ಫೆ. 5,6,7 ರಂದು ಕಲಬುರ್ಗಿಯಲ್ಲಿ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವವರು ಪ್ರತಿನಿಧಿ ಶುಲ್ಕ 250 ರೂ. ಸಂದಾಯ ಮಾಡಿ ತಮ್ಮ ಹೆಸರನ್ನು ತಕ್ಷಣ ನೋಂದಾಯಿಸಿಕೊಳ್ಳಲು ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.
ಸಮ್ಮೇಳನಕ್ಕೆ ಬಂದಾಗ ಪ್ರತಿನಿಧಿ ಶುಲ್ಕ ಪಾವತಿಸಿದ ಬಾರ್ ಕೋಡ್ ಅಂಟಿಸಿದ ರಸೀದಿ ಇದ್ದವರಿಗೆ ಮಾತ್ರ ಊಟ ವಸತಿ ವ್ಯವಸ್ಥೆ ಮಾಡಲಾಗುವುದು. ಕಲಬುರ್ಗಿಯ ಆಸಪಾಸಿನಲ್ಲಿರುವ ಶಾಲಾ ಕಾಲೇಜು ಅಥವಾ ವಿದ್ಯಾರ್ಥಿ ನಿಲಯಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು. ಶುಲ್ಕ ಸಂದಾಯ ಮಾಡಿದ ಮೇಲೆಯೇ ಪ್ರತಿನಿಧಿಯೆಂದು ನೋಂದಣಿ ಮಾಡಿಕೊಳ್ಳಲಾಗುವುದು.
ಸಮ್ಮೇಳನಕ್ಕೆ ಬರುವವರು ಅಗತ್ಯಕ್ಕೆ ತಕ್ಕಷ್ಟು ಹಾಸಿಗೆ ಹೊದಿಕೆಗಳನ್ನು ಅವರವರೇ ತಂದುಕೊಳ್ಳಬೇಕು. ಪ್ರತಿನಿಧಿಯಾಗಲು ಅರವಿಂದ ಕರ್ಕಿಕೋಡಿ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ. (ಮೊಬೈಲ್ ಸಂಖ್ಯೆ 9448438472) ಸಂಪರ್ಕಿಸಿ ಹೆಚ್ಚಿನ ವಿವರ ಪಡೆಯಬಹುದು.