ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ದೀವರು ಮತ್ತು ನಾಮಧಾರಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಾಯ್ಕ ನನ್ಮಗ ಎಂದು ಹೀಗಳೆದು ಜಾತಿ ನಿಂದನೆ ಮಾಡಿದ ಪರ ಊರು ಮೂಲದ ಶಿರಸಿ ಸಾರಿಗೆ ನೌಕರನ ಮೇಲೆ ಕ್ರಮಕ್ಕೆ ಆಗ್ರಹಿಸಿ ನಾಮಧಾರಿ ಕೆ.ಎಸ್.ಆರ್.ಟಿ.ಸಿ. ನೌಕರರ
ಸಂಘ ಇಂದು ಶಿರಸಿಯಲ್ಲಿ ಪೊಲೀಸ್ ದೂರು ನೀಡಿರುವ ಬಗ್ಗೆ ಸುದ್ದಿಯಾಗಿದೆ.
ಕೆಲವು ದಿವಸಗಳ ಹಿಂದೆ ಶಿರಸಿ ಡಿಪೋ ವಾಹನ ಚಾಲಕರೊಬ್ಬರು ತಮ್ಮ ಇಲಾಖೆಯ ನಾಯ್ಕ ಎನ್ನುವ ಸಿಬ್ಬಂದಿ ಬಗ್ಗೆ ದೂರುತ್ತಾ ನಾಯ್ಕ ನನ್ಮಗ ಎಂದು ನಿಂದಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ಚರ್ಚೆಯಾಗಿ ದೀವರು ಮತ್ತು ನಾಮಧಾರಿ ಸಮೂದಾಯದ ಹೆಸರು ಎಳೆದು ತಂದದ್ದಕ್ಕಾಗಿ ಕ್ಷಮೆ ಯಾಚಿಸಬೇಕೆಂದು ನಾಮಧಾರಿ ಸಮಾಜದ ಸಿಬ್ಬಂದಿಗಳು ಆಗ್ರಹಿಸಿದ್ದರು. ಈ ಆಗ್ರಹ, ಅಭಿಪ್ರಾಯಗಳನ್ನು ಗೌರವಿಸದೆ ಉಡಾಫೆ ಮಾಡಿರುವ ನೌಕರನ ವಿರುದ್ಧ ಅವರ ಸಹೋದ್ಯೋಗಿ ನೌಕರರು ಜಾತಿ ನಿಂದನೆ,ಸಮೂದಾಯ ಹೀಗಳೆದ ಉಡಾಫೆ ತನಕ್ಕೆ ಆ ನೌಕರನಿಗೆ ಶಿಕ್ಷಸಬೇಕೆಂದು ಪೊಲೀಸ್ ದೂರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಪ್ರತಿಭಟಸಿರುವುದಾಗಿ ಖಚಿತ ಮೂಲಗಳು ಸಮಾಜಮುಖಿಗೆ ತಿಳಿಸಿವೆ.