್ಯಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು.
ಹಲವಾರು ಕೃತಿಗಳನ್ನು ಹೊರ ತಂದಿರುವ ಇವರು ಕುಮಟಾ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಗೌರವವನ್ನೂ ಪಡೆದವರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸಿದವರು. ಕಾಂತಾವರ ಕನ್ನಡ ಸಂಘವು ನವೆಂಬರ 1 ಮತ್ತು 2 ರಂದು ಆಚರಿಸುವ ಕಾಂತಾವರ ಉತ್ಸವದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಸಂಘದ ಕಾರ್ಯಾದ್ಯಕ್ಷ ನಿರಂಜನ ಮೊಗಸಾಲೆ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.

