

ದೇಶದಲ್ಲಿ ನಾನಾ ಕಾನೂನು-ಕಾಯಿದೆ ಜಾರಿ ಮಾಡಲು ಹವಣಿಸುತ್ತಿರುವ ಕೇಂದ್ರ ಸರ್ಕಾರ ಜನರ ಅಗತ್ಯ ಆಧಾರ್‍ಕಾರ್ಡ್ ನೀಡಿಕೆ,ತಿದ್ದುಪಡಿ ಮಾಡುತ್ತಿಲ್ಲ ಎನ್ನುವ ಆರೋಪ ಬಲವಾಗುತ್ತಿದೆ.
ಈ ಬಗ್ಗೆ ರಾಷ್ಟ್ರಪತಿಗಳಿಗೆ ಮನವಿ ಮಾಡಿ, ಪರಿಹಾರ ಕೋರಿರುವ ಜೆ.ಡಿ.ಎಸ್. ಜಿಲ್ಲಾ ಅಲ್ಫಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಖ್ ರಾಜ್ಯ ವಿಧಾನಸಭಾ ಅಧ್ಯಕ್ಷರು, ಮಾಜಿ ಕೇಂದ್ರ ಸಚಿವರು ಪ್ರತಿನಿಧಿಸುವ ಶಿರಸಿ ಕ್ಷೇತ್ರದಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ರಗಳೆಯಾಗುತಿದ್ದು ಇದಕ್ಕೆ ಸೂಕ್ತ ಏರ್ಪಾಡು ಮಾಡುವ ಮೂಲಕ ಜನರ ನೆರವಿಗೆ ಬರಲು ಕೋರಿದ್ದಾರೆ.
ಮುಂಜಾನೆ 4 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಲ್ಲಿಸಿ ಆಧಾರ್ ಕೆಲಸ ಮಾಡಿಸುವ ಇಲ್ಲಿಯ ಬವಣೆಯಿಂದ ಬೇಸತ್ತ ಜನತೆ ನೆರೆಯ ತಾಲೂಕು,ಜಿಲ್ಲೆಯಲ್ಲಿ ಇದೇ ಕೆಲಸವನ್ನು ಸರಾಗವಾಗಿ ಮಾಡಿಕೊಡುತಿದ್ದಾರೆ.ಜನರ ಅಹವಾಲು ಸಮಸ್ಯೆ ಕೇಳದ ಇಲ್ಲಿಯ ಶಾಸಕರು, ಸಂಸದರ ಬೇಜವಾಬ್ದಾರಿಯಿಂದ ಬೇಸತ್ತು ನೇರ ರಾಷ್ಟ್ರಪತಿಗಳಿಗೇ ಮನವಿ ನೀಡಿರುವುದಾಗಿ ಶೇಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


