ಕರೋನಾ ಸೇನಾನಿಗಳನ್ನು ಮರೆತವರು ಕೃತಘ್ನರು

ಕರೋನಾ ಅವಧಿಯಲ್ಲಿ ಸೇನಾನಿಗಳಾಗಿ ಕೆಲಸ ಮಾಡಿದವರನ್ನು ಸಮಾಜ ಎಂದೂ ಮರೆಯಬಾರದು ಎಂದು ಹೇಳಿರುವ ಜೆ.ಡಿ.ಎಸ್. ಮುಖಂಡ ಡಾ.ಶಶಿಭೂಷಣ ಹೆಗಡೆ ಸಾರ್ವಜನಿಕರು ಮತ್ತು ಸರ್ಕಾರ ಆಶಾ ಕಾರ್ಯಕರ್ತರನ್ನು ಗೌರವಿಸಿ,ಸಹಕಾರ ನೀಡದಿದ್ದರೆ ಆ ವ್ಯವಸ್ಥೆ ಹೃದಯಹೀನ ಎನ್ನಬೇಕಾಗುತ್ತದೆ ಎಂದರು. ಸಿದ್ಧಾಪುರ ರಾಘವೇಂದ್ರಮಠದಲ್ಲಿ ಉಪೇಂದ್ರ ಪೈ ಟ್ರಸ್ಟ್ ಆಯೋಜಿಸಿದ್ದ ಆಶಾ ಕಾರ್ಯಕರ್ತರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಫಲಾಪೇಕ್ಷೆ ಇಲ್ಲದೆ ಜೀವದ ಹಂಗು ತೊರೆದು ಕೆಲಸ ಮಾಡಿದ ಕರೋನಾ ಸೇನಾನಿಗಳನ್ನು ಗೌರವಿಸದ ಸಮಾಜ,ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯವಿಲ್ಲ. ಕರೋನಾ ಸೇನಾನಿಗಳಾಗಿದ್ದ ಮಹಿಳೆಯರು ಮಾತೃಹೃದಯದಿಂದ ಕೋವಿಡ್ ಸೇನಾನಿಗಳಾಗಿ ಕೆಲಸ ಮಾಡಿದ್ದನ್ನೂ ಯಾರೂ ಮರೆಯಬಾರದು ಎಂದರು,

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಮಾತನಾಡಿ ಕರೋನಾ ಸೇನಾನಿಗಳಿಗೆ ನಮ್ಮ ದೇಣಿಗೆ, ಕೊಡುಗೆ ಎನ್ನುವುದಕ್ಕಿಂತ ಈ ನೆರವು ಪ್ರಾಮಾಣಿಕ ಕೆಲಸಕ್ಕೆ ನಮ್ಮ ಕೃತಜ್ಞತೆ ಸಮರ್ಪಣೆ ಎಂದರು. ಬಿ.ಜೆ.ಪಿ. ಮುಖಂಡ ತಿಮ್ಮಪ್ಪ ಎಂ.ಕೆ. ಮಾತನಾಡಿದರು. ಸುಭಾಶ್ ನಾಯ್ಕ ಸ್ವಾಗತಿಸಿದರು. ಸಂಕಲ್ಪ ಸೇವಾ ಟ್ರಸ್ಟ್ ನ ಪಿ.ಬಿ.ಹೊಸೂರು ಉಪಸ್ಥಿತರಿದ್ದರು.

ಸಿದ್ಧಾಪುರದ ಹಳಿಯಾಳ, ಮುಠ್ಠಳ್ಳಿ,ಗಾಳಿಜಡ್ಡಿ ಗಳ ಮೂರು ಶಾಲೆಯಲ್ಲಿದ್ದ 25 ಕುಟುಂಬದವರಿಗೆ ತಲಾ ಒಂದು ಸಾವಿರ ರೂಪಾಯಿಯಂತೆ ಒಟ್ಟೂ 25000 ಸಾವಿರ ರೂಪಾಯಿಗಳನ್ನು ನಿವೃತ್ತ ನೌಕರರಾದ c.s. ಗೌಡರ. P.b. ಹೊಸೂರ್.D.v. ಶೇಟ್ ವಿತರಿಸಿದರು ಈ ಸಂದರ್ಭದಲ್ಲಿ g.p. ಮೆಂಬರ್ ಸಿದ್ದಾರ್ಥ್ ಗೌಡರ. ಶಾಂತ ಗೌಡರ g.p.ಅದ್ಯಕ್ಷರು. p.d.o ರಾಜೇಶ್.VA ಹೇಮಾ ಹಾಜರಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *