

ಮಹಾರಾಷ್ಟ್ರದಲ್ಲಿ ರಾಜಕೀಯ ಶಕ್ತಿಯ ದುರ್ಬಳಕೆ ಮಾಡಿ ರಾತ್ರೋ,ರಾತ್ರಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳಾಗಿದ್ದ ಫಡ್ನವೀಸ್ ಮತ್ತು ಅಜಿತ್ ಪವಾರ ರಾಜೀನಾಮೆ ಘೋಶಿಸುವ ಮೂಲಕ ಕೇಂದ್ರಸರ್ಕಾರದ ರಾಜಕೀಯ ಹಸ್ತಕ್ಷೇಪದ ಅಧಿಕಾರದ ಕಪಟನಾಟಕಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.
ಕಳೆದ ವಾರದ ಕೊನೆಯ ದಿನ ಪ್ರಧಾನಿಮೋದಿ, ರಾಷ್ಟ್ರಪತಿ,ಕೋವಿಂದ ಮತ್ತು ಮಹಾರಾಷ್ಟ್ರದ ರಾಜ್ಯಪಾಲರು ಸೇರಿ ರಾಜಕೀಯ ಲಾಭಕ್ಕಾಗಿ ಪ್ರಜಾಪ್ರಭುತ್ವ ವಿರೋಧಿಯಾದ ರಾತ್ರಿ ಸರ್ಕಾರ ರಚನೆಗೆ ಅವಕಾಶ ನೀಡಿದ್ದರು.
ಎನ್.ಸಿ.ಪಿ.ಯ ಅಜಿತ್ ಪವಾರ್ ರಿಗೆ ಹೆದರಿಸಿ, ಆಮಿಷತೋರಿಸಿ ರಾಜಕೀಯ ಲಾಭಕ್ಕೆ ಪ್ರಯತ್ನಿಸಿದ್ದ ಕೇಂದ್ರದ ಪ್ರಮುಖರ ತಂಡದ ಕುಟಿಲ ನೀತಿಗೆ ಇಂದಿನ ಸುಪ್ರೀಂ ಕೋಟ್ ತೀರ್ಪು ಅಂಕುಶ ಹಾಕಿದಂತಾಗಿದೆ.
ಕಳೆದ ಎರಡು ಅವಧಿಗಳಿಂದಿತ್ತೀಚಿನ ಅವಧಿಯಲ್ಲಿ ರಾಜಕೀಯ ಲಾಭಕ್ಕಾಗಿ ಅಧಿಕಾರ, ಆಡಳಿತ,ಅವಕಾಶ ಬಳಸಿಕೊಳ್ಳುತಿದ್ದ ಕೇಂದ್ರದ ರಾಜಕೀಯ ನಾಯಕರು ಕರ್ನಾಟಕದಲ್ಲಿ ಒಂದು ವರ್ಷದ ಕೆಳಗೆ ಅನುಭವಿಸಿದ್ದ ಕಪಾಳಮೋಕ್ಷದ ಅವಮಾನವನ್ನು ಮತ್ತೆ ಇಂದಿನ ಸುಪ್ರೀಂಕೋರ್ಟ್ ತೀರ್ಪಿನಿಂದ ಅನುಭವಿಸುವಂತಾಗಿದ್ದು ಇಂದಿನ ವಿದ್ಯಮಾನ.
ಮಹಾರಾಷ್ಟ್ರದಲ್ಲಿ ಶಿವಸೇನೆ,ಬಿ.ಜೆ.ಪಿ. ಚುನಾವಣಾ ಪೂರ್ವ ಹೊಂದಾಣಿಕೆಯಿಂದ ಚುನಾವಣೆ ಎದುರಿಸಿದ್ದು, ಅಧಿಕಾರ,ಅನುಕೂಲಕ್ಕಾಗಿ ಎರಡು ಪಕ್ಷಗಳು ಕಚ್ಚಾಡಿದ್ದು ನಂತರ ಶಿವಸೇನೆ ಬಿ.ಜೆ.ಪಿ.ಹೊರಗಿಟ್ಟು ಅಧಿಕಾರಕ್ಕಾಗಿ ಪ್ರಯತ್ನಿಸಿದ್ದು ಹಳೆ ಕತೆ. ನಂತರ ರಾತ್ರೋ ರಾತ್ರಿ ಕಳ್ಳರಂತೆ ಆಡಳಿತ ಯಂತ್ರ ದುರ್ಬಳಕೆ ಮಾಡಿ ಪ್ರಧಾನಿ, ರಾಷ್ಟ್ರಪತಿಗಳ ಚಿತಾವಣೆಯಿಂದ ಬಿ.ಜೆ.ಪಿ. ಅಧಿಕಾರಕ್ಕೇರಲು ಪ್ರಯತ್ನಿಸಿ ಸೋತಿದೆ.
ಈ ಪ್ರಹಸನಗಳ ಮಧ್ಯೆ ಸುಪ್ರೀಂ ಕೋರ್ಟ್ ಭಾಗವಹಿಸುವ ಅವಕಾಶವೇ ಇಲ್ಲದಿದ್ದಿದ್ದರೆ ಕೇಂದ್ರ ಸರ್ಕಾರ ಬಲಪ್ರಯೋಗ, ಕುಟಿಲತನ, ಅನ್ಯಾಯದ ಮಾರ್ಗಗಳ ಮೂಲಕವಾದರೂ ಸರ್ಕಾರ ರಚಿಸುತ್ತಿತ್ತು.
ನಂತರ ಸರ್ಕಾರದ ಅಧಿಕಾರ,ಅವಕಾಶದಿಂದ ಜನಾಭಿಪ್ರಾಯ ಖರೀದಿಸುತ್ತಿತ್ತು.
ಇಂಥ ಪ್ರಜಾಪ್ರಭುತ್ವ ವಿರೋಧಿ ಕೇಂದ್ರದ ಮತ್ತು ಬಿ.ಜೆ.ಪಿ. ಅನೀತಿಯ ರಾಜಕಾರಣಕ್ಕೆ ಅಂಕುಶ ಹಾಕಿರುವ ಸುಪ್ರೀಂಕೋರ್ಟ್ 24 ಗಂಟೆಗಳೊಳಗೆ ಬಹುಮತ ಸಾಬೀತು ಮಾಡುವ ಗಡುವು ನೀಡುತ್ತಲೇ ಮಧ್ಯ ರಾತ್ರಿಯ ಮುಖ್ಯಮಂತ್ರಿ.ಉಪಮುಖ್ಯಮಂತ್ರಿಗಳಾಗಿದ್ದ ಫಡ್ನವೀಸ್ ಮತ್ತು ಅಜಿತ್ ಪವಾರ ಉಪಾಯವಿಲ್ಲದೆ ರಾಜೀನಾಮೆ ಘೋಶಿಸಿದ್ದಾರೆ.
ಈ ಪ್ರಕರಣದಿಂದ ಕುಟಿಲ ತಂತ್ರಗಳು, ಅನೀತಿಯ ರಾಜಕಾರಣ ಮಾಡುವ ಅಮಿತ್ ಶಾ ಮತ್ತು ಪ್ರಧಾನಿಮೋದಿಯವರ ಚಾಣಾಕ್ಷ ತಂತ್ರ, ಚಾಣಕ್ಯ ನೀತಿಗಳೆಂಬ ಪೇಯ್ಡ್ ಮಾಧ್ಯಮಗಳ ಬಿರುದುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವುದು ಸಾಬೀತಾಗಿದೆ. ಇಂಥ ಸಂವಿಧಾನವಿರೋಧಿ,ರಾಷ್ಟ್ರವಿರೋಧಿ ನೀತಿಗಳನ್ನು ಮಾಡುತ್ತಿರುವ ವ್ಯವಸ್ಥೆ ಹಿಂದೂ ರಾಷ್ಟ್ರೀಯವಾದಿಗಳ ನೇತೃತ್ವದ ದೇಶಭಕ್ತರ ಪಕ್ಷ ಎಂಬುದು ವಿಪರ್ಯಾಸ.
ನ.28 ಕೋಡ್ಸರ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ
ಸಿದ್ದಾಪುರ
ತಾಲೂಕಿನ ಕೋಡ್ಸರ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ನ.28ರಂದು ದಿ.ಶಿವರಾಮ ನಾರಾಯಣಪ್ಪ ಹೆಗಡೆ ಪಾಟೀಲ್ ವೇದಿಕೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಗಣಪತಿ ಹೆಗಡೆ ಸಂಕದ್ಮನೆ ಹೇಳಿದರು.
ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘ 1919ರಲ್ಲಿ ಕಾನಸೂರಿನಲ್ಲಿ ಸ್ಥಾಪನೆಗೊಂಡು ಈಗ ಕೋಡ್ಸರದಲ್ಲಿ 1960ರಿಂದ ಸ್ವಂತ ಕಟ್ಟಡದೊಂದಿಗೆ ವ್ಯವಹಾರಮಾಡುತ್ತ ಬೆಳೆದುಬಂದಿದೆ.
ಆರಂಭದಿಂದಲೂ ಸಂಘದ ಸದಸ್ಯರ ಸಮಸ್ಯೆಗೆ ಸ್ಪಂದಿಸುತ್ತ ಬಂದಿದೆ. ಈಗ ಕೃಷಿ ಹಾಗೂ ಕೃಷಿಯೇತರ ಸಾಲಗಳನ್ನು ನೀಡುತ್ತ ಸದಸ್ಯರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಸಂಸ್ಥಾಪಕ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಿಂದ ಹಿಡಿದು ಇಂದಿನವರೆಗಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ, ಸಲಹೆ ಸೂಚನೆಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಲ್ಲದೆ ಸದಸ್ಯರ ಪ್ರಾಮಾಣಿಕ ವ್ಯವಹಾರವೂ ಸಂಘದ ಅಭಿವೃದ್ಧಿಗೆ ಪೂರಕವಾಗಿದೆ, ಶತಮಾನೋತ್ಸವದ ಸವಿನೆನಪಿಗಾಗಿ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಂಘದಲ್ಲಿ ಸೇವೆ ಸಲ್ಲಿಸಿದ ಎಲ್ಲ ಅಧ್ಯಕ್ಷರಿಗೆ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಗವುದು ಎಂದು ಹೇಳಿದರು.
ಉದ್ಘಾಟನೆ: ನ.28ರಂದು ಬೆಳಗ್ಗೆ 10.30ಕ್ಕೆ ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಗಣಪತಿ ಹೆಗಡೆ ಅಧ್ಯಕ್ಷತೆವಹಿಸುವರು.ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ತಟ್ಟೀಸರ ಗ್ರೂಪ್ ಸೇವಾ ಸಹಕಾರಿ ಸಂಘ ಮೇಲಿನ ಓಣಿಕೇರಿ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ, ಕೆಡಿಸಿಸಿ ಬ್ಯಾಂಕ್ ಎಂ.ಡಿ.ಎಸ್.ಪಿ.ಚವ್ಹಾಣ, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕಿ ಶಶಿಕಲಾ ಪಾಳೇದ, ಸಹಕಾರಿ ಸಂಘಗಳ ಸಹಾಯಕ ನಿರ್ದೇಶಕ ಎನ್.ಎನ್.ಹೆಗಡೆ ಉಪಸ್ಥಿತರಿರುತ್ತಾರೆ.
