ನೀವು ಕರೆಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ಅಥವಾ ಸ್ವಿಚ್ ಆಫ್ ಮಾಡಿದ್ದಾರೆ.

ಹಲೋ ಗ್ರಾ.ಪಂ……….. ನ ಪಿ.ಡಿ.ಓ.ಅವರಾ? ಎನ್ನುವಂತಿಲ್ಲ ಅದಕ್ಕೂ ಮೊದಲೇ ಉತ್ತರ
ನೀವು ಕರೆಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ಅಥವಾ ಸ್ವಿಚ್ ಆಫ್ ಮಾಡಿದ್ದಾರೆ.
ಇದು ಬರೀ ಸಿದ್ಧಾಪುರದ ಕತೆಯಲ್ಲ, ಉತ್ತರಕನ್ನಡದ ವ್ಯಥೆ ಮಾತ್ರವಲ್ಲ,ಬಹುಶ: ಇಡೀರಾಜ್ಯದವ್ಯಥೆಯ ಕತೆ.
ರಾಜ್ಯದ ಮೊದಲ ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ಸೃಜಿಸಲ್ಫಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕತೆ. ಈ ವ್ಯಥೆಯ ಅನುಭವವಾಗಬೇಕೆಂದರೆ…..
ನೀವು ಮಾಡಬೇಕಿರುವುದಿಷ್ಟೇ,
ನಿಮ್ಮ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ಸರ್ಕಾರಿ ಚರದೂರವಾಣಿಗೆ ಕರೆಮಾಡಿ, ಉತ್ತರ ‘ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ಅಥವಾ ನೀವು ಕರೆಮಾಡಿದ ಚಂದಾದಾರರು ಸ್ವೀಚ್‍ಆಫ್ ಮಾಡಿದ್ದಾರೆ. ಹೀಗೆ ಪಿ.ಡಿ.ಓ.ಗಳ ಮೊಬೈಲ್ ಉಸುರತೊಡಗಿ ಸರಿಸುಮಾರು ಒಂದು ವರ್ಷಗಳೇ ಕಳೆದಿದೆ. ಜನತೆ ಪಾಪ, ಪಿ.ಡಿ.ಓ.ಗಳು ಸೈಟ್ ನಲ್ಲಿ ಕಾಮಗಾರಿ ವೀಕ್ಷಿಸುತ್ತಿರಬೇಕು ಎಂದು ಸುಮ್ಮನಾದವರೇ ಹೆಚ್ಚು. ಆದರೆ ಈಗ ತಡವಾಗಿ ಬೆಳಕಿಗೆ ಬಂದ ವಿದ್ಯಮಾನವೆಂದರೆ…..
ಸಿದ್ದಾಪುರ,ಉತ್ತರಕನ್ನಡ ಸೇರಿದಂತೆ ರಾಜ್ಯದ ಗ್ರಾಮೀಣ ಅಭಿವೃದ್ಧಿಗಾಗಿ ಬಂದ ಅಧಿಕಾರಿಗಳ ಮೊಬೈಲ್ ಗೆ ಹೊಟ್ಟಿಗೆ ಹಿಟ್ಟಿಲ್ಲ. ಹೌದು ನೀವು ಪಿ.ಡಿ.ಓ.ಗಳನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾಗಿ ಅವರಿಗೆ ಶಾಪ ಹಾಕಿದರೆ ಪ್ರಯೋಜನವಿಲ್ಲ.ಸರ್ಕಾರ ಇವರ ಮೊಬೈಲ್‍ಗಳನ್ನು ರೀಚಾರ್ಜ್ ಮಾಡಿಸಿಲ್ಲ ಹಾಗಾಗಿ ಇವರ ಮೊಬೈಲ್‍ಗಳು ಶಾಶ್ವತವಾಗಿ ಸ್ವಿಚ್ ಆಫ್ ಆಗಿವೆ, ಅಥವಾ ನಾಟ್ ರಿಚೇಬಲ್.
ಪಿ.ಡಿ.ಓ.ಗಳ ಮೊಬೈಲ್‍ಸಂಪರ್ಕ ಸಾಧ್ಯವಾಗದಿರಲು ತಾಂತ್ರಿಕ ತೊಂದರೆ ಕಾರಣವಾಗಿರಬಹುದು. ಈ ವಾರ ಸ್ವಯಂ ನನ್ನ ಮೊಬೈಲ್ ಗೆ ಕರೆಗಳು ಬರುತ್ತಿಲ್ಲ, ಈ ಬಗ್ಗೆ ಅನ್ಯರು ಹೇಳಿದ ಮೇಲೇ ನನಗೆ ತಿಳಿದದ್ದು, ಈ ಬಗ್ಗೆ ವಿಚಾರಿಸಿ,ಸೂಕ್ತ ಏರ್ಪಾಡಿಗೆ ಪ್ರಯತ್ನಿಸುತ್ತೇನೆ.
-ಪ್ರಕಾಶ್ ರಾವ್, ಕಾ.ನಿ.ಅ.ತಾ.ಪಂ.ಸಿದ್ಧಾಪುರ.

 ಬೇಸಿಗೆಯಲ್ಲಿ ಬಡವಾಗಲಿದೆ ಈ ಜಲಪಾತ

ಹುಸೂರು ಜಲಪಾತ ನೋಡುವವರು ಈ ತಿಂಗಳಲ್ಲೇ ಬರಬೇಕು
ಜಲಪಾತಗಳ ಜಿಲ್ಲೆಯ ಹೆಚ್ಚು ಜಲಪಾತಗಳ ತಾಲೂಕು ಸಿದ್ಧಾಪುರ. ಸಿದ್ದಾಪುರದಲ್ಲಿ ಪ್ರಸಿದ್ಧ ಉಂಚಳ್ಳಿ ಜಲಪಾತ,ಬುರುಡೆ ಅಥವಾ ಕೆಪ್ಪಜೋಗ,ಸೋಮನಕುಳಿ ಜಲಪಾತ, ಶೀರಲಗದ್ದೆ,ಶಿವರಾತ್ರಿ ಹೊಂಡ,ತುಂಬ್ರಗೋಡು ಜಲಪಾತ, ನಿಪ್ಲಿ ಹೊಳೆಯ ಹುಸೂರು ಜಲಪಾತ ಹೀಗೆ ಅನೇಕ ಜಲಪಾತಗಳಿವೆ.
ಮಳೆಕಡಿಮೆ ಇರುವ ವರ್ಷಗಳಲ್ಲಿ ಅಕ್ಟೋಬರ್ ನವೆಂಬರ್‍ಗಳಲ್ಲಿ ಜಲಪಾತ ವೀಕ್ಷಿಸುವುದು ಇಲ್ಲಿಯ ಸಾಮಾನ್ಯ ರೂಡಿ,ü ಯಾಕೆಂದರೆ ಇಲ್ಲಿಯ ಬಹುತೇಕ ಜಲಪಾತಗಳು ಡಿಸೆಂಬರ್ ನಂತರ ಸೊರಗುತ್ತವೆ. ಜೋಗಜಲಪಾತ,ಉಂಚಳ್ಳಿ ಜಲಪಾತ, ಬುರುಡೆ ಪಾಲ್ಸ್ ಬಿಟ್ಟು ಉಳಿದ ಜಲಪಾತಗಳು ಜನೇವರಿಯಿಂದ ಮೇ ತಿಂಗಳವರೆಗೆ ಬಡವಾಗುತ್ತವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *