ಪ್ರಸ್ತುತ ಸಾಮಾಜಿಕ,ರಾಜಕೀಯ ಬಿಕ್ಕಟ್ಟುಗಳಿಗೆ ನಾಗು ಚಿಂತನೆಯೇ ಪರಿಹಾರ & local news

ಪ್ರಸ್ತುತ ಸಾಮಾಜಿಕ,ರಾಜಕೀಯ,ಧಾರ್ಮಿಕ ಬಿಕ್ಕಟ್ಟುಗಳಿಗೆಲ್ಲಾ ನಾರಾಯಣಗುರುಗಳ ಚಿಂತನೆ,ದಾರಿಯಲ್ಲಿಯೇ ಪರಿಹಾರವಿದೆ ಎಂದು ಪತ್ರಕರ್ತ ಕನ್ನೇಶ್‌ ಕೋಲಶಿರ್ಸಿ ಹೇಳಿದ್ದಾರೆ. ಸಿದ್ಧಾಪುರದ ಕೋಲಶಿರ್ಸಿ ಗುಡ್ಡಕೇರಿ ಮಾರಿಕಾಂಬಾ ಗೆಳೆಯರ ಬಳಗ ತಾಲೂಕು ಬಿ.ಎಸ್.ಎ ನ್.ಡಿ.ಪಿ. ಸಹಯೋಗದಲ್ಲಿ ನಡೆಸಿದ ನಾರಾಯಣ ಗುರು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದ ಅವರು

ನಾರಾಯಣ ಗುರುಗಳು ಸರಿಸುಮಾರು ಎರಡು ಶತಮಾನಗಳ ಹಿಂದೆ ಅಂದಿನ ಅಧಾರ್ಮಿಕತೆ, ಕಂದಾಚಾರ, ಶೋಷಣೆಗಳ ವಿರುದ್ಧ ಸಂಘರ್ಷಕ್ಕೆ ಇಳಿಯದೆ ಪರ್ಯಾಯ ವ್ಯವಸ್ಥೆಯ ಸ್ಥಾಪನೆಗೆ ಪ್ರಯತ್ನಿಸಿ ಗೆದ್ದರು. ಮಹಾತ್ಮಾ ಗಾಂಧಿಯವರ ಬಹುಮುಖಿ ಹೋರಾಟದಂತೆ ನಾರಾಯಣ ಗುರುಗಳ ಚಳವಳಿ ಆಗಿನ ಶೋಷಣೆ, ಜಾತ್ಯಾಂಧತೆ,ಕ್ರೂರ ನೀತಿ-ನಿಯಮಗಳ ವಿರುದ್ಧ ಹೋರಾಡುತ್ತಾ ಕೇರಳದ ಪಟ್ಟಭದ್ರರ ರಾಜಕೀಯವನ್ನು ಕಿತ್ತೆಸೆದು ಹೊಸ ಮುಂದುವರಿದ ಕೇರಳದ ಪ್ರಗತಿಗೆ ಕಾರಣವಾಯಿತು. ಆಗಿನ ಅರಸೊತ್ತಿಗೆ, ಮೇಲ್ಜಾತಿ ಪ್ರಣೀತ ಮನುವಾದದ ರೀತಿಯಲ್ಲಿಯೇ ಈಗ ಮನುವಾದ ಭಾರತವನ್ನು ಹಿಂಸಿಸುತ್ತಿದೆ. ಭಾರತವನ್ನು ಮನುವಾದಿಗಳು, ಮನುವಾದದ ಅಪಾಯದಿಂದ ಪಾರುಮಾಡಲು ಅಂದಿನ ಕೇರಳ ಮಾದರಿಯ ನಾರಾಯಣ ಗುರುಗಳ ತತ್ವ,ಆದರ್ಶಗಳ ಪಾಲನೆಯಿಂದ ಮಾತ್ರ ಸಾಧ್ಯ ಎಂದರು.

ಮನುವಾದಿಗಳು ದೇವರು ಧರ್ಮ,ಆಚರಣೆ,ನಂಬಿಕೆಗಳ ಆಧಾರದಲ್ಲಿ ಬಹುಸಂಖ್ಯಾತರನ್ನು ನಿಯಂತ್ರಿಸುತ್ತಾರೆ. ಈ ಅಸ್ತ್ರಗಳು ಅವರ ರಾಜಕೀಯ ಹತಾರಗಳು ಇವುಗಳಿಂದ ಈ ದೇಶ ಈಗ ಉಳ್ಳವರು, ಮೇಲ್ವರ್ಗದ ಜಾಗೀರಾಗಿದೆ. ಈ ಅಸಮಾನ ವ್ಯವಸ್ಥೆ ಬದಲಾಗದೆ ಭವಿಷ್ಯವಿಲ್ಲ. ಆ ಕಾಲದಲ್ಲಿ ನಾರಾಯಣ ಗುರುಗಳು ಮಾಡಿದ ಜಾದೂ ಈ ಕಾಲದಲ್ಲಿ ಹೆಚ್ಚು ಅಗತ್ಯ ಪ್ರಸ್ತುತ ಎಂದು ವಿವರಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪತ್ರಕರ್ತ ನಾಗರಾಜ್‌ ಮಾಳ್ಕೋಡು ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಾರಾಯಣ ಗುರುಗಳ ಚಿಂತನೆ, ಹೋರಾಟದ ದಾರಿಗೆ ಹೆಚ್ಚಿನ ಒಲುವು ವ್ಯಕ್ತವಾಗುತ್ತಿದೆ ಇದರಿಂದ ಜಾಗೃತಿಯಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಬಿ.ಎಸ್.ಎನ.ಡಿ.ಪಿ. ಅಧ್ಯಕ್ಷ

ವಿನಾಯಕ ನಾಯ್ಕ ಬಿ.ಎಸ್.ಎನ್.ಡಿ.ಪಿ. ಕಾರ್ಯಚಟುವಟಿಕೆ, ಗುರಿಗಳನ್ನು ವಿವರಿಸಿದರು. ಸೋಮಶೇಖರ್ ನಾಯ್ಕ ಸ್ವಾಗತಿಸಿದ ಕಾರ್ಯಕ್ರಮಕ್ಕೆ ರವಿಕುಮಾರ್‌ ಕೊಠಾರಿ ನಿರೂಪಿಸಿ, ವಂದಿಸಿದರು.

ಸಿದ್ದಾಪುರ: ಕೋರ್ಟ್ ಆವರಣದಲ್ಲಿ ನಡೆದ ರಾಷ್ಟ್ರೀಯ ಪೋಷಣ ಅಭಿಯಾನದ ಪೋಷಣ ರಥಕ್ಕೆ ಸಿವಿಲ್ ನ್ಯಾಯಾಧೀಶ ತಿಮ್ಮಯ್ಯ ಜಿ ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಈ ಅಭಿಯಾನದ ಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಕಮಲಾಕ್ಷ ಡಿ, ಸರಕಾರಿ ಅಭಿಯೋಜಕ ಚಂದ್ರಶೇಖರ್ ಎಚ್ ಎಸ, ನ್ಯಾಯ ವಾದಿಗಳ ಸಂಘದ ಅಧ್ಯಕ್ಷ ಜೆ. ಜಿ. ಹೆಗಡೆ, ಸಿಡಿಪಿಓ ಶ್ರೀ ಮತಿ ಪೂರ್ಣಿಮಾ ಆರ್, ಹಿರಿಯ ನ್ಯಾಯ ವಾದಿ ಎನ್ ಡಿ ನಾಯ್ಕ, ವಕೀಲರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


ಸಿದ್ದಾಪುರ: ತಾಲೂಕ ಪಂಚಾಯತ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಆರ್ಥಿಕ ಸಾಕ್ಷರತಾ ಕಾರಕ್ರಮ ನಡೆಯಿತು.
ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರು ಶಿವಶಂಕರ ಎನ್ ಕೆ ಆರ್ಥಿಕ ಸಾಕ್ಷರತೆ ಕುರಿತು ಮಾಹಿತಿ ನೀಡಿದರು. ಬ್ಯಾಂಕ್ ನಲ್ಲಿ ಖಾತೆಯ ನಿರ್ವಹಣೆ, ಆಧುನಿಕ ಸೌಲಭ್ಯ ಗಳ ಬಳಕೆ, ಎಟಿಎಂ ಕಾರ್ಡ್ ನ ಬಳಕೆ, ಪ್ರಧಾನ ಮಂತ್ರಿ ಜೀವನ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಭೀಮಾ ಯೋಜನೆ, ಸ್ವ ಉದ್ಯೋಗ ತರಬೇತಿ ಗಳ ಕುರಿತು ಮಾಹಿತಿ ನೀಡಿದರು.
ಕ್ರಷಿ ಇಲಾಖೆಯ ಉದಯ ತೆಂಬದ ಇಲಾಖೆಯಿಂದ ಸಿಗುವ ಸೌಲಭ್ಯ ಗಳು ಹಾಗೂ ಭತ್ತದ ಬೆಳೆಗೆ ಬರಬಹುದಾದ ರೋಗಗಳು ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಎಂಬಿಕೆ, ಎಲ್. ಸಿ. ಆರ್. ಪಿ, ಕೃಷಿ ಸಖಿ, ಪಶು ಸಖಿ, ಬಿ. ಸಿ ಸಖಿ, ಹಾಗೂ ಎಫ್ ಎಲ್ ಸಿ ಆರ್ ಪಿ ಸದಸ್ಯರು ಪಾಲ್ಗೊಂಡಿದ್ದರು.
ತಾಲೂಕು ಯೋಜನಾಧಿಕಾರಿ ಬಸವರಾಜ, ತಾಲೂಕು ಪಂಚಾಯತ್ ವ್ಯವಸ್ಥಾಪಕ ನಾಗರಾಜ ಜೋಕನಲ್, ಎನ್ ಎಲ್ ಆರ್ ಎಂ ನ ಮಾಲತಿ ನಾಯ್ಕ, ಉಷಾ, ಹೆಡ್ ಕಾನಸ್ಟೇಬಲ್ ಸಂಗೀತ, ಕಾನಸ್ಟೇಬಲ್ ರೇಖಾ ಹಾಗೂ ಮಾನಸ ಉಪಸ್ಥಿತರಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *