
ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ, ಪೌರ್ಣಿಮಾ ಸಾಹಿತ್ಯ ವೇದಿಕೆ ಅಧ್ಯಕ್ಷರು ಹಾಗೂ ಉ.ಕ. ಜಿಲ್ಲಾ ಕ.ಸಾ.ಪ ಸಂಚಾಲಕ ಗೋಪಾಲ ನಾಯ್ಕ ಭಾಶಿ ಉ.ಕ. ಜಿಲ್ಲಾ ಸರ್ಕಾರಿ ನೌಕರರ ಕಲಾ, ಸಾಹಿತ್ಯ, ಸಾಂಸ್ಕøತಿಕ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲಾ ಮತ್ತು ಸಾಂಸ್ಕøತಿಕ ಸಂಘ (ರಿ) ಬೆಂಗಳೂರು ನ ರಾಜ್ಯಾಧ್ಯಕ್ಷರಾದ ಅಂಬಣ್ಣ ಜಿ.ಮಹಾಗಾಂವಕರ್ ನೇಮಕಾತಿ ಪತ್ರ ನೀಡಿ ಉ.ಕ. ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ರಚಿಸಿ ಜಿಲ್ಲೆಯಲ್ಲಿರುವ ವಿವಿಧ ಇಲಾಖೆಯ ಸರ್ಕಾರಿ ನೌಕರರ
ಹಾಗೂ ಅವರ ಮಕ್ಕಳಲ್ಲಿರುವ ಕಲೆ, ಸಾಹಿತ್ಯ, ಕ್ರೀಡೆ ಸಾಂಸ್ಕøತಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕೈಗೊಂಡು ದೇಶದ, ನಾಡಿನ ಕಲೆ ಸಾಹಿತ್ಯ ಸಾಂಸ್ಕøತಿಕ ಪರಂಪರೆಯನ್ನು ಪ್ರೋತ್ಸಾಹಿಸುವಂತೆ ಸೂಚಿಸಿದ್ದಾರೆ.
ಈ ಕುರಿತು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಗೋಪಾಲ ನಾಯ್ಕ ಭಾಶಿ ರಾಜ್ಯಾಧ್ಯಕ್ಷರಾದ ಅಂಬಣ್ಣ ಜಿ.ಮಹಾಗಾಂವಕರ್ ಪ್ರಧಾನ ಸಂಚಾಲಕರಾದ ಸೋಮಸಿಂಗ್ ಇಪ್ಪರಗಿ, ಹಾಗೂ ಉ.ಕ. ಸಿರಿಗನ್ನಡ ವೇದಿಕೆಯ ಮಂಜುನಾಥ ಹೆಗಡೆ ಹೊಸಕೊಪ್ಪರಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ.
ಸಿದ್ದಾಪುರ
ತಾಲೂಕಿನ ಹುಲಿಮರ್ಡುವಿನ ಗಣಪತಿ ಗಣೇಶ ಹೆಗಡೆ ಜರ್ಮನಿಯ ಡರ್ಮಸ್ಟರ್ಡ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಮಂಡಿಸಿದ ವೈರ್ಲೆಸ್ ಕಮ್ಯುನಿಕೇಶನ್ ವಿಷಯಕ್ಕೆ ಸಂಬಂಧಿಸಿ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಸಹಿಪ್ರಾ ಶಾಲೆ ಹೂವಿನಮನೆ, ಪ್ರೌಢಶಿಕ್ಷಣವನ್ನು ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ,ಪದವಿ ಪೂರ್ವ ಶಿಕ್ಷಣವನ್ನು ಸಾಗರದಲ್ಲಿ, ಇಂಜಿನಿಯರಿಂಗ್ ಬೆಂಗಳೂರಿನಲ್ಲಿ ಹಾಗೂ ಎಂ.ಟೆಕ್ನ್ನು ಜರ್ಮನಿಯಲ್ಲಿ ಮಾಡಿದ್ದಾರೆ.
ಇವರ ಸಾಧನೆಗೆ ಗ್ರಾಮಸ್ಥರು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಪ್ರಮುಖರು ಹರ್ಷವ್ಯಕ್ತಪಡಿಸಿದ್ದಾರೆ. ಇವರು ಹುಲಿಮರ್ಡುವಿನ ಗಣೇಶ ಗಣಪತಿ ಹೆಗಡೆ ಹಾಗೂ ಲಲಿತಾ ಗಣೇಶ ಹೆಗಡೆ ದಂಪತಿಯ ಪುತ್ರ.
