

ಹಲೋ ಗ್ರಾ.ಪಂ……….. ನ ಪಿ.ಡಿ.ಓ.ಅವರಾ? ಎನ್ನುವಂತಿಲ್ಲ ಅದಕ್ಕೂ ಮೊದಲೇ ಉತ್ತರ
ನೀವು ಕರೆಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ಅಥವಾ ಸ್ವಿಚ್ ಆಫ್ ಮಾಡಿದ್ದಾರೆ.
ಇದು ಬರೀ ಸಿದ್ಧಾಪುರದ ಕತೆಯಲ್ಲ, ಉತ್ತರಕನ್ನಡದ ವ್ಯಥೆ ಮಾತ್ರವಲ್ಲ,ಬಹುಶ: ಇಡೀರಾಜ್ಯದವ್ಯಥೆಯ ಕತೆ.
ರಾಜ್ಯದ ಮೊದಲ ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ಸೃಜಿಸಲ್ಫಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕತೆ. ಈ ವ್ಯಥೆಯ ಅನುಭವವಾಗಬೇಕೆಂದರೆ…..
ನೀವು ಮಾಡಬೇಕಿರುವುದಿಷ್ಟೇ,
ನಿಮ್ಮ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ಸರ್ಕಾರಿ ಚರದೂರವಾಣಿಗೆ ಕರೆಮಾಡಿ, ಉತ್ತರ ‘ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ಅಥವಾ ನೀವು ಕರೆಮಾಡಿದ ಚಂದಾದಾರರು ಸ್ವೀಚ್‍ಆಫ್ ಮಾಡಿದ್ದಾರೆ. ಹೀಗೆ ಪಿ.ಡಿ.ಓ.ಗಳ ಮೊಬೈಲ್ ಉಸುರತೊಡಗಿ ಸರಿಸುಮಾರು ಒಂದು ವರ್ಷಗಳೇ ಕಳೆದಿದೆ. ಜನತೆ ಪಾಪ, ಪಿ.ಡಿ.ಓ.ಗಳು ಸೈಟ್ ನಲ್ಲಿ ಕಾಮಗಾರಿ ವೀಕ್ಷಿಸುತ್ತಿರಬೇಕು ಎಂದು ಸುಮ್ಮನಾದವರೇ ಹೆಚ್ಚು. ಆದರೆ ಈಗ ತಡವಾಗಿ ಬೆಳಕಿಗೆ ಬಂದ ವಿದ್ಯಮಾನವೆಂದರೆ…..
ಸಿದ್ದಾಪುರ,ಉತ್ತರಕನ್ನಡ ಸೇರಿದಂತೆ ರಾಜ್ಯದ ಗ್ರಾಮೀಣ ಅಭಿವೃದ್ಧಿಗಾಗಿ ಬಂದ ಅಧಿಕಾರಿಗಳ ಮೊಬೈಲ್ ಗೆ ಹೊಟ್ಟಿಗೆ ಹಿಟ್ಟಿಲ್ಲ. ಹೌದು ನೀವು ಪಿ.ಡಿ.ಓ.ಗಳನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾಗಿ ಅವರಿಗೆ ಶಾಪ ಹಾಕಿದರೆ ಪ್ರಯೋಜನವಿಲ್ಲ.ಸರ್ಕಾರ ಇವರ ಮೊಬೈಲ್‍ಗಳನ್ನು ರೀಚಾರ್ಜ್ ಮಾಡಿಸಿಲ್ಲ ಹಾಗಾಗಿ ಇವರ ಮೊಬೈಲ್‍ಗಳು ಶಾಶ್ವತವಾಗಿ ಸ್ವಿಚ್ ಆಫ್ ಆಗಿವೆ, ಅಥವಾ ನಾಟ್ ರಿಚೇಬಲ್.
ಪಿ.ಡಿ.ಓ.ಗಳ ಮೊಬೈಲ್‍ಸಂಪರ್ಕ ಸಾಧ್ಯವಾಗದಿರಲು ತಾಂತ್ರಿಕ ತೊಂದರೆ ಕಾರಣವಾಗಿರಬಹುದು. ಈ ವಾರ ಸ್ವಯಂ ನನ್ನ ಮೊಬೈಲ್ ಗೆ ಕರೆಗಳು ಬರುತ್ತಿಲ್ಲ, ಈ ಬಗ್ಗೆ ಅನ್ಯರು ಹೇಳಿದ ಮೇಲೇ ನನಗೆ ತಿಳಿದದ್ದು, ಈ ಬಗ್ಗೆ ವಿಚಾರಿಸಿ,ಸೂಕ್ತ ಏರ್ಪಾಡಿಗೆ ಪ್ರಯತ್ನಿಸುತ್ತೇನೆ.
-ಪ್ರಕಾಶ್ ರಾವ್, ಕಾ.ನಿ.ಅ.ತಾ.ಪಂ.ಸಿದ್ಧಾಪುರ.
ಬೇಸಿಗೆಯಲ್ಲಿ ಬಡವಾಗಲಿದೆ ಈ ಜಲಪಾತ
ಹುಸೂರು ಜಲಪಾತ ನೋಡುವವರು ಈ ತಿಂಗಳಲ್ಲೇ ಬರಬೇಕು
ಜಲಪಾತಗಳ ಜಿಲ್ಲೆಯ ಹೆಚ್ಚು ಜಲಪಾತಗಳ ತಾಲೂಕು ಸಿದ್ಧಾಪುರ. ಸಿದ್ದಾಪುರದಲ್ಲಿ ಪ್ರಸಿದ್ಧ ಉಂಚಳ್ಳಿ ಜಲಪಾತ,ಬುರುಡೆ ಅಥವಾ ಕೆಪ್ಪಜೋಗ,ಸೋಮನಕುಳಿ ಜಲಪಾತ, ಶೀರಲಗದ್ದೆ,ಶಿವರಾತ್ರಿ ಹೊಂಡ,ತುಂಬ್ರಗೋಡು ಜಲಪಾತ, ನಿಪ್ಲಿ ಹೊಳೆಯ ಹುಸೂರು ಜಲಪಾತ ಹೀಗೆ ಅನೇಕ ಜಲಪಾತಗಳಿವೆ.
ಮಳೆಕಡಿಮೆ ಇರುವ ವರ್ಷಗಳಲ್ಲಿ ಅಕ್ಟೋಬರ್ ನವೆಂಬರ್‍ಗಳಲ್ಲಿ ಜಲಪಾತ ವೀಕ್ಷಿಸುವುದು ಇಲ್ಲಿಯ ಸಾಮಾನ್ಯ ರೂಡಿ,ü ಯಾಕೆಂದರೆ ಇಲ್ಲಿಯ ಬಹುತೇಕ ಜಲಪಾತಗಳು ಡಿಸೆಂಬರ್ ನಂತರ ಸೊರಗುತ್ತವೆ. ಜೋಗಜಲಪಾತ,ಉಂಚಳ್ಳಿ ಜಲಪಾತ, ಬುರುಡೆ ಪಾಲ್ಸ್ ಬಿಟ್ಟು ಉಳಿದ ಜಲಪಾತಗಳು ಜನೇವರಿಯಿಂದ ಮೇ ತಿಂಗಳವರೆಗೆ ಬಡವಾಗುತ್ತವೆ.
