ನಾಗರಿಕರಿಗೊಂದು ಸವಾಲ್ ಪ್ರಾರಂಭ

ಆರೋಗ್ಯ ಇಲಾಖೆಯ ಅಭಿಯಾನ ನಾಗರಿಕರಿಗೊಂದು ಸವಾಲ್ ಗೆ ಇಂದು ಚಾಲನೆ ನೀಡಲಾಯಿತು. ಜಿ.ಪಂ.ಉತ್ತರಕನ್ನಡ ಮತ್ತು ತಾಲೂಕಾ ಆರೊಗ್ಯಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತ ಆಶ್ರಯದ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದ ತಾ.ಪಂ.ಕಾ.ನಿ.ಅ. ಪ್ರಕಾಶ್ ರಾವ್ ನಗರವಾಸಿಗಳಿಗಿಂತ ಹೆಚ್ಚಾಗಿ ಗ್ರಾಮೀಣ ಜನರಿಗೆ ಮತ್ತು ಎಳೆಯರಿಗೆ ಆರೋಗ್ಯ ಜಾಗೃತಿಮಾಡುವ ಅವಶ್ಯಕತೆಯಿದ್ದು ನಾಗರಿಕರಿಗೊಂದು ಸವಾಲ್ ಈ ಕೊರತೆ ತುಂಬಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸಿಲ್ದಾರ ಮಂಜುಳ ಭಜಂತ್ರಿ ಮಾತನಾಡಿ ವೈಯಕ್ತಿಕ ಸ್ವಚ್ಛತೆ ಜೊತೆಗೆ ನಮ್ಮ ಪರಿಸರ ಶುದ್ಧವಾಗಿದ್ದಾಗ ಮಾತ್ರ ರೋಗ ರುಜಿನಗಳಿಂದ ಮುಕ್ತಿ ಸಾಧ್ಯ ಎಂದರು.
ನಾಗರಿಕರಿಗೊಂದು ಸವಾಲ್ ಬಗ್ಗೆ ವಿವರಿಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ನಾಯ್ಕ ಸೊಳ್ಳೆಗಳಿಂದ ಬರುವ ರೋಗಗಳು ಮತ್ತು ಸೊಳ್ಳೆ ಉತ್ಫಾದನೆಯಾಗುವ ಸಾಧ್ಯತೆಗಳನ್ನು ಪ್ರಾತ್ಯಕ್ಷಿಕೆಗಳೊಂದಿಗೆ ವಿವರಿಸಿದರು.
ಸ್ವಯಂ ಸೇವಕರು ಮತ್ತು ಆಶಾ ಕಾರ್ಯಕರ್ತೆಯರು ತಾಲೂಕಿನ 23 ಸಾವಿರ ಮನೆಗಳಿಗೆ ತೆರಳಿ ಉತ್ತಮ ಮನೆ,ಉತ್ತಮಗ್ರಾಮ, ಉತ್ತಮ ಪಂಚಾಯತ್ ಮತ್ತು ಉತ್ತಮ ತಾಲೂಕುಗಳನ್ನು ನಿರ್ಧರಿಸಲಿದ್ದಾರೆ.
-ಡಾ.ಲಕ್ಷ್ಮೀಕಾಂತ್ ನಾಯ್ಕ
ಸಿದ್ಧಾಪುರ ಪಟ್ಟಣದಲ್ಲಿ ನೀರಿನ ಸಂಗ್ರಹಾರಗಳು, ಅವುಗಳ ಬಳಿ ಸ್ವಚ್ಛತೆ ಇಲ್ಲ. ಸಾರ್ವಜನಿಕರಿಗೆ ಪೂರೈಸುವ ಪ.ಪಂ. ನೀರು ಶುದ್ಧೀಕರಣವಾಗುತ್ತಿಲ್ಲ. ನಗರ ವ್ಯಾಪ್ತಿಯ ಇಂಥ ಅನೇಕ ಸಮಸ್ಯೆಗಳ ಬಗ್ಗೆ ಪಟ್ಟಣ ಪಂಚಾಯತ್ ಗಮನಹರಿಸಬೇಕು.
-ಮೀರಾಸಾಬ್‍ವಿ.ಕ.ಸಾಧಕರ ಪಟ್ಟಿಯಲ್ಲಿ ವಿನಾಯಕ ನಾಯ್ಕ
ಸಿದ್ದಾಪುರ ತಾಲೂಕಿನ ಕಿಲಾರದ ಯುವಕ ವಿನಾಯಕ ನಾಯ್ಕ ವಿಜಯ ಕರ್ನಾಟಕ ಪತ್ರಿಕೆಯ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿಜಯಕರ್ನಾಟಕ ಪತ್ರಿಕೆ ಪ್ರತಿವರ್ಷ ನೀಡುವ ಈ ಗೌರವ ರಾಜ್ಯದ ಸಾಧಕರನ್ನು ಗುರುತಿಸುತ್ತದೆ. ಕಿಲಾರದ ಕೃಷಿ ಕುಟುಂಬದ ವಿನಾಯಕ ನಾಯ್ಕ ಹುಬ್ಬಳ್ಳಿಯಲ್ಲಿ ವೆಬ್‍ಟಾಕ್ ಮಿನಿ ಎಟಿಎಂ,ಹಾಗೂ ಸರ್ಜೆನ್ಸಿಯಾ ಇಂಟರ್ ನ್ಯಾಷನಲ್ ಟೂರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆ ನಡೆಸುತ್ತಾರೆ. ಖಾಸಗಿ ಜೀವವಿಮಾ ಕಂಪನಿಯ ಉದ್ಯೋಗಿಯಾಗಿದ್ದ ವಿನಾಯಕ ನಾಯ್ಕ ನಂತರ ತಮ್ಮದೇ ಸಂಸ್ಥೆ ಕಟ್ಟಿಕೊಂಡು ರಾಜ್ಯದ ಕೆಲವು ಜಿಲ್ಲೆ ತಾಲೂಕುಗಳಲ್ಲಿ ತಮ್ಮ ಸಂಸ್ಥೆಯ ವಿಭಾಗಗಳನ್ನು ಹೊಂದಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *