ತೋಟಗಾರ್ಸ್ ಸೇಲ್ಸ್ ಸೊಸೈಟಿಯ
ಸಿದ್ದಾಪುರ ಸ್ಥಳೀಯ ಶಾಖೆಯಲ್ಲಿ ಆಯೋಜಿಸಲಾಗಿರುವ ಸುಪರ್ ಮಾರ್ಕೆಟ್ ಕಟ್ಟಡದ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ಡಿಸ್ಕೌಂಟ್ ಮೇಳಕ್ಕೆ ಸಂಸ್ಥೆಯ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಚಾಲನೆ ನೀಡಿ ಶುಭ ಹಾರೈಸಿದರು.
ಸಂಸ್ಥೆಯ ನಿರ್ದೇಶಕÀ ಬಾಲಚಂದ್ರ ಹೆಗಡೆ, ಗಣಪತಿ ರಾಯ್ಸದ, ಅಣ್ಣಪ್ಪ ಗೌಡ ಹುಲ್ಕುತ್ರಿ, ಸಲಹಾ ಸಮಿತಿ ಸದಸ್ಯರಾದ ಜಿ.ಎಂ.ಹೆಗಡೆ ಹೆಗ್ನೂರು, ಎಂ.ಎಸ್.ಹೆಗಡೆ ಬಿದ್ರಕಾನ, ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಚನಗಳ ಆಶಯ ಅನುಷ್ಠಾನದಿಂದ ಸಮಸಮಾಜ ನಿರ್ಮಾಣ ಸಾಧ್ಯ
ವಚನಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಪ್ರತಿಪಾದಿಸಿರುವ ಪತ್ರಕರ್ತ ಕನ್ನೆಶ್ ಕೋಲಶಿರ್ಸಿ ವಚನಗಳ ಓದು, ವಚನಕಾರ ಶರಣರ ಸಾಮಾಜಿಕ ಕಾಳಜಿ,ಬದ್ಧತೆ ರೂಢಿಸಿಕೊಳ್ಳುವುದರಿಂದ ಸಮಸಮಾಜದ ನಿರ್ಮಾಣ ಸಾಧ್ಯ ಎಂದಿದ್ದಾರೆ.
ಇಲ್ಲಿನ ತಾ.ಪಂ. ಸಭಾಭವನದಲ್ಲಿ ಸಿದ್ಧಾಪುರ ತಾಲೂಕಾ ಆಡಳಿತ, ತಾ.ಪಂ. ಪಟ್ಟಣ ಪಂಚಾಯತ್ ಗಳು ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮದ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಅಂಬಿಗರ ಚೌಡಯ್ಯ ಕನ್ನಡ ನಾಡಿನಲ್ಲಿ, ವೇಮನ ತೆಲುಗುನಾಡಿನಲ್ಲಿ, ಸಿದ್ಧರಾಮೇಶ್ವರ ಮರಾಠಿ ನಾಡಿನಲ್ಲಿ ಅನುಭವಮಮಂಟಪದ ಆಶಯಗಳನ್ನು ಬಿತ್ತರಿಸುವ ಮೂಲಕ ಸಾಮಾಜಿಕ ಕ್ರಾಂತಿ ಮಾಡುತ್ತಲೇ ಭಾಷೆ, ಸಿದ್ಧಾಂತಗಳ ಬೆಳವಣಿಗೆಗೆ ಕಾರಣರಾದರು ಎಂದರು.