ಎಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಬ್ರಮ ಸಿದ್ಧಾಪುರದಲ್ಲಿ ಸಲ್ಲದ ಹೊಸ ಸಂಪ್ರದಾಯಕ್ಕಾಗಿ ಕಾದು ಸುಸ್ತಾದ ವಿದ್ಯಾರ್ಥಿಗಳು
ದೇಶದ ಪ್ರಾಂತವಾರು ವಿಂಗಡನೆ ಹಿನ್ನೆಲೆಯಲ್ಲಿ ಭಾಷೆಗೊಂದು ರಾಜ್ಯ ಕಲ್ಫನೆಯಲ್ಲಿ ಒಡಮೂಡಿದ ರಾಜ್ಯೋತ್ಸವವನ್ನು ಇಂದು ದೇಶದಾದ್ಯಂತ ಸಂಬ್ರಮದಿಂದ ಆಚರಿಸಲಾಯಿತು.
ಕನ್ನಡಾಂಬೆ, ಕನ್ನಡತಾಯಿ ಕಲ್ಫನೆಯಲ್ಲಿ ಧಾರ್ಮಿಕವಾಗಿ, ಸಾಂಸ್ಕøತಿಕವಾಗಿ ಏಕೀಕರಣವನ್ನು ಸ್ಮರಿಸಲು ಈ ದಿನವನ್ನು ಮೀಸಲಿಡಲಾಯಿತು. ಇದೇ ದಿನ ಹಲವೆಡೆ ಏಕೀಕರಣಕ್ಕೆ, ಕನ್ನಡಕ್ಕೆ, ಕನ್ನಡ ನಾಡು,ನುಡಿಗಾಗಿ ದುಡಿದವರನ್ನು ಸ್ಮರಿಸಿ ಕನ್ನಡ ದೇವಿಯ ಹಬ್ಬವನ್ನು ಆಚರಿಸಲಾಯಿತು. ಸಿದ್ದಾಪುರದಲ್ಲಿ ಭುವನಗಿರಿಯಲ್ಲಿ ಮಾತೃವಂದನೆ,ರಾಜ್ಯೋತ್ಸವ ಮೆರವಣಿಗೆಗೆ ಭುವನಗಿರಿಯಿಂದ ಜ್ಯೋತಿ ತರುವ ಆಚರಣೆಗಳೆಲ್ಲಾ ಇತ್ತೀಚಿನ ದಿನಗಳಲ್ಲಿ ಪ್ರಾರಂಭವಾದವುಗಳು………