

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಮರುಚುನಾವಣೆ ಕಾಂಗ್ರೆಸ್ ಬಿ.ಜೆ.ಪಿ.ಗಳ ಜಿದ್ದಿನ ಕಣವಾದರೂ ಈ ಪಕ್ಷಗಳೊಂದಿಗೆ ಕೆಲವರು ಸ್ಫರ್ಧಿಸಿ ಸುದ್ದಿಮಾಡುತಿದ್ದಾರೆ. ಹೀಗೆ ಚುನಾವಣೆಯ ಸ್ಫರ್ಧೆ ಕಾರಣಕ್ಕೆ ಪ್ರಸಿದ್ಧರಾದವರು ಚೈತ್ರಾಗೌಡ.
ಚೈತ್ರಾಗೌಡಾ ಸಿದ್ಧಾಪುರ ತಾಲೂಕಿನ ಗೊಣವತ್ತಿಯ ಆನಂದಗೌಡರ ಮಗಳು. ಹಿರಿಯ ಅಧಿಕಾರಿಯಾಗಿ ದಂಪತಿಗಳಿಬ್ಬರೂ ವಕೀಲರಾಗಿ ಒಮ್ಮೆ ಶಿರಸಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ದಿಸಿ ಹೆಸರುಮಾಡಿರುವ ಆನಂದ ಗೌಡ ಮತ್ತವರ ಕುಟುಂಬ ಸಿದ್ದಾಪುರದ ಶಿಕ್ಷಿತ ಒಕ್ಕಲಿಗರ ಪರಿವಾರ.
ಶಿಕ್ಷಣ,ಕೃಷಿ,ಸಾಮಾಜಿಕ ಚಟುವಟಿಕೆಗಳ ಮೂಲಕ ಪ್ರಸಿದ್ಧವಾಗಿರುವ ಈ ಗೊಣವತ್ತಿ ಗೌಡರ ಕುಟುಂಬದ ಮಗಳು ಚೈತ್ರಾ ಎಂ.ಬಿ.ಎ. ಪದಿವಿಧರೆ.ಜನತಾದಳ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದ ಪ್ರಮುಖ ಸಂಘ,ಸಂಸ್ಥೆಗಳಲ್ಲಿ ಕೆಲಸಮಾಡಿರುವ ಚೈತ್ರಾ ಡಿ.5 ರಂದು ನಡೆಯಲಿರುವ ಯಲ್ಲಾಪುರ ಕ್ಷೇತ್ರದಲ್ಲಿ ಜಾ.ದಳದ ಅಭ್ಯರ್ಥಿ.
ನ.18 ರಂದು ನಾಮಪತ್ರ ಸಲ್ಲಿಸಲಿರುವ ಚೈತ್ರಾಗೌಡ ಶ್ರೀಮಂತರು, ಪ್ರಮುಖ ಪಕ್ಷಗಳು, ಪ್ರಭಾವಿಗಳು,ಪ್ರಮುಖರೆದುರು ಮಹಿಳೆ,ಯುವತಿ ಹೊಸಸ್ಫರ್ಧಿಯಾಗಿ ಕಣಕ್ಕಿಳಿದಿರುವ ಇವರ ವಾಸ್ತವ್ಯ,ಶಿಕ್ಷಣ ಶಿರಸಿಯಲ್ಲಾದರೂ ಮೂಲತ: ಸಿದ್ಧಾಪುರದವರಾಗಿ ಯಲ್ಲಾಪುರದ ಅಭ್ಯರ್ಥಿಯಾಗಿರುವುದು ವಿಶೇಶ.
