ಈಡೂರು ಪರಶುರಾಮಪ್ಪ ನೆನಪು

ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಈಡೂರಿನ ಪರಶುರಾಮಪ್ಪ ಜಮೀನ್ಧಾರರಾಗಿ ತಾಲೂಕಿನಲ್ಲಿ ಗುರುತಿಸಿಕೊಂಡಿದ್ದರೂ ಅವರ ಸಾಮಾಜಿ ಕ, ಧಾರ್ಮಿಕ ಸೇವೆಗಳು ನಾಡಿನಾದ್ಯಂತ ವಿಸ್ತರಿಸಿದ್ದವು. ಉತ್ತರ ಕನ್ನಡ ಜಿಲ್ಲೆ ಗುಡ್ನಾಪುರದ ಬಂಗಾರೇಶ್ವರ ಟ್ರಸ್ಟ್ ಅಧ್ಯಕ್ಷರಾಗಿ, ಅಂಡಗಿ ಮಠದ ಸಕ್ರೀಯ ಕಾರ್ಯಕರ್ತರೂ ಪ್ರಮುಖರಾಗಿ ಸೊರಬ ಮತ್ತು ಶಿರಸಿ ತಾಲೂಕಿಗೆ ಸೇತುವೆಯಂತಿದ್ದ ಪರಶುರಾಮಪ್ಪ ಅಜಾನುಭಾವು ಆಗಿದ್ದಂತೆ ಹೃದಯವೈಶಾಲ್ಯತೆ ಉಳ್ಳವರಾಗಿದ್ದರು.

ಸಾಮಾಜಿಕ,ಧಾರ್ಮಿಕ,ರಾಜಕೀಯ ಸೇರಿದಂತೆ ಸಮಾಜದ ಆಗುಹೋಗುಗಳೊಂದಿಗೆ ಬೆರೆತಿರುತಿದ್ದ ಅವರು ಪ್ರಗತಿಪರ ಕೃಷಿಕರಾಗಿ ಶೈಕ್ಷಣಿಕ, ಧಾರ್ಮಿಕ ಚಟುವಟಿಕೆಗಳಿಗೆ ತಮ್ಮನ್ನು ಅರ್ಪಿಸಿಕೊಳ್ಳುವ ಮೊದಲು ರಾಜಕೀಯವಾಗಿ ಚುರುಕಾಗಿದ್ದವರು. ಬಂಗಾರಪ್ಪ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ಮುಖಂಡರು, ನಾಯಕರೊಂದಿಗೆ ಸ್ನೇಹ, ಸಮರ, ಪ್ರೀತಿ- ಹೋರಾಟಗಳ ಬಹುಮುಖಿ ಚಟುವಟಿಕೆಯಲ್ಲಿದ್ದ ಪರಶುರಾಮಪ್ಪನವರಿಗೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ನೇತೃತ್ವಕ್ಕಿಂತ ಧಾರ್ಮಿಕ ನೇತೃತ್ವವೇ ಖಾಯಂ ಎನ್ನುವಂತಾಗಿತ್ತು.

ಮಂಗಳೂರಿನ ಗೋಕರ್ಣನಾಥೇಶ್ವರ, ಬನವಾಸಿ, ಗುಡ್ನಾಪುರಗಳ ಧಾರ್ಮಿಕ, ಚಾರಿತ್ರಿಕ ಚಟುವಟಿಕೆ, ಸಂಘ ಸಂಸ್ಥೆಗಳ ನೇತೃತ್ವ ಹೀಗೆ ಪರಶುರಾಮಪ್ಪ ದೀವರ ಸಮೂದಾಯ, ಜನತಾಪರಿವಾರ, ಪ್ರಗತಿಪರ ಚಟುವಟಿಕೆಗಳ ಒಕ್ಕೂಟ ಎಲ್ಲೆಂದರೆ ಎಲ್ಲೆಲ್ಲೂ ಸಲ್ಲುವ ಪರಶುರಾಮಪ್ಪ ನಿಷ್ಠೂರತೆಗೂ ಹೆಸರಾಗಿದ್ದರು. ಹೊಸಜನಾಂಗ, ಶಿಕ್ಷಿತರು, ಬಡವರು, ಬಲ್ಲಿದರೆನ್ನದೆ ಎಲ್ಲರನ್ನೂ ಪ್ರೀತಿಸುತಿದ್ದ ಜನಪರ ಸಮಾಜಮುಖಿ ವ್ಯಕ್ತಿತ್ವದ ಈಡೂರು ಪರಶುರಾಮಪ್ಪ ಈ ವಾರ ನಿಧನರಾಗುತಿದ್ದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದ ರಾಜ್ಯದ ಅನೇಕ ಜಿಲ್ಲೆಗಳು, ರಾಜಧಾನಿ ಸೇರಿದಂತೆ ನಾಡಿನಾದ್ಯಂತ ಶ್ರದ್ಧಾಂಜಲಿಯ ಸಂದೇಶಗಳು ಬಂದಿವೆ.

ಜನಮುಖಿಯಾಗಿದ್ದ ಪರಶುರಾಮಪ್ಪ ಸ್ಫಂದನಶೀಲತೆಯಿಂದಾಗಿ ಹೆಸರು ಮಾಡಿ ಸಾಮಾಜಿಕ ಸೇವೆ-ಹೋರಾಟ, ಬದ್ಧತೆಗಳಿಂದ ಪ್ರಸಿದ್ಧರಾಗಿದ್ದರು. ಶರಣರ ಘನತೆ ಮರಣದಲ್ಲಿ ಕಾಣು ಎನ್ನುವಂತೆ ಪರಶುರಾಮಪ್ಪ ನಿಜ ಶರಣರಾಗಿ ನಿಧನರಾಗುವ ಮೂಲಕ ಅವರ ಪ್ರಸ್ತುತತೆ, ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ...

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

Latest Posts

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ ಕುಡಿಯಾಗಿದ್ದ ರಮಾನಂದ ನಾಯಕ ಸಾಹಿತ್ಯ-ಸಾಂಸ್ಕೃತಿಕ ಮನಸ್ಸಿನ ತೂಕದ ವ್ಯಕ್ತಿಯಾಗಿದ್ದರು. ವಯೋಸಹಜ ಅನಾರೋಗ್ಯದಿಂದ ಇಂದು ಬೆಂಗಳೂರಿನಲ್ಲಿ ನಿಧನರಾದ ಅವರ ಶವ ಸಂಸ್ಕಾರ ಅವರ ಹುಟ್ಟೂರು ಹಿಚ್ಕಡದಲ್ಲಿ ಶುಕ್ರವಾರ ನಡೆಯಲಿದೆ. ಹಿರಿಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *