ಅರಣ್ಯ ಭೂಮಿ ಹಕ್ಕು ಹೋರಾಟ-30 ನೇ ವರ್ಷ ಸ್ಮರಣ ಸಂಚಿಕೆ ಹೊರತರಲು ನಿರ್ಧಾರ

ಸಿದ್ದಾಪುರ: ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ಹೋರಾಟದ ಪ್ರಮುಖ ಅಂಶಗಳು ಕೂಡಿದ ದಾಖಲೆಗಳೊಂದಿಗೆ ಹಾಗೂ ಅರಣ್ಯ ಹಕ್ಕಿಗೆ ಸಂಬಂಧಿಸಿದ ಕಾನೂನು ಕೇಂದ್ರ ಮತ್ತು ರಾಜ್ಯ ಸರಕಾರದ ಸುತ್ತೋಲೆ ಒಳಗೊಂಡ ‘ ಅರಣ್ಯ ಭೂಮಿ ಹಕ್ಕು ಹೋರಾಟ-30 ನೇ ವರ್ಷ’ ಸ್ಮರಣ ಸಂಚಿಕೆಗಳನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಅವರು ಇಂದು ಸಿದ್ಧಾಪುರ ತಾಲೂಕಿನ, ನಿಲ್ಕುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜರುಗಿದ ಸ್ಮರಣ ಸಂಚಿಕೆಯ ಮಾಹಿತಿ ಕರಪತ್ರ ಬಿಡುಗಡೆ ಮಾಡುತ್ತಾ ಹೇಳಿದರು.

30 ವರ್ಷದಲ್ಲಿ ನಿರಂತರ ಸಂಘಟನೆ, ಹೋರಾಟ, ಆಂದೋಲನ, ಕಾನೂನಾತ್ಮಕ ಜಾಗೃತೆ ಅಡಿಯಲ್ಲಿ ಜರುಗಿಸಿದ ಕಾರ್ಯಕ್ರಮ ಐತಿಹಾಸಿಕ ಘಟನೆಗಳ ಸಂಗ್ರಹಗೊಂಡ ಸ್ಮರಣ ಸಂಚಿಕೆಯಲ್ಲಿ ಸೇರಿಸಲಾಗುವುದು ಎಂದು ಅವರು ಹೇಳಿದರು.

ಸ್ಮರಣ ಸಂಚಿಕೆ ತೆಗೆದುಕೊಳ್ಳುವವರು ಮುಂಚಿತವಾಗಿ ಕಾಯ್ದಿರಿಸುವಿಕೆಗೆ ಸ್ಮರಣೆ ಸಂಚಿಕೆಯ ವೆಚ್ಚ ರೂ. 200 (ರೂಪಾಯಿ ಎರಡು ನೂರು ಮಾತ್ರ) ಕೊಟ್ಟು ಕಾಯ್ದಿರಿಸಿಕೊಳ್ಳಲು ಕೋರಿಕೆ.

100 ಪುಟಗಳ 30 ಸಾವಿರ ಸ್ಮರಣ ಸಂಚಿಕೆ:

ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತಿ ನ್ಯಾಯಮೂರ್ತಿ ಮಾನ್ಯ ಶ್ರೀ ನಾಗಮೋಹನ್ ದಾಸ್ ಅವರ ಸಲಹೆಯಂತೆ ಹೋರಾಟದ ಮಹತ್ವ ಹೆಜ್ಜೆಗಳನ್ನು ಗುರುತಿಸುವ ದಿಶೆಯಲ್ಲಿ ಹಳ್ಳಿಯಿಂದ ಪ್ರಾರಂಭವಾದ ಹೋರಾಟ ಸರ್ವೋಚ್ಚ ನ್ಯಾಯಾಲಯ ನ್ಯೂ ಡೆಲ್ಲಿಯವರೆಗೂ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಗಳ ಅರ್ಜಿಗಳ ಸಮಗ್ರ ದಾಖಲೆಗಳ ಸುಮಾರು 100 ಪುಟಗಳ ಸ್ಮರಣ ಸಂಚಿಕೆ ತರಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಬೀರಾ ಗೌಡ ತಂಡಾಗುಂಡಿ  ವಹಿಸಿದ್ದರು, ನಾಗುಪತಿ ಗೌಡ ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ರವೀಶ್ ಗೌಡ, ಸೀತಾರಾಮ ಗೌಡ ನೀರಗಾನ ಜಿಲ್ಲಾ ಸಂಚಾಲಕರು, ಎಪಿಎಂಸಿ ಸದಸ್ಯರು ಸೀತಾರಾಮ ನಿಂಗಾ ಗೌಡ, ದೇವೆಗೌಡ ಹೆಗ್ಗೆ, ರಮೇಶ ನಾಯ್ಕ, ಮಂಜುನಾಥ ನಾಯ್ಕ ಹೊಂಡಗದ್ದೆ, ಸೀತಾರಾಮ ಗೌಡ ಹುಕ್ಕಳಿ ಮುಂತಾದವರು ಉಪಸ್ಥಿತರಿದ್ದರು.

ಕೃಷ್ಣಲೀಲಾ…..

ಸಿದ್ದಾಪುರ
ತಾಲೂಕಿನ ಗಾಳಿಜಡ್ಡಿ ಶಾಲಾ ಆವಾರದಲ್ಲಿ ಬೆಂಗಳೂರಿನ ಆಭಾರಿ ಟ್ರಸ್ಟ್ ನಿಂದ ಕೃಷ್ಣ ಲೀಲಾ ಯಕ್ಷಗಾನ ಹಾಗೂ ಸಾಧಕರಿಗೆ ಗೌರವ ಸಮರ್ಪಣೆ ಫೆ.13ರಂದು ಸಂಜೆ 6ರಿಂದ ನಡೆಯಲಿದೆ.
ಟಿಎಸ್‍ಎಸ್‍ನ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಉದ್ಘಾಟಿಸುವರು. ಅಶೋಕ ಹೆಗಡೆ ಹಿರೇಕೈ ಅಧ್ಯಕ್ಷತೆವಹಿಸುವರು. ಎಸ್‍ಡಿಎಂಸಿ ಅಧ್ಯಕ್ಷ ರಘುಪತಿ ಹೆಗಡೆ ಹೂಡೆಹದ್ದ, ಅನಂತ ಶಾನಭಾಗ ಹಾರ್ಸಿಕಟ್ಟಾ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ ಉಪಸ್ಥಿತರಿರುತ್ತಾರೆ.
ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ.
ನಂತರ ನಡೆಯಲಿರುವ ಕೃಷ್ಣ ಲೀಲಾ ಯಕ್ಷಗಾನದ ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ನಂದನ ಹೆಗಡೆ, ಶರತ್ ಹೆಗಡೆ ಜಾನಕೈ, ಭಾರ್ಗವ ಹೆಗ್ಗೋಡ ಸಹಕರಿಸುವರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *