ನಾಟಿವೈದ್ಯರನ್ನು ಗುರುತಿಸಲು ಮನವಿ

ಸಿದ್ದಾಪುರ; ತಾಲೂಕಿನ ಕಡಕೇರಿಯಲ್ಲಿ ನಬಾರ್ಡ ಕಾರವಾರ ಹಾಗೂ ಧಾನ್ ಫೌಂಡೇಶನ್ ಶಿರಸಿ ಸಹಯೋಗದಲ್ಲಿ ನಾಟಿ ಪಶು ವೈದ್ಯಕೀಯ ಪದ್ಧತಿ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ಥಳೀಯ ನಾಟಿ ವೈದ್ಯ ಗೋವಿಂದ ಜಿ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಲವಾರು ರೋಗಗಳನ್ನು ಗುಣ ಪಡಿಸುವ ಶಕ್ತಿ ನಾಟಿ ವೈದ್ಯಕೀಯ ಪದ್ಧತಿಗೆ ಇದೆ. ಇಂತಹ ವೈದ್ಯರನ್ನು ಗುರುತಿಸುವ ಕಾರ್ಯ ಸಮಾಜದಿಂದ ಆಗಬೇಕಿದೆ. ನಾಟಿ ಪದ್ಧತಿಯಿಂದ ಚಿಕಿತ್ಸೆ ಪಡೆದರೆ ಉತ್ತಮ ಆರೋಗ್ಯವನ್ನು ಮನೆಯಿಂದಲೇ ಪ್ರಾರಂಭಿಸಬಹುದು. ಇದಕ್ಕೆ ಎಲ್ಲರ ಪ್ರೋತ್ಸಾಹ, ಸಹಕಾರದ ಅಗತ್ಯತೆ ಇದೆ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅವರಗುಪ್ಪಾದ ನಾಟಿ ಪಶು ವೈದ್ಯ ರೇವಣ್ಣ ಬಂಗಾರಿ ನಾಯ್ಕ ಜಾನುವಾರುಗಳಿಗೆ ಬರುವ ರೋಗಗಳಿಗೆ ನಾಟಿ ಪದ್ಧತಿಯಲ್ಲಿ ತಕ್ಷಣದಲ್ಲಿಯೇ ನೀಡಬಹುದಾದ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.
ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕøತ ಎಂ.ಬಿ.ನಾಯ್ಕ, ಪ್ರಗತಿ ಪರ ಕೃಷಿಕ ಜಿ.ಕೆ.ಶಿಳಗೇರ್, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಹೇಮಾವತಿ ನಾಯ್ಕ ವೇದಿಕೆಯಲ್ಲಿದ್ದರು.
ಧಾನ್ ಫೌಂಟೇಶನ್‍ನ ಶಿರಸಿ ವಲಯ ಸಂಯೋಜಕ ಗಜಾನನ ಹೆಗಡೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ಧಾನ್ ಫೌಂಟೇಶನ್‍ನ ಸಿದ್ದಾಪುರ ಸಂಚಾಲಕ ಜಿ.ಬಿ.ನಾಯ್ಕ ಸ್ವಾಗತಿಸಿದರು. ಶಶಿಕಲಾ ನಾಯ್ಕ ವಂದಿಸಿದರು.
ಕಲ್ಲೂರಿನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಕ್ಕಳ ದಿನ ಆಚರಣೆ
ಸಿದ್ದಾಪುರ ತಾಲೂಕಿನಕಲ್ಲೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಮಕ್ಕಳು ನ.14ರಂದು ಭಾರತೀಯ ಸಂಸ್ಕøತಿ ಬಿಂಬಿಸುವ ಧೋತಿ, ಸಾರಿ, ಪಂಜೆಯುಟ್ಟು ಸಂಬ್ರಮಿಸಿದರು.
ಪಾಲಕರುತಮ್ಮ ಮಕ್ಕಳಿಗೆ ಉಡುಗೆತೊಡುಗೆ ಹಾಕಿ ಖುಷಿ ಪಟ್ಟರು.ನಂತರ ಮಕ್ಕಳಿಗಾಗಿ ಮನೋರಂಜನೆ ಕಾರ್ಯಕ್ರಮಗಳ ಜೊತೆಗೆ ವಿವಿಧ ಸ್ಪರ್ಧೆಗಳು ನಡೆದವು. ನಂತರ ಸಭಾಕಾರ್ಯಕ್ರಮದಲ್ಲಿ ಮಕ್ಕಳೇ ಸಭಾಕಾರ್ಯಕ್ರಮದಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಿದರು..ವಿಶೇಷವೆಂದರೆ ಮಕ್ಕಳೇ ವೇದಿಕೆಯ ಅಧ್ಯಕ್ಷ, ಅತಿಥಿ ಸ್ಥಾನದಲ್ಲಿದ್ದುಸಂಭ್ರಮಿಸಿದರು.

ತೆನೆ ಹೊರಲಿರುವ ಯುವತಿ ಯಾರು ಗೊತ್ತಾ?
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಮರುಚುನಾವಣೆ ಕಾಂಗ್ರೆಸ್ ಬಿ.ಜೆ.ಪಿ.ಗಳ ಜಿದ್ದಿನ ಕಣವಾದರೂ ಈ ಪಕ್ಷಗಳೊಂದಿಗೆ ಕೆಲವರು ಸ್ಫರ್ಧಿಸಿ ಸುದ್ದಿಮಾಡುತಿದ್ದಾರೆ. ಹೀಗೆ ಚುನಾವಣೆಯ ಸ್ಫರ್ಧೆ ಕಾರಣಕ್ಕೆ ಪ್ರಸಿದ್ಧರಾದವರು ಚೈತ್ರಾಗೌಡ.
ಚೈತ್ರಾಗೌಡಾ ಸಿದ್ಧಾಪುರ ತಾಲೂಕಿನ ಗೊಣವತ್ತಿಯ ಆನಂದಗೌಡರ ಮಗಳು. ಹಿರಿಯ ಅಧಿಕಾರಿಯಾಗಿ ದಂಪತಿಗಳಿಬ್ಬರೂ ವಕೀಲರಾಗಿ ಒಮ್ಮೆ ಶಿರಸಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ದಿಸಿ ಹೆಸರುಮಾಡಿರುವ ಆನಂದ ಗೌಡ ಮತ್ತವರ ಕುಟುಂಬ ಸಿದ್ದಾಪುರದ ಶಿಕ್ಷಿತ ಒಕ್ಕಲಿಗರ ಪರಿವಾರ.
ಶಿಕ್ಷಣ,ಕೃಷಿ,ಸಾಮಾಜಿಕ ಚಟುವಟಿಕೆಗಳ ಮೂಲಕ ಪ್ರಸಿದ್ಧವಾಗಿರುವ ಈ ಗೊಣವತ್ತಿ ಗೌಡರ ಕುಟುಂಬದ ಮಗಳು ಚೈತ್ರಾ ಎಂ.ಬಿ.ಎ. ಪದಿವಿಧರೆ.ಜನತಾದಳ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದ ಪ್ರಮುಖ ಸಂಘ,ಸಂಸ್ಥೆಗಳಲ್ಲಿ ಕೆಲಸಮಾಡಿರುವ ಚೈತ್ರಾ ಡಿ.5 ರಂದು ನಡೆಯಲಿರುವ ಯಲ್ಲಾಪುರ ಕ್ಷೇತ್ರದಲ್ಲಿ ಜಾ.ದಳದ ಅಭ್ಯರ್ಥಿ.
ನ.18 ರಂದು ನಾಮಪತ್ರ ಸಲ್ಲಿಸಲಿರುವ ಚೈತ್ರಾಗೌಡ ಶ್ರೀಮಂತರು, ಪ್ರಮುಖ ಪಕ್ಷಗಳು, ಪ್ರಭಾವಿಗಳು,ಪ್ರಮುಖರೆದುರು ಮಹಿಳೆ,ಯುವತಿ ಹೊಸಸ್ಫರ್ಧಿಯಾಗಿ ಕಣಕ್ಕಿಳಿದಿರುವ ಇವರ ವಾಸ್ತವ್ಯ,ಶಿಕ್ಷಣ ಶಿರಸಿಯಲ್ಲಾದರೂ ಮೂಲತ: ಸಿದ್ಧಾಪುರದವರಾಗಿ ಯಲ್ಲಾಪುರದ ಅಭ್ಯರ್ಥಿಯಾಗಿರುವುದು ವಿಶೇಶ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *