

ಸಿದ್ದಾಪುರ ತಾಲೂಕಿನ ನೆಲಮಾಂವ ಸೇವಾ ಸಹಕಾರಿ ಸಂಘ ದ ಶತಮಾನೋತ್ಸವ ಕಾರ್ಯಕ್ರಮ ನವೆಂಬರ 24 ರಂದು 10 ಗಂಟೆಗೆ ನಡೆಯಲಿದೆ ಎಂದು ಸಂಘದ ಪ್ರಮುಖರು ಪತ್ರಿಕಾಗೊಷ್ಟಿಯಲ್ಲಿ ತಿಳಿಸಿದ್ದಾರೆ.
ಟಿ ಎಂ.ಎಸ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿಷಯ ತಿಳಿಸಿದ ಅವರು ಸೇವಾ ಸಹಕಾರಿ ಸಂಘಕ್ಕೆ ನೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಸಭಾ ಕಾರ್ಯಕ್ರಮ ಸಂಘದ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ, ಹಿರಿಯ ಸಹಕಾರಿಗಳಿಗೆ ಸನ್ಮಾನ, ವಿಚಾರ ಗೋಷ್ಟಿ ಕವ್ವಾಲಿ, ಸಂಗೀತ ಕಾರ್ಯಕ್ರಮ, ಡೊಳ್ಳು ಕುಣಿತ, ಹಾಗೂ ಕೋಲಾಟ, ಮತ್ತು ಯಕ್ಷಗಾನ ಪ್ರದರ್ಶನಗೊಳ್ಳಿಲಿವೆ ಎಂದರು.
ಮುಂಜಾನೆ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್ ಸತೀಶಚಂದ್ರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಾಯ ಗಣಪತಿ ಹೆಗಡೆ ಗುಬ್ಬಗೋಣ ವಹಿಸಲಿದ್ದಾರೆ. ಭಾವಚಿತ್ರ ಅನಾವರಣವನ್ನು ಶಿವಮೊಗ್ಗ ಕೆ.ಆರ್.ಎ.ಎಮ್ ಅಧ್ಯಕ್ಷ ಎಚ್ .ಎಸ್. ಮಂಜಪ್ಪ ಗೊಳಿಸಲಿದ್ದಾರೆ. ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಂಡಳ ನಿಯಮಿತದ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಸಂಘದ ಮಾಜಿ ಹಾಗೂ ಸೇವಾ ನಿವೃತ್ತರಿಗೆ ಟಿ ಎಸ.ಎಸ್. ಅಧ್ಯಕ್ಷ ಶಾಂತಾರಾಮ ವಿ.ಹೆಗಡೆ ಶೀಗೆಹಳ್ಳಿ ಸನ್ಮಾನಿಸಲಿದ್ದಾರೆ.
ನ. 22 ರಂದು ಕಥಾ ಕಮ್ಮಟ
ಇಂಡಿಯಾ ಫೌಂಡೇಷನ್ ಫಾರ್ ದಿ ಆಟ್ರ್ಸ್ ಬೆಂಗಳೂರು ಪ್ರಾಯೋಜಿತ ‘ಹಕ್ಕಿಗಳು ಹಾರುತಿವೆ ನೋಡಿದಿರಾ?!’ ಯೋಜನೆಯಲ್ಲಿ ಆನಗೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 22 ರಂದು ‘ಪ್ರಾಣಿ-ಪಕ್ಷಿ ಕತೆಗಳ ರಚನೆ’ ಕುರಿತು ಮಕ್ಕಳಿಗಾಗಿ ಒಂದು ದಿನದ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ. ಕಮ್ಮಟವನ್ನು ಕವಿ, ಕತೆಗಾರ ಸುಬ್ರಾಯ ಬಿದ್ರೆಮನೆ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕ ವರದಿಗಾರರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಉಪಾಧ್ಯಕ್ಷ ಜಿ ಎನ್ ಭಟ್ಟ ಆಗಮಿಸಲಿದ್ದಾರೆ. ಮುಖ್ಯಾಧ್ಯಾಪಕ ಸುಧಾಕರ ನಾಯಕ ಉಪಸ್ಥಿತರಿರಲಿದ್ದಾರೆಂದು ಐಎಫ್‍ಎ ಗ್ರ್ಯಾಂಟಿ ಗಣೇಶ ಪಿ. ನಾಡೋರ ತಿಳಿಸಿದ್ದಾರೆ.
ತುಂಬು ಕುಟುಂಬವನ್ನೇ ಕೊಂದ 4 ಜನರ ಮತ್ತೊಂದು ಕುಟುಂಬಕ್ಕೆ ಜೀವಾವಧಿ ಶಿಕ್ಷೆ,ಬಾಧಿತರಿಗೆ 50ಸಾ.ಪರಿಹಾರ
ಸಿದ್ಧಾಪುರ ತಾಲೂಕಿನ ಕಾನಗೋಡಿನಲ್ಲಿ ಕಳೆದ ವರ್ಷ ಜೋಡಿಕೊಲೆಮತ್ತು ಒಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೆ ಪ್ರಯತ್ನಿಸಿದ್ದ ಒಂದೇ ಕುಟುಂಬದ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಜಿಲ್ಲಾ ಸತ್ರ ನ್ಯಾಯಾಲಯ ಇದೇ ನಾಲ್ವರಿಗೆ ತಲಾ 25 ಸಾವಿರ ದಂಡ ವಿಧಿಸಿದೆ.
ಈ ದಂಡದಲ್ಲಿ ಬಾಧಿತ ಕುಟುಂಬಕ್ಕೆ 50 ಸಾವಿರ ಪರಿಹಾರ ಘೋಶಿಸಿದ ನ್ಯಾಯಾಲಯ 25 ಸಾವಿರ ರೂಪಾಯಿ ತುಂಬದಿದ್ದರೆ(ದಂಡಪಾವತಿ) 14 ವರ್ಷಗಳ ನಂತರ ಮತ್ತೆ 3 ತಿಂಗಳ ಹೆಚ್ಚುವರಿ ಸಾದಾ ಶಿಕ್ಷೆಯ ತೀರ್ಪು ನೀಡಿದೆ.
2018ರ ಫೆಬ್ರುವರಿಯಲ್ಲಿ ಕಾನಗೋಡಿನ ಕನ್ನಾ ನಾಯ್ಕ ಮತ್ತವರ ಕುಟುಂಬದ ರವಿ ಮತ್ತು ರೇಣುಕಾರನ್ನು ಹತ್ಯೆ ಮಾಡುವ ಪ್ರಯತ್ನದಲ್ಲಿ ಕನ್ನಾ ನಾಯ್ಕ ಕೂದಲೆಳೆ ಅಂತರದಲ್ಲಿ ಕೊಲೆಯಿಂದ ಬಚಾವಾಗಿದ್ದರು.
