

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸೇರಿದಂತೆ ಡಿ.5 ರಂದು ನಡೆಯುತ್ತಿರುವ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಯಲ್ಲಿ ಅನರ್ಹರು,ಬಿ.ಜೆ.ಪಿ. ಅಭ್ಯರ್ಥಿಗಳು,ಬಿ.ಜೆ.ಪಿ.ಪರವಾಗಿ ಮತಯಾಚಿಸುತ್ತಿರುವವರ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ವಾರ ಮೊದಲು ಎಚ್.ವಿಶ್ವನಾಥರಿಗೆ ಹುಣಸೂರು ಕ್ಷೇತ್ರದಲ್ಲಿ ತರಾಟೆಗೆ ತೆಗೆದುಕೊಂಡ ಮತದಾರರು. 2 ವರ್ಷಗಳಲ್ಲಿ ಎರಡೆರಡು,ಪಕ್ಷ ಚಿನ್ಹೆಗಳೊಂದಿಗೆ ಮತಬಿಕ್ಷೆಗೆ ಬಂದಿದ್ದೀರಿ ನಾಚಿಕೆಯಾಗುವುದಿಲ್ಲವೇ ಎಂದು ಮೂದಲಿಸಿದ ಪ್ರಸಂಗ ನಡೆದಿದ್ದರೆ,
ಮಂಗಳವಾರ ಯಲ್ಲಾಪುರ ಕ್ಷೇತ್ರದ ಬನವಾಸಿಭಾಗದಲ್ಲಿ ಪ್ರಚಾರಕ್ಕೆ ತೆರಳಿದ್ದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ರಿಗೆ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಬಂದಿದ್ದೀರಿ, ಹಿಂದೆ ಒಂದು ಪಕ್ಷ ಈ ಬಾರಿ ಅವರ ವಿರುದ್ಧ. ಮತದಾರರಾದ ನಾವೇನು ನಿಮ್ಮ ಗುಲಾಮರೆ ಎಂದು ಪ್ರಶ್ನಿಸಿ ಮತಕೇಳಲೂ ಅವಕಾಶ ಕೊಡದೆ ಕಾರು ಹತ್ತಿಸಿ ಕೈ ಬಿಟ್ಟ ಪ್ರಸಂಗ ನಡೆದಿದೆ.
ಇಂದು ಅಥಣಿಯಲ್ಲಿ ಬಿ.ಜೆ.ಪಿ.ಯ ಅನರ್ಹ ಶಾಸಕನ ಪರ ಮತ ಯಾಚನೆಗೆ ಹೋದ ಜಿ.ಪಂ. ಸದಸ್ಯನನ್ನು ಕೂಡಿಹಾಕಿ ಪಕ್ಷಾಂತರ, ಲಾಭಕ್ಕಾಗಿ ಸ್ಥಾನಮಾನ ಮಾರಿಕೊಂಡ ಅಭ್ಯರ್ಥಿಗಳು ಮತ್ತು ಅವರ ಪರವಾಗಿ ಹೋಗಿ ನಿರ್ಲಜ್ಜತನದಿಂದ ಮತ ಕೇಳುತ್ತಿರುವ ಅವರ ಅನುಯಾಯಿಗಳು, ಬಿ.ಜೆ.ಪಿ. ಬೆಂಬಲಿಗರಿಗೆ ತಕ್ಕ ಉತ್ತರ ನೀಡಿದ್ದು ವರದಿಯಾಗಿದೆ.
ಹೀಗೆ ಕೆಲವು ಕಡೆ ಮತದಾರರು ನೇರವಾಗಿ ಅನರ್ಹ ಶಾಸಕರು ಮತ್ತು ಅವರ ಬೆಂಬಲಿಗರಿಗೆ ಬೆವರು ತರಿಸುತ್ತಿದ್ದರೆ, ಬಹುತೇಕ ಮತದಾರರು ಜನಮತ ಖರೀದಿಸುವ ಬಿ.ಜೆ.ಪಿ. ಮತ್ತವರ ಬೆಂಬಲಿಗರು, ಅನರ್ಹ ಶಾಸಕರಿಗೆ ಶಪಿಸುತ್ತಾ ಮತದಾನದ ಮೂಲಕ ಪ್ರತಿಕ್ರೀಯಿಸಲು ಕಾಯುತಿದ್ದಾರೆ. ಆದರೆ ಯಲ್ಲಾಪುರ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಈ ಬಗ್ಗೆ ವರದಿಮಾಡದ ಮಾಧ್ಯಮಗಳು ಬಿ.ಜೆ.ಪಿ. ಮತ್ತು ಅನರ್ಹ ಶಾಸಕರ ಪರವಾಗಿ ಸಮೀಕ್ಷೆ ಬರೆದು ಋಣ ತೀರಿಸುತಿದ್ದಾರೆ. ಹೀಗೆ ಅನರ್ಹರು, ಬಿ.ಜೆ.ಪಿ. ಪರವಾಗಿ ಜನಾಭಿಪ್ರಾಯ ಸೃಷ್ಟಿಯಾಗುವಂತೆ ಬರೆದು, ಅವರ ಪರ ಜನಾಭಿಪ್ರಾಯ ಬಂದ ಮೇಲೆ ತಾವು ಬರೆದಂತೇ ಆಗಿದೆ ಎಂದುಕೊಳ್ಳುತ್ತಿರುವ ಮಾಧ್ಯಮಗಳುಜನವಿರೋಧಿಯಾಗಿ ವರ್ತಿಸುತ್ತಿರುವ ಬಗ್ಗೆಯೂ ಸಾರ್ವಜನಿಕರ ವಿರೋಧ ವ್ಯಕ್ತವಾಗುತ್ತಿದೆ.

ದೇಶಪಾಂಡೆ ವಿರುದ್ಧ ಘೋಷಣೆ ಕೂಗಿ ಸಂಘರ್ಷಕ್ಕೆ ಕಾರಣರಾದ ಬಿ.ಜೆ.ಪಿ.ಕಾರ್ಯಕರ್ತರು
ಯಲ್ಲಾಪುರ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿದ್ದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ವಿರುದ್ಧ ಬಿ.ಜೆ.ಪಿ. ಕಾರ್ಯಕರ್ತರು ಘೋಷಣೆ ಕೂಗಿ ಗಲಾಟೆಗೆ ಕಾರಣರಾದ ಪ್ರಸಂಗ ಶಿರಸಿ ದಾಸನಕೊಪ್ಪ ಬಳಿಯ ರಾಮಾಪುರದಲ್ಲಿ ಇಂದು ನಡೆದಿದೆ.
ಶಿವರಾಮ ಹೆಬ್ಬಾರ್ ಸೋಲಿಸಿ,ಭೀಮಣ್ಣ ನಾಯ್ಕರನ್ನು ಗೆಲ್ಲಿಸಲು ಪಣ ತೊಟ್ಟಿರುವ ಮಾಜಿ ಸಚಿವ ಆರ್.ವಿ.ದೇಶಪಾಂಡೆ ದಿನನಿತ್ಯ ಯಲ್ಲಾಪುರ, ಮುಂಡಗೋಡು ತಾಲೂಕುಗಳಲ್ಲಿ ಪ್ರಚಾರ ನಡೆಸುತಿದ್ದಾರೆ. ದೇಶಪಾಂಡೆಯವರ ನಿರಂತರ ಪ್ರಚಾರ, ಹೆಬ್ಬಾರ್ ವಿರುದ್ಧ ಜನಾಕ್ರೋಶದ ಹಿನ್ನೆಲೆಯಲ್ಲಿ ಇಂದು ರಾಮಾಪುರದಲ್ಲಿ ಖ್ಯಾತೆ ತೆಗೆದ ಬಿ.ಜೆ.ಪಿ. ಕಾರ್ಯಕರ್ತರು ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧ ಘೋಷಣೆ ಕೂಗಿ ಗಲಾಟೆಗೆ ಪ್ರಯತ್ನಿಸಿದರು.
ಆಗ ಅಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರಿಗೂ, ಬಿ.ಜೆ.ಪಿ. ಕಾರ್ಯಕರ್ತರಿಗೂ ಘರ್ಷಣೆ ಪ್ರಾರಂಭವಾಯಿತು. ಪೊಲೀಸರ ಸಕಾಲಿಕ ಪ್ರವೇಶದಿಂದ ಗುಂಪು ಘರ್ಷಣೆ ನಿಲ್ಲಿಸಿ, ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
