

ಮೊದಲಘಟನೆ-
ಅದು ಒಂದುದಿನದ ಚಳಿಯ ಮುಸ್ಸಂಜೆ ಸಿದ್ಧಾಪುರದ ಕಛೇರಿಯ ಕೆಲಸ ಮುಗಿಸಿ ತೆರಳಿದ ಯುವಜೋಡಿಯೊಂದು ಕಾನಸೂರ ವರೆಗೆ ಬೈಕ್‍ರೈಡ್ ಹೋಗಿ, ಕಾನಸೂರಿನಲ್ಲಿ ಗೋಬಿ, ಪಾವಭಜಿ ತಿಂದು ಹೊರಡುವ ಹೊತ್ತಿಗೆ ಸಂಜೆಯ 8 ಗಂಟೆಯ ಸಮಯ ಕಾನಸೂರು ಅರಣ್ಯ ಇಲಾಖೆ ನರ್ಸರಿಯಿಂದ ಈ ಜೋಡಿಯ ದ್ವಿಚಕ್ರ ವಾಹನವನ್ನು ಹಿಂಬಾಲಿಸಿದ ವ್ಯಕ್ತಿ ಬೈಕ್ ಚಲಾಯಿಸುತಿದ್ದ ಯುವಕನಿಗೆ ನಿರ್ಜನ ಪ್ರದೇಶದಲ್ಲಿ ಕಣ್ಣಗೆ ಖಾರ ಎರಚಿ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ, ಆದರೆ ಹೆದರಿದ ಯುವಕ (ಅವಿವಾಹಿತ ಜೋಡಿ) ಗೆಳತಿಯ ಮಾರ್ಗದರ್ಶನದಂತೆ ಬೈಕ್ ಚಲಾಯಿಸಿ ಪಾರಾಗಿದ್ದಾನೆ. ಈ ಘಟನೆ ನಡೆದು ಪೊಲೀಸರ ತನಿಖೆಯಾಗಿ ಸ್ಫಷ್ಟ ವಿಚಾರ ತಿಳಿಯದೆ ಹಳೆ ವಿವಾದ ಅಥವಾ ಕೌಟುಂಬಿಕ ಕಲಹದ ಕಾರಣಕ್ಕೆ ಇದಾಗಿರಬಹುದೆಂದು ಪೊಲೀಸರು ಈ ಪ್ರಕರಣ ಕೈ ಬಿಟ್ಟಿದ್ದಾರೆ.
ಘಟನೆ-02-
ಒಂದು ನಿರ್ಜನ ರಾತ್ರಿಯ 2 ಗಂಟೆಯ ಸಮಯ ಗೋವಾ ಪ್ರವಾಸಕ್ಕೆ ತೆರಳಿದ್ದ ಎರಡು ಕುಟುಂಬಗಳ ಒಂದು ಕಾರು ಶಿರಸಿಗೆ ಬರುವ ವೇಳೆಗೆ ಮುಂಜಾನೆ 2 ಗಂಟೆ ಸಮೀಪಿಸಿದೆ.
ಶಿರಸಿ ನೀಲೇಕಣಿಯಿಂದ ಈ ಹೊರಜಿಲ್ಲೆಯ ನೋಂದಣಿ ಸಂಖ್ಯೆ ಇದ್ದ ಕಾರನ್ನು ಒಂದು ಬೈಕ್ ಫಾಲೋ ಮಾಡಿದೆ. ಹಿಂದಿನ ಘಟನೆಯ ಅರಿವಿದ್ದ ಈ ಕಾರಿನ ಜನ ವೇಗವಾಗಿ ಸಿದ್ಧಾಪುರ ಕಡೆ ಬರುತಿದ್ದಂತೆ 15-16 ಕಿ.ಮೀ. ಗೂ ಹೆಚ್ಚು ಫಾಲೋ ಮಾಡಿ ನಂತರ ಮನೆಗಳಿರುವ ಪ್ರದೇಶದ ಸಮೀಪ ಹಿಂದೆ ಸರಿದ ಬೈಕ್ ಸವಾರ ನಂತರ ಕಂಡಿಲ್ಲ.
ಈ ಘಟನೆಯ ಬಗ್ಗೆಯೂ ಪೊಲೀಸರಿಗೆ ತಿಳಿಸಲಾಗಿದೆ ಎನ್ನುತ್ತಾರೆ ಭಾದಿತರು ಈ ಎರಡೂ ಘಟನೆಗಳ ಸಾರಾಂಶವೆಂದರೆ…… ಶಿರಸಿ-ಸಿದ್ಧಾಪುರ ಮಾರ್ಗದಲ್ಲಿ ರಾತ್ರಿ ವೇಳೆ ವಾಹನ ಸವಾರರನ್ನು ಬೆನ್ನಟ್ಟುವ ಮುಸುಕುಧಾರಿ ದ್ವಿಚಕ್ರವಾಹನ ಸವಾರರು ಏನೋ ಸಂಚು ನಡೆಸುತ್ತಿರುವುದಂತೂ ಖಾತ್ರಿ.
ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಿದವರು, ಗೋವಾಕ್ಕೆ ತೆರಳಿ ತಡರಾತ್ರಿ ಮರಳುವ ಸಿದ್ದಾಪುರ, ಸಾಗರ ಸೇರಿದ ಅನೇಕ ಪ್ರವಾಸಿಗಳು ಹೀಗೆ ಈ ಮಾರ್ಗದಲ್ಲಿ ರಾತ್ರಿ ವೇಳೆ ಖಾಸಗಿ ಲಘುವಾಹನಗಳಲ್ಲಿ ಹೋಗುವವರು ತಡರಾತ್ರಿ ಮುಸುಕುಧಾರಿ ಬೈಕ್ ಸವಾರರಿಗೆ ಎದುರಾಗುತ್ತಿರುವ ಸಂಗತಿ ಸಿದ್ದಾಪುರದಲ್ಲಿ ಚರ್ಚೆಯಾಗಿ ಪೊಲೀಸ್ ಠಾಣೆ ತಲುಪಿದೆ. ಪೊಲೀಸರು ಈ ಘಟನೆಗಳ ಆಧಾರದಲ್ಲಿ ಗಸ್ತು ಪ್ರಾರಂಭಿಸಿದ್ದಾರೆ ಎನ್ನುವ ಸುದ್ದಿಯಿದೆ.
ಶಾಂತ ಜಿಲ್ಲೆ, ಸುಸಂಸ್ಕøತರ ತಾಲೂಕುಗಳೆಂಬ ಹೆಗ್ಗಳಿಕೆ ಇರುವ ಶಿರಸಿ-ಸಿದ್ಧಾಪುರ ರಸ್ತೆಗಳಲ್ಲಿ ಇಂಥ ಘಟನೆಗಳಾಗಿರುವುದು ಪೊಲೀಸರನ್ನು ಎಚ್ಚರಿಸಿದಂತಾಗಿದೆ.
ತಡರಾತ್ರಿ ವಾಹನ ಸವಾರಿ ಮಾಡುವವರು, ಅಪರಾಧ ನಿಯಂತ್ರಿಸಬೇಕಾದ ಸ್ಥಳಿಯ ಪೊಲೀಸರು ಈಗ ಈ ಘಟನೆಗಳಿಂದಾಗಿ ಹುಲಿ ಸವಾರಿ ಮಾಡುವಂತಾಗಿರುವ ಅನುಭವಕ್ಕೆ ತುತ್ತಾಗುತ್ತಿರುವುದು ಈ ವಾರದ ಹೊಚ್ಚ ಹೊಸ ಸುದ್ದಿಯಂತೂ ಅಲ್ಲ.!



