
ಹೊಸ ಕಾಯಿದೆ ತಿದ್ದುಪಡಿಗಳಿಂದ ಮುಸ್ಲಿಂರಿಗೆ ಯಾವ ತೊಂದರೆಗಳೂ ಇಲ್ಲ. ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು ಬದ್ಧವಾಗಿರುವ ಬಿ.ಜೆ.ಪಿ.ಗೆ ವಿರೋಧಗಳನ್ನು ಅರಗಿಸಿಕೊಳ್ಳುವ ಶಕ್ತಿ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸಿದ್ದಾಪುರದ ಲಯನ್ಸ್ ಬಾಲಭವನದಲ್ಲಿ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ಬಿ.ಜೆ.ಪಿ. ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಯಲ್ಲಾಪುರ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಶಿವರಾಮ ಹೆಬ್ಬಾರ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ವಾಜಗೋಡು ಗ್ರಾ.ಪಂ. ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ ಸಚಿವರಿಂದ ಬಿ.ಜೆ.ಪಿ. ಧ್ವಜಪಡೆದು ಪಕ್ಷಾಂತರ ಮಾಡಿದರು. ಬಿ.ಜೆ.ಪಿ. ತಾಲೂಕಾ ಘಟಕದ ಅಧ್ಯಕ್ಷ ನಾಗರಾಜ್ ನಾಯ್ಕ ಸ್ವಾಗತಿಸಿದರು. ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿದರು. ನಿರ್ಗಮಿತ ತಾ.ಪ್ರ. ಕಾ ವಿನಯ ಹೊನ್ನೆಗುಂಡಿ ಮತ್ತಿತರರು ವೇದಿಕೆಯಲ್ಲಿದ್ದರು.
ಗಣೇಶ್ ಹೆಗಡೆ ಸೃತಿ ಪುರಸ್ಕಾರಕ್ಕೆ ಗಂಗಾಧರ ಹಿರೇಗುತ್ತಿ ಆಯ್ಕೆ
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯ,ರಾಷ್ಟ್ರಮಟ್ಟದಲ್ಲಿ ಪತ್ರಿಕೋದ್ಯಮ ಉಳ್ಳವರು, ಮೇಲ್ವರ್ಗದ ಸ್ವತ್ತಾಗಿದೆ. ವಿದ್ಯೆ, ಸಂಪರ್ಕ, ಅನುಕೂಲ, ವಸೂಲಿಬಾಜಿ ಮೂಲಕ ಮಾಧ್ಯಮಕ್ಷೇತ್ರ ಆಳುತ್ತಿರುವ ಮೇಲ್ವರ್ಗ ಬಾಹುಳ್ಯದ ಬಲಪಂಥೀಯ ಬೌದ್ಧಿಕತೆ ತನ್ನ ಲಾಗಾಯ್ತಿನ ಜಮೀನ್ಧಾರಿ ಸ್ವಭಾವ, ಮೇಲ್ವರ್ಗ,ಮೇಲ್ಜಾತಿ ಅಹಂ ಆಧಾರಿತ ಮೇಲರಿಮೆಯಿಂದ ಬಳಲುತ್ತಿದೆ.
ಇಂಥ ಶೋಷಕ,ಅಮಾನವೀಯ ವೈದಿಕತೆಯ ಚಹರೆಯ ಪತ್ರಿಕೋದ್ಯಮವನ್ನು ಅಂತರಾಷ್ಟ್ರೀಯ,ರಾಷ್ಟ್ರೀಯ ಮಟ್ಟದಲ್ಲಿ ಅಲುಗಾಡಿಸಿದ ಅನೇಕ ಪ್ರತಿಭಾವಂತರಿದ್ದಾರೆ. ಆದರೆ ಕನ್ನಡದ ಸಂದರ್ಭದಲ್ಲಿ ಮುಂಗಾರಿನ ರಘುರಾಮ ಶೆಟ್ಟರು, ಜನವಾಹಿನಿ ಸಂಪಾದಕೀಯ ಮಂಡಳಿ, ಲಂಕೇಶ್ ಸೇರಿದಂತೆ ಅನೇಕರು ತಮ್ಮ ಕನಸು, ಗಟ್ಟತನ,ಸೈದ್ಧಾಂತಿಕ ಬದ್ಧತೆ,ಸಾಹಸ ಹುಂಬತನಗಳಿಂದ ಈ ಸಾಂಪ್ರದಾಯಿಕ ಭಟ್ಟಂಗಿ ಪತ್ರಕರ್ತರು ಅವರ ತಿಥಿ-ಕರ್ಮ,ಬೊಜ್ಜ ಆಧಾರಿತ ಪತ್ರಿಕೋದ್ಯಮಕ್ಕೆ ಸೆಡ್ಡುಹೊಡೆದು ವಿಜೃಂಬಿಸಿದ್ದಾರೆ.
ಅಂಥ ವಿರಳ ಸಾಧಕರ ಸಾಲಿನಲ್ಲಿ ನಿಲ್ಲುವ ಹೆಸರು ಅಂಕೋಲಾ ಮೂಲದ ಕಾರವಾರದ ಗಂಗಾಧರ ಹಿರೇಗುತ್ತಿ.

