ಲೋಕಲ್ news – ಸಾಧಕರಿಗೆ ಸನ್ಮಾನ & ಮಳೆ ಹಾನಿ

ಸಿದ್ದಾಪುರ :- ಸಮಾಜಕ್ಕೆ ನಮ್ಮಿಂದಾದ ಕಿಂಚಿತ್ ಕೊಡುಗೆ ನೀಡಬೇಕು ಎನ್ನುವದನ್ನು ಯುವಕರು ಮರೆತಂತಿದೆ. ಆದರೆ ಹರೀಶ ಗೌಡರ್ ತಮ್ಮ ಜನ್ಮದಿನದ ಆಚರಣೆಯನ್ನು ಇಂದಿನ ಯುವಕರಿಗೆ ಮಾದರಿಯಾಗುವಂತೆ ಆಚರಿಸಿದ್ದಾರೆ‌ ಎಂದು ಶಿಕ್ಷಣ ಪ್ರಸಾರಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಭೂಷಣ ಹೆಗಡೆ ಹೇಳಿದರು.
ಅವರು ಪಟ್ಟಣದ ಬಾಲಭವನದಲ್ಲಿ ನಡೆದ
ಹರೀಶ ಎಸ್ ಗೌಡರ್ ಹರಳಿಕೊಪ್ಪ ರ ಸ್ನೇಹಿತರ ಬಳಗದ ವತಿಯಿಂದ ಹರೀಶ್ ಗೌಡರ ರವರ ಜನ್ಮ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಇಂದು ನಾಲ್ಕೈದು ಜನರು ಸೇರಿ ಜನ್ಮದಿನಾಚರಣೆಯಲ್ಲಿ ಬೇಡವಾದುದಕ್ಕೆ ಹಣ ಖರ್ಚು ಮಾಡುವ ಇಂದಿನ ದಿನದಲ್ಲಿ ಸಾಧಕರಿಗೆ ಸನ್ಮಾನ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದು ಅರ್ಥಪೂರ್ಣ ವಾಗಿದೆ.
ಹರೀಶ್ ಗೌಡರ್ ಜೀವನದಲ್ಲಿ ಪರಿಪಕ್ವವಾಗಿದ್ದಾರೆ. ಹಿಂದೆ ಆದ ಕಹಿ ಘಟನೆಗಳು ನಿಮ್ಮನ್ನು ಎತ್ತರದ ಮಟ್ಟಕ್ಕೆ ಒಯ್ಯುತ್ತವೆ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿಗಳಾದ ಉಪೇಂದ್ರ ಪೈ ಶಿರಸಿ ಮಾತನಾಡಿ, ಇದು ಮನ ಮುಟ್ಟುವ, ಮನ ತಟ್ಟುವ ಕಾರ್ಯಕ್ರಮ. ಜನಪರ ಹೋರಾಟ ಮತ್ತು ಸಮಾಜದ ಸೇವೆ ಮಾಡುವುದರಲ್ಲಿ ಕಹಿ ಘಟಕಗಳು ಸಾಮಾನ್ಯ, ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ, ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು. ‌ನಿಮ್ಮ ನೋವು ಮುಂದಿನ ಜೀವನದ ಪಾಠ.
ದ್ವೇಷ ಮಾಡಲಿಕ್ಕೆ ನಾವು ಶಾಶ್ವತವಲ್ಲ. ನಿಮ್ಮಿಂದ ಜನಪರ ಕಾರ್ಯಕ್ರಮಗಳು ಆಗಲಿ ಎಂದು ಹಾರೈಸಿದರು.


ರೈತ ಮಖಂಡರು, ಸಮಾಜ ಸೇವಕರಾದ ವೀರಭದ್ರ ನಾಯ್ಕ ಮಳವಳ್ಳಿ, ಸಮಾಜಮುಖಿ ಸಂಪಾದಕರಾದ ಕನ್ನೇಶ ಕೋಲಶಿರ್ಸಿ, ಕನ್ನಡಪರ ಸಂಘಟನೆ ಗಳ ಒಕ್ಕೂಟದ ಅಧ್ಯಕ್ಷರಾದ ಆಕಾಶ ಎಸ್ ಕೊಂಡ್ಲಿ, ಸತೀಶ್ ಹೆಗಡೆ, ಹರೀಶ ಎಸ್ ಗೌಡರ್ ವೇದಿಕೆಯಲ್ಲಿ ಇದ್ದರು.
ಜಾನಪದ ಕಲಾವಿದೆ ಲಿಲಾವತಿ ಎಸ್ ಕೊಂಡ್ಲಿ, ಯೋಗಪಟು ಮಂಜುನಾಥ ಎಮ್ ನಾಯ್ಕ, ಕರಾಟೆ ಪಟುಗಳಾದ ಆನಂದ ನಾಯ್ಕ, ಅಜೀತ್ ಕೊಡಿಯಾ, ಜಯಂತ ನಾಯ್ಕ, ಚೆಸ್ ಚಾಂಪಿಯನ್ ಭರತ ಹೆಗಡೆ ದೊಡ್ಮನೆ, ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ಗೀತಾ ನಾಯ್ಕ ರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಲೀಲಾವತಿ ಎಸ್ ಕೊಂಡ್ಲಿ ಪ್ರಾರ್ಥಿಸಿದರು.
ದಿನೇಶ್ ನಾಯ್ಕ ಸ್ವಾಗತಿಸಿದರು. ‌ ಗಣೇಶ ನಿರೂಪಿಸಿದರು.


ಇಂದು ಬೆಳಿಗ್ಗೆ ಸುರಿದ ಮಳೆ- ಗಾಳಿಯಿಂದಾಗಿ ಗೋ ಳಿಕೈ ಗ್ರಾಮದ ನಿವಾಸಿಯಾದ ಪುಟ್ಟ ಗಿರಿಯ ನಾಯ್ಕ್ ರವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಅಂದಾಜು 5000 ರೂ ಹಾನಿಯಾಗಿದ್ದು,ಯಾವುದೇ ಜನ – ಜಾನುವಾರು ಜೀವಹಾನಿ ಆಗಿರುವುದಿಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *