

ಮೂಢನಂಬಿಕೆಗಳನ್ನು ಬೆಳೆಸುತ್ತಾ, ಜನರನ್ನು ವಿಭಜಿಸುತ್ತಾ, ಕೋಮುವಾದ ಹರಡುತ್ತಿರುವ ಭಾರತೀಯ ಮಾಧ್ಯಮಕ್ಷೇತ್ರ ದೇಶದ ಗಂಭೀರ ಸಮಸ್ಯೆಗಳನ್ನು ಕಡೆಗಣಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಎಚ್ಚರಿಸಿರುವ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ ಭವ್ಯ ಇತಿಹಾಸ, ಹಿನ್ನೆಲೆ ಇರುವ ಕರ್ನಾಟಕ ಸುಳ್ಳು ಸುದ್ದಿಗಳನ್ನು ತಯಾರಿಸುತ್ತಿರುವ ರಾಜಧಾನಿಯಾಗುತ್ತಿದೆ ಎಂದು ವಿಶಾದಿಸಿದ್ದಾರೆ.
ಸಿದ್ಧಾಪುರ ಶಂಕರಮಠದಲ್ಲಿ ಸಂಸ್ಕøತಿಸಂಪದ ಆಯೋಜಿಸಿದ್ದ ಗಣೇಶ್ ಹೆಗಡೆ ಸ್ಮøತಿಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ಸುದ್ದಿ-ಮನೋರಂಜನೆಯ ನಡುವಿನ ಅಂತರ ನಶಿಸುತ್ತಿದೆ. ಬಡವರು, ದುರ್ಬಲರು, ಅಲ್ಫಸಂಖ್ಯಾತರು, ತಂತ್ರಜ್ಞಾನ, ವಸ್ತುನಿಷ್ಠ ರಾಜಕೀಯ ವಿಶ್ಲೇಷಣೆ ಗಳನ್ನು ಪ್ರಜ್ಞಾಪೂರ್ವಕವಾಗಿ ಮರೆಮಾಚುತ್ತಿರುವ ಕನ್ನಡದ ಪತ್ರಿಕೊದ್ಯಮ ಜನರನ್ನು ಒಡೆಯುತ್ತಾ, ಕೋಮುವಾದ ಪ್ರಚೋದಿಸುತ್ತಾ, ದೇಶವನ್ನು ಹಿಂದೆ ತಳ್ಳುತ್ತಿದೆ, ವಾಸ್ತವದಲ್ಲಿ ಪತ್ರಿಕೊದ್ಯಮದ ಬರ ಮತ್ತು ಬಿಕ್ಕಟ್ಟು ವಿಸ್ತರಿಸುತ್ತಿದೆ ಎಂದು ವಿವರಿಸಿದರು.
ಕರಾವಳಿಮುಂಜಾವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿಯವರಿಗೆ ಗಣೇಶ್ ಹೆಗಡೆ ಸ್ಮøತಿ ಪುರಸ್ಕಾರ ಪ್ರದಾನ ಮಾಡಲಾಯಿತು.

ಬೇಡ್ಕಣಿ ಸೇ.ಸ.ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನಿರ್ಧೇಶಕ ಮಂಡಳಿ!
ಸಿದ್ಧಾಪುರ ತಾಲೂಕಿನ ಬೇಡ್ಕಣಿ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ಧೇಶಕ ಸ್ಥಾನಗಳಿಗೆ ಎಲ್ಲಾ 12 ಸದಸ್ಯರೂ ಅವಿರೋಧವಾಗಿ ಆಯ್ಕೆಯಾಗಿ ದಾಖಲೆ ಮಾಡಿದ್ದಾರೆ.
ಸಹಕಾರಿ ನಿಯಮದಂತೆ ಈ ಸಂಘದ ನಿರ್ಧೇಶಕ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿವಸವಾದ ಶನಿವಾರ ಅನೇಕ ನಾಮಪತ್ರಗಳಿದ್ದವು. ಎರಡು ಕ್ಷೇತ್ರಗಳಿಗೆ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ 2 ಸ್ಥಾನಗಳು ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದವು.
ನಿನ್ನೆ ಸಂಘದಲ್ಲಿ ಸೇರಿದ ಪ್ರಮುಖ ರಾಜಕೀಯ ನಾಯಕರು,ಆಕಾಂಕ್ಷಿಗಳು ಮಾತುಕತೆ ನಡೆಸಿ ಚೀಟಿ ಎತ್ತುವ ಮೂಲಕ ಉಳಿದ ಹತ್ತು ಸ್ಥಾನಗಳಿಗೆ ಚುನಾವಣೆಯಿಲ್ಲದೆ ನಿರ್ಧೇಶಕರನ್ನು ಆಯ್ಕೆಮಾಡಿದರು.
ಸ್ಥಳಿಯ ಮುಖಂಡರಾದ ವಿ.ಎನ್. ನಾಯ್ಕ, ನಾಗರಾಜ್ ನಾಯ್ಕ, ಉಮೇಶ್ ನಾಯ್ಕ ಮತ್ತು ಎ.ಬಿ.ನಾಯ್ಕಕಡಕೇರಿ ಸೇರಿದ ಅನೇಕ ನಾನಾ ಪಕ್ಷಗಳ ಮುಖಂಡರು ಮಾತುಕತೆ ನಡೆಸಿ ಅವಿರೋಧ ಆಯ್ಕೆ ಮಾಡುವಲ್ಲಿ ಯಶಸ್ವಿಯಾದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
