

ಸಿದ್ಧಾಪುರದ ಹೊಸೂರು ಕುಟುಂಬದ ಅಧಿಕಾರಿ ಹೊನ್ನಾಳಿ ತಹಸಿಲ್ದಾರ ತುಷಾರ ಹೊಸೂರು ದಾವಣಗೆರೆ ಜಿಲ್ಲೆಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಜ.26 ರಂದು ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ವೇಳೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ತುಷಾರ ಹೊಸೂರು ಸಿದ್ಧಾಪುರದ ಹೊಸೂರಿನವರಾಗಿದ್ದು ಸಾಗರ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕೆಲಸ ಮಾಡಿ ಹೆಸರುವಾಸಿಯಾಗಿದ್ದಾರೆ.
2019-20 ರ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತ ತುಷಾರ ಹುಸೂರು ರನ್ನು ಅವರ ಬಂಧುಗಳು, ಆತ್ಮೀಯರು ಅಭಿನಂದಿಸಿದ್ದಾರೆ.
