
ಸಿದ್ದಾಪುರ
ತಾಲೂಕಿನ ಹುಲಿಮರ್ಡುವಿನ ಗಣಪತಿ ಗಣೇಶ ಹೆಗಡೆ ಜರ್ಮನಿಯ ಡರ್ಮಸ್ಟರ್ಡ್ ಟೆಕ್ನಿಕಲ್ ಯುನಿವರ್‍ಸಿಟಿಯಲ್ಲಿ ಮಂಡಿಸಿದ ವೈರ್ಲೆಸ್ ಕಮ್ಯುನಿಕೇಶನ್ ವಿಷಯಕ್ಕೆ ಸಂಬಂಧಿಸಿ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಸಹಿಪ್ರಾ ಶಾಲೆ ಹೂವಿನಮನೆ, ಪ್ರೌಢಶಿಕ್ಷಣವನ್ನು ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ,ಪದವಿ ಪೂರ್ವ ಶಿಕ್ಷಣವನ್ನು ಸಾಗರದಲ್ಲಿ, ಇಂಜಿನಿಯರಿಂಗ್ ಬೆಂಗಳೂರಿನಲ್ಲಿ ಹಾಗೂ ಎಂ.ಟೆಕ್‍ನ್ನು ಜರ್ಮನಿಯಲ್ಲಿ ಮಾಡಿದ್ದಾರೆ.
ಇವರ ಸಾಧನೆಗೆ ಗ್ರಾಮಸ್ಥರು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಪ್ರಮುಖರು ಹರ್ಷವ್ಯಕ್ತಪಡಿಸಿದ್ದಾರೆ. ಇವರು ಹುಲಿಮರ್ಡುವಿನ ಗಣೇಶ ಗಣಪತಿ ಹೆಗಡೆ ಹಾಗೂ ಲಲಿತಾ ಗಣೇಶ ಹೆಗಡೆ ದಂಪತಿಯ ಪುತ್ರ.
