

ಕೇಂದ್ರಕ್ಕೆ ಹೊರಟಿದ್ದ ರಾಜ ರಾಜ್ಯದ ರಾಜನಾದ ಕತೆ
ಇದು ರೈತನಮಗ ದೇವರಾಜ್‍ಸಾಹಸಗಾಥೆ
ಕಳೆದ ಒಂದು ವರ್ಷದಿಂದೀಚೆಗೆ ತಾಲೂಕಾ ಕೃಷಿ ಸಹಾಯಕ ನಿರ್ಧೇಶಕರಾಗಿ ಸೇವೆ ಸಲ್ಲಿಸುತಿದ್ದ ದೇವರಾಜ್ ಈಗ ಕೆ.ಪಿ.ಎಸ್.ಸಿ. ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವ ಮೂಲಕ ಸಹಾಯಕ ಕಮೀಷನರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ದೇವರಾಜ್ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಮನೂರು ಹಾಲಗಳಲೆ ರೈತ ಕುಟುಂಬದ ಕುಡಿ. ಭಾರತೀಯ ಆಡಳಿತ ಸೇವೆ ಪರೀಕ್ಷೆ ತೇರ್ಗಡೆಯಾಗಿದ್ದ ದೇವರಾಜ್ 2 ವರ್ಷಗಳ ಕೆಳಗೆ ಅಂತಿಮ ಆಯ್ಕೆಯಲ್ಲಿ ಸ್ಫಲ್ಪ ಅಂಕಗಳ ಅಂತರದಿಂದ ಆಯ್.ಎ.ಎಸ್. ನಿಂದ ವಂಚಿತರಾಗಿದ್ದರು. ನಂತರ ಕೃಷಿ ಸಹಾಯಕ ನಿರ್ಧೇಶಕರಾಗಿ ಸೇವೆಗೆ ಸೇರಿದ್ದ ಅವರು ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆಯ ಪರೀಕ್ಷೆಗಳನ್ನು ಎದುರಿಸುತಿದ್ದರು.
ಮೊನ್ನೆ ಪ್ರಕಟವಾದ ಕೆ.ಪಿ.ಎಸ್.ಸಿ. ಆಯ್ಕೆ ಪಟ್ಟಿಯಲ್ಲಿ ಹೆಚ್ಚಿನ ಅಂಕಗಳಿಂದ ಎ.ಸಿ. ಹದ್ದೆಗೆ ಆಯ್ಕೆಯಾಗಿರುವ ಇವರು ಹೊಸವರ್ಷದಲ್ಲಿ ಸಹಾಯಕ ಕಮೀಷನರ್ ಆಗಿ ಸೇವೆಗೆ ಸೇರಲಿದ್ದಾರೆ. ಎಳೆಯರಿಗೆ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮಾಡುವ ದೇವರಾಜ್, ಧ್ಯೇಯ, ಗುರಿ ಸ್ಫಸ್ಟವಿದ್ದರೆ ಸಾಧನೆ ಕಷ್ಟಸಾಧ್ಯವಲ್ಲ, ಆದರೆ ಅಂದುಕೊಂಡಿದ್ದನ್ನು ಸಾಧಿಸದಿದ್ದರೂ ಆತ್ಮವಿಶ್ವಾಸದಿಂದಿರುವುದೇ ಸಾಧಕನ ಶಕ್ತಿ.
ಆತ್ಮವಿಶ್ವಾಸ, ನಂಬಿಕೆ ಕಳೆದು ಹೋದರೆಪರೀಕ್ಷೆ, ಜೀವನದಲ್ಲಿ ಸೋಲಬೇಕಾಗುತ್ತದೆ. ಪರೀಕ್ಷೆಯಲ್ಲಿ ಸೋತರೂ ಜೀವನದಲ್ಲಿ ಗೆಲ್ಲಲು ಹಲವು ಮಾರ್ಗಗಳಿವೆ. ಹಾಗಾಗಿ ಶ್ರಮ,ಸಂಯಮ,ಪ್ರಯತ್ನ, ಸಾಧಿಸುವ ಛಲ ಕೆಳಗೆಬಿದ್ದರೂ ಮತ್ತೆ ಏಳುವ ವಿಶ್ವಾಸವಿದ್ದರೆ ಸಾಧನೆ ಕಷ್ಟವಲ್ಲ ಎನ್ನುವ ಅವರ ಮಾತು ಎಳೆಯರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶಿ.
