ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾದ 18 ಮೆಟ್ಟಿಲುಗಳ ನಿರ್ಮಾಣಕ್ಕೆ ಸಾರ್ವಜನಿಕರಿಂದ 900 ಕಿಲೋ ಕಂಚು,ಹಿತ್ತಾಳೆ,ತಾಮ್ರ ಸಂಗ್ರಹವಾಗಿದೆ. 5 ಲಕ್ಷ ವೆಚ್ಚದ ಧ್ವಜಸ್ಥಂಬ,6.5 ಲಕ್ಷಗಳ 18 ಮೆಟ್ಟಿಲುಗಳು ಈ ಜಾತ್ರೆಯ ಕಾರ್ಯಕ್ರಮದಲ್ಲಿ ಉದ್ಘಾಟನೆಯಾಗಲಿವೆ.sಸಕಲ ತಯಾರಿಗಳು ನಡೆದಿದ್ದು ಸ್ಥಳಿಯರು,ಸ್ಥಳಿಯ ಪ.ಪಂ. ಆಡಳಿತದ ನೆರವಿನಿಂದ ಶಿಸ್ತು,ಸ್ವಚ್ಛತೆ,ಸಂಬ್ರಮವನ್ನು ಹೆಚ್ಚಿಸಲಾಗಿದೆ.
-ಕೆ.ಜಿ.ನಾಗರಾಜ,ಜಾತ್ರಾ ಸಮೀತಿ ಅಧ್ಯಕ್ಷರು
ಸಿದ್ಧಾಪುರ ನಗರದ ಬಾಲಿಕೊಪ್ಪ ಬೆಟ್ಟದ ಐಯ್ಯಪ್ಪ ಸ್ವಾಮಿ ದೇವಾಲಯದ ವಾರ್ಷಿಕ ಜಾತ್ರೆ ಜನೇವರಿ 10 ರಿಂದ 15 ರ ವೆರೆಗೆ ನಡೆಯಲಿದೆ. ಈ ಬಗ್ಗೆ ಕರೆದ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಅಯ್ಯಪ್ಪಸ್ವಾಮಿ ಸೇವಾ ಸಮೀತಿ ಸದಸ್ಯರು ವರ್ಷದಿಂದ ವರ್ಷಕ್ಕೆ ಪ್ರಸಿದ್ಧವಾಗುತ್ತಿರುವ ಅಯ್ಯಪ್ಪ ಜಾತ್ರಾಮಹೋತ್ಸವ ಸಿದ್ಧಾಪುರದ ಉತ್ಸವವಾಗಿ ಜನಮನ ಸೆಳೆಯಲಿದೆ ಎಂದರು.
ಜ.11 ರ ಶನಿವಾರ ಸಾಮೂಹಿಕ ಅನ್ನಸಂಪರ್ತಣೆ ನಡೆಯಲಿದ್ದು ಎಲ್ಲರೂ ಅನ್ನಪ್ರಸಾದ ಸ್ವೀಕರಿಸಲು ಮನವಿ ಮಾಡಿದರು.
ಭೇದವಿಲ್ಲ- ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶ್ರೀಧರ ವೈದ್ಯ. ಎಲ್ಲರೂ ಪಾಲ್ಗೊಳ್ಳುವ ಸರ್ವಧರ್ಮ ದೇವಸ್ಥಾನ ಮತ್ತು ಜಾತ್ರೆ ಇದಾಗಿದ್ದು
ಈ ಜಾತ್ರೆಯಲ್ಲಿ ಸ್ಥಳಿಯ ಕಲಾವಿದರಿಗೆ ಆದ್ಯತೆ ನೀಡುವ ಸಾಂಸ್ಕøತಿಕ ಉತ್ಸವ ಆಗಲಿದೆ.ದೇವರ ಅಂಬಾರಿ ಮೆರವಣಿಗೆ ಶಿಸ್ತು,ಸುಂದರವಾಗಿ ನಡೆಯಲಿದೆ. ಜಾತ್ರೆ,ದೇವಸ್ಥಾನಗಳಲ್ಲಿ ಜಾತಿ,ಲಿಂಗ ಭೇದವಿಲ್ಲ. ಸ್ತ್ರೀ ಎಂದರೆ ಪ್ರಕೃತಿ,ಸೃಷ್ಟಿ-ಪ್ರಕೃತಿಗೆ ವಿರುದ್ಧವಾದ ಯಾವ ಆಚರಣೆ,ಸಂಪ್ರದಾಯಗಳೂ ಇಲ್ಲಿಲ್ಲ. ಎಂದರು.
ಕಣಹಬ್ಬ ಆಚರಣೆ
ಹೊಸಹೊಸ ತಂತ್ರಜ್ಞಾನ ಆವಿಶ್ಕಾರದಿಂದ ನಮ್ಮ ಸಂಸ್ಕøತಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಕಣಹಬ್ಬದಂತಹ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಕಣಹಬ್ಬದ ಆಚರಣೆಯಲ್ಲಿ ವಿಶೇಷತೆ ಅನ್ನುವುದಕ್ಕಿಂತಲೂ ಎಲೆಮರೆಯ ಕಾಯಿಯಂತಿದ್ದು ತಮಗರಿವಿಲ್ಲದಂತೆ ಪ್ರಾಮಾಣಿಕವಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಇಂದು ಸನ್ಮಾನಿಸಿರುವುದರಿಂದ ಹಬ್ಬಕ್ಕೆ ವಿಶೇಷ ಅರ್ಥ ಬಂದಿದೆ ಎಂದು ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಹೇಳಿದರು.
ಅವರು ತಾಲೂಕಿನ ಕಾನಳ್ಳಿಮಠದ ಪರಮೇಶ್ವರಯ್ಯ ಕಾನಳ್ಳಿಮಠರ ಪರಿವಾರದವರು ಆಯೋಜಿಸಿದ್ದ ಕಣಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮಲ್ಲಿ ಈಗ ಸಂಪ್ರದಾಯದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಸಂಘ ಸಂಸ್ಥೆಗಳು ಗುರುತಿಸಿ ಮಾಡಬೇಕಾದ ಕಾರ್ಯಗಳನ್ನು ಪರಮೇಶ್ವರರಯ್ಯ ವೈಯಕ್ತಿಕವಾಗಿ ಮಾಡುತ್ತಿದ್ದಾರೆ. ಗಿಡಮೂಲಿಕೆ ಔಷಧಿ ಕೊಡುತ್ತಿರುವವರ ಸಂಖ್ಯೆ ಕ್ಷೀಣಿಸುತ್ತಿದೆ. ಅವರು ಮುಂದಿನ ಜನಾಂಗಕ್ಕೆ ಗಿಡಮೂಲಿಕೆಯನ್ನು ಪರಿಚಯಿಸಬೇಕು. ಕೃಷಿ ಸಂಸ್ಕøತಿಯ ಅಂಗವಾಗಿ ಈ ಕಾರ್ಯ ವಿಶಿಷ್ಠ ಪೂರ್ಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾಟಿ ವೈದ್ಯ ಅವರಗುಪ್ಪಾದ ಹಾಲಾ ಹಾಲಾ ನಾಯ್ಕ, ಸೂಲಗಿತ್ತಿಯಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ ಕಾಳಮ್ಮ ಜಟ್ಯ ಮಡಿವಾಳ, (ಅವರ ಪರವಾಗಿ ಅವರ ಮಗ ಬಸವರಾಜ ಸನ್ಮಾನ ಸ್ವಿಕರಿಸಿದರು),