

ಈ ತಿಂಗಳ ಪ್ರಾರಂಭದಿಂದ ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್ ಪೋರ್ಟಲ್ ಗಳಲ್ಲಿ ಸಿದ್ಧಾಪುರ ಮತ್ತು ಉತ್ತರಕನ್ನಡ ಜಿಲ್ಲೆಯ ಅಕ್ರಮ ವ್ಯವಹಾರಗಳ ಸರಣಿ ವರದಿಗಳು ಪ್ರಕಟವಾಗುತಿದ್ದಂತೆ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಸಿದ್ಧಾಪುರದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇದೇ ತಿಂಗಳು ಕನಿಷ್ಟ 25-30 ಜನರನ್ನು ಬಂಧಿಸಿದ್ದಾರೆ.
ಹೀಗೆ ಬಂಧಿತರಾದವರಲ್ಲಿ ಹೆಚ್ಚಿನವರು ಇಸ್ಫೀಟ್, ಜುಗಾರಿ, ಓ.ಸಿ. ಆಡುತಿದ್ದವರು, ಆಡಿಸುತಿದ್ದವರು ಎಂಬುದು ಗಮನಾರ್ಹ.
ಒಬ್ಬ ಕಾಲೇಜು ವಿದ್ಯಾರ್ಥಿ ಸರ್ಕಾರಿ ಕೃಪಾ ಪೋಷಿತ ಅಕ್ರಮ ದಂಧೆಗೆ ಬಲಿಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಸಮಾಜಮುಖಿ ವರದಿ ಮಾಡಿದ್ದಾಗ ಹಗಲು ದೇಶಭಕ್ತರು ರಾತ್ರಿ ದರೋಡೆಕೋರರು, ಕಳ್ಳರು ಆಗುವ ರಾಷ್ಟ್ರೀಯವಾದಿಗಳ ದುಷ್ಟ ಪರಿವಾರದ ಮಂಗಗಳ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಗುಲಾಮಿತನದ ಕೆಸರು ಕಕ್ಕಿಕೊಂಡದ್ದಿದೆ.
ಆದರೆ ಈ ಲಾಭಬಡುಕ ಸೋಗಲಾಡಿ ಮತಾಂಧ ಹುಚ್ಚುಶ್ವಾನಗಳ ಹುಚ್ಚು ಅರಚುವಿಕೆಗೆ ಯಾರೂ ಕ್ಯಾರೆ ಎನ್ನಲಿಲ್ಲ. ಸುದೈವವೆಂದರೆ ಈ ಮತಾಂಧ ದುಷ್ಟ ಪರಿವಾರದ ವ್ಯಭಿಚಾರಿ ಧಾರ್ಮಿಕರ ಸೋಗಲಾಡಿತನದ ರಾಷ್ಟ್ರೀಯ ಸುಳ್ಳುಗಾರ ಶ್ವಾನಗಳ ಕುಂಡೆಗೆ ಒದೆಯುವಂತೆ ಉತ್ತರ ಕನ್ನಡ ಪೊಲೀಸರು ಇಂದು ಸಿದ್ಧಾಪುರದ ಐಗಳಕೊಪ್ಪದಲ್ಲಿ ನಾಗರಾಜ ಗುಡ್ಡೆಮನೆ ಎನ್ನುವ ಅಕ್ರಮ ವ್ಯವಹಾರಿಯೊಂದಿಗೆ 8 ಜನರನ್ನು ಬಂಧಿಸಿದ್ದಾರೆ.
ನಿನ್ನೆ ಹೇಳಿಕೊಳ್ಳದ ಆರೋಪಕ್ಕೆ ತುತ್ತಾದ 3 ವಿದ್ಯಾರ್ಥಿಗಳ ಬಂಧನವಾಗಿದೆ.
ಇಂದು ಬೆಂಗಳೂರಿನಲ್ಲಿ ಕಂಟ್ರಿ ಪಿಸ್ತೂಲ್ ಗಳೊಂದಿಗೆ ಪೊಲೀಸರಿಗೆ ಸೆರೆ ಸಿಕ್ಕ ವ್ಯಕ್ತಿ ಸಿದ್ಧಾಪುರದವನು ಎನ್ನುವುದು ಆತಂಕದ ವಿಚಾರ.
ಹೀಗೆ ಸಿದ್ದಾಪುರದಂಥ ಪುಟ್ಟ ನಗರದ ಜನ ತಾಲೂಕು, ಜಿಲ್ಲೆ ರಾಜ್ಯಮಟ್ಟದ ವರೆಗೆ ಅಪರಾಧ ಚಟುವಟಿಕೆಗಳಲ್ಲಿ ಬಂಧಿತರಾಗುತಿದ್ದಾರೆ ಎಂದರೆ ಇವರ ಹಿಂದೆ ಅನೇಕ ವ್ಯವಸ್ಥಿತ ಜಾಲಗಳು ಕೆಲಸಮಾಡುತ್ತಿವೆ ಎಂದರ್ಥ.
ಇಂಥ ವ್ಯವಸ್ಥೆಯನ್ನು ಪೋಶಿಸುವ ಮುಖವಾಡದ ಉದ್ದಿಮೆದಾರರ ಮನೆಗೆ ಭೇಟಿ ನೀಡುವ ಇಲ್ಲಿಯ ಶಾಸಕ, ಸಂಸದರೇ ಈ ಅಕ್ರಮವ್ಯವಹಾರಗಳ ರಕ್ಷಕರು ಎನ್ನುವ ಮಾತು ಸಿದ್ಧಾಪುರದ ನಿತ್ಯ ಚರ್ಚೆಯ ವಿಷಯವಾಗಿದೆ.
ಸಮಾಜಮುಖಿ ಸೇರಿದಂತೆ ಕೆಲವು ಮಾಧ್ಯಮಗಳು ಮಾತ್ರಎಕ್ಸ್‍ಪೋಸ್ ಮಾಡಿದ ಈ ವ್ಯವಹಾರಗಳ ಹಿಂದೆ ಸಿದ್ಧಾಪುರ ಉತ್ತರ ಕನ್ನಡ ಜಿಲ್ಲೆಯ ಜನರ ಹಿತಾಸಕ್ತಿ, ಶಾಂತಿ ಸುವ್ಯವಸ್ಥೆಯ ಕಾಳಜಿ ಇದೆ.
ನಮ್ಮೆಲ್ಲಾ ಅನುಮಾನ, ಸಂಶಯಗಳನ್ನು ಅಕ್ರಮವ್ಯವಹಾರಿಗಳನ್ನು ಬಂಧಿಸುವ ಮೂಲಕ ದಿಟಮಾಡುತ್ತಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಸಮಾಜಮುಖಿ ಕೃತಜ್ಞತೆ ಸಲ್ಲಿಸುತ್ತದೆ.
ಈ ಹಿನ್ನೆಲೆಯಲ್ಲಿ ಉತ್ತಮ ಸಿದ್ಧಾಪುರ ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಿದ ತೃಪ್ತಿ ನಮಗಿದೆ. ಕನಿಷ್ಟ ರಾಜ್ಯದ ಶ್ರೇಷ್ಠ ಮನಸ್ಸುಗಳಾದರೂ ಇದನ್ನು ಗಮನಿಸುತ್ತಾರೆ ಎನ್ನುವ ನಂಬಿಕೆ ನಮಗಿದೆ. ಅಂದಹಾಗೆ ಸಿದ್ಧಾಪುರದ ಅಕ್ರಮ ಮದ್ಯಮಾರಾಟ, ಇಸ್ಪೀಟ್, ಜುಗಾರಿ, ಓ.ಸಿ. ಇನ್ನಿತರ ಅಕ್ರಮಗಳು ಇಷ್ಟಕ್ಕೆ ನಿಲ್ಲುತ್ತವೆ ಎನ್ನುವುದು ಕೇವಲ ನಮ್ಮ ಬೃಮೆಯಾಗಬಾರದಷ್ಟೇ.

