

ಆರೋಗ್ಯ ಇಲಾಖೆಯ ಅಭಿಯಾನ ನಾಗರಿಕರಿಗೊಂದು ಸವಾಲ್ ಗೆ ಇಂದು ಚಾಲನೆ ನೀಡಲಾಯಿತು. ಜಿ.ಪಂ.ಉತ್ತರಕನ್ನಡ ಮತ್ತು ತಾಲೂಕಾ ಆರೊಗ್ಯಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತ ಆಶ್ರಯದ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ ತಾ.ಪಂ.ಕಾ.ನಿ.ಅ. ಪ್ರಕಾಶ್ ರಾವ್ ನಗರವಾಸಿಗಳಿಗಿಂತ ಹೆಚ್ಚಾಗಿ ಗ್ರಾಮೀಣ ಜನರಿಗೆ ಮತ್ತು ಎಳೆಯರಿಗೆ ಆರೋಗ್ಯ ಜಾಗೃತಿಮಾಡುವ ಅವಶ್ಯಕತೆಯಿದ್ದು ನಾಗರಿಕರಿಗೊಂದು ಸವಾಲ್ ಈ ಕೊರತೆ ತುಂಬಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ ಮಂಜುಳ ಭಜಂತ್ರಿ ಮಾತನಾಡಿ ವೈಯಕ್ತಿಕ ಸ್ವಚ್ಛತೆ ಜೊತೆಗೆ ನಮ್ಮ ಪರಿಸರ ಶುದ್ಧವಾಗಿದ್ದಾಗ ಮಾತ್ರ ರೋಗ ರುಜಿನಗಳಿಂದ ಮುಕ್ತಿ ಸಾಧ್ಯ ಎಂದರು.
ನಾಗರಿಕರಿಗೊಂದು ಸವಾಲ್ ಬಗ್ಗೆ ವಿವರಿಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ನಾಯ್ಕ ಸೊಳ್ಳೆಗಳಿಂದ ಬರುವ ರೋಗಗಳು ಮತ್ತು ಸೊಳ್ಳೆ ಉತ್ಫಾದನೆಯಾಗುವ ಸಾಧ್ಯತೆಗಳನ್ನು ಪ್ರಾತ್ಯಕ್ಷಿಕೆಗಳೊಂದಿಗೆ ವಿವರಿಸಿದರು.
ಸ್ವಯಂ ಸೇವಕರು ಮತ್ತು ಆಶಾ ಕಾರ್ಯಕರ್ತೆಯರು ತಾಲೂಕಿನ 23 ಸಾವಿರ ಮನೆಗಳಿಗೆ ತೆರಳಿ ಉತ್ತಮ ಮನೆ,ಉತ್ತಮಗ್ರಾಮ, ಉತ್ತಮ ಪಂಚಾಯತ್ ಮತ್ತು ಉತ್ತಮ ತಾಲೂಕುಗಳನ್ನು ನಿರ್ಧರಿಸಲಿದ್ದಾರೆ.
-ಡಾ.ಲಕ್ಷ್ಮೀಕಾಂತ್ ನಾಯ್ಕ
ಸಿದ್ಧಾಪುರ ಪಟ್ಟಣದಲ್ಲಿ ನೀರಿನ ಸಂಗ್ರಹಾರಗಳು, ಅವುಗಳ ಬಳಿ ಸ್ವಚ್ಛತೆ ಇಲ್ಲ. ಸಾರ್ವಜನಿಕರಿಗೆ ಪೂರೈಸುವ ಪ.ಪಂ. ನೀರು ಶುದ್ಧೀಕರಣವಾಗುತ್ತಿಲ್ಲ. ನಗರ ವ್ಯಾಪ್ತಿಯ ಇಂಥ ಅನೇಕ ಸಮಸ್ಯೆಗಳ ಬಗ್ಗೆ ಪಟ್ಟಣ ಪಂಚಾಯತ್ ಗಮನಹರಿಸಬೇಕು.
-ಮೀರಾಸಾಬ್‍ವಿ.ಕ.ಸಾಧಕರ ಪಟ್ಟಿಯಲ್ಲಿ ವಿನಾಯಕ ನಾಯ್ಕ
ಸಿದ್ದಾಪುರ ತಾಲೂಕಿನ ಕಿಲಾರದ ಯುವಕ ವಿನಾಯಕ ನಾಯ್ಕ ವಿಜಯ ಕರ್ನಾಟಕ ಪತ್ರಿಕೆಯ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿಜಯಕರ್ನಾಟಕ ಪತ್ರಿಕೆ ಪ್ರತಿವರ್ಷ ನೀಡುವ ಈ ಗೌರವ ರಾಜ್ಯದ ಸಾಧಕರನ್ನು ಗುರುತಿಸುತ್ತದೆ. ಕಿಲಾರದ ಕೃಷಿ ಕುಟುಂಬದ ವಿನಾಯಕ ನಾಯ್ಕ ಹುಬ್ಬಳ್ಳಿಯಲ್ಲಿ ವೆಬ್‍ಟಾಕ್ ಮಿನಿ ಎಟಿಎಂ,ಹಾಗೂ ಸರ್ಜೆನ್ಸಿಯಾ ಇಂಟರ್ ನ್ಯಾಷನಲ್ ಟೂರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆ ನಡೆಸುತ್ತಾರೆ. ಖಾಸಗಿ ಜೀವವಿಮಾ ಕಂಪನಿಯ ಉದ್ಯೋಗಿಯಾಗಿದ್ದ ವಿನಾಯಕ ನಾಯ್ಕ ನಂತರ ತಮ್ಮದೇ ಸಂಸ್ಥೆ ಕಟ್ಟಿಕೊಂಡು ರಾಜ್ಯದ ಕೆಲವು ಜಿಲ್ಲೆ ತಾಲೂಕುಗಳಲ್ಲಿ ತಮ್ಮ ಸಂಸ್ಥೆಯ ವಿಭಾಗಗಳನ್ನು ಹೊಂದಿದ್ದಾರೆ.


