ಕಂದಾಯ ಮತ್ತು ಅರಣ್ಯ ಇಲಾಖೆಗಳಿಗೆ ಸುಣ್ಣ, ತಾ.ಪಂ. ಗೆ ಬೆಣ್ಣೆ!

ಒಟ್ಟಾರೆ ಈ ಅವ್ಯವಸ್ಥೆ, ದುರಾಡಳಿತಗಳಿಗೆ 25 ವರ್ಷಗಳಿಂದ ಜನಪ್ರತಿನಿಧಿಗಳಾಗುತ್ತಾ ಸ್ವಜಾತಿ ನೌಕರರನ್ನು ತುಂಬಿಕೊಂಡು ಹಿಂದುತ್ವ, ಧರ್ಮ ರಕ್ಷಿಸುತ್ತಿರುವ ಬ್ರಷ್ಟ-ದುಷ್ಟ ಶಾಸಕರು, ಸಂಸದರೇ ಈ ಕರಾಳತನಗಳ ಪೋಷಕರು ಎನ್ನುವ ಆಕ್ಷೇಪವನ್ನೂ ಸಾರ್ವಜನಿಕ ವಲಯ ಎತ್ತುತ್ತಿರುವುದು ಇಲ್ಲಿಯ ಶಾಸಕರು,ಸಂಸದರ ಯೋಗ್ಯತೆ, ಕಾರ್ಯವೈಖರಿಗೆ ಹಿಡಿದ ಕನ್ನಡಯಂತಿದೆ.

ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳಿಗೆ ಸುಣ್ಣ, ತಾ.ಪಂ. ಅಥವಾ ಪಂಚಾಯತ್ ರಾಜ್ ಇಲಾಖೆಗೆ ಬೆಣ್ಣೆ ಎನ್ನುವ ವಿದ್ಯಮಾನ ಇಂದು ನಡೆದಿದೆ. ತಾ.ಪಂ. ಸಭಾಭವನದಲ್ಲಿ ಇಂದು ತಾಲೂಕಾ ಪಂಚಾಯತ್ ಕೆ.ಡಿ.ಪಿ. ಮತ್ತು ಸಾಮಾನ್ಯ ಸಭೆಗಳು ಒಟ್ಟೊಟ್ಟಿಗೇ ನಡೆದವು. ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ವೈದ್ಯರೊಬ್ಬರ ನಡವಳಿಕೆ ಹಿನ್ನೆಲೆಯಲ್ಲಿ ತಾ.ಪಂ.ಸದಸ್ಯ ನಾಶಿರ್ ಖಾನ್ ಆಕ್ಷೇಪಕ್ಕೆ ಸಹಮತ ವ್ಯಕ್ತಪಡಿಸದ ಸ್ಥಾಯೀ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮತ್ತು ವಿವೇಕ ಭಟ್ ಹಾಗೂ ನಾಶಿರ್ ಖಾನ್ ನಡುವೆ ವಾಗ್ವಾದ ನಡೆದು ಸಭೆ ಕೆಲವು ಕಾಲ ಬಿಸಿಯ ವಾತಾವರಣ ನಿರ್ಮಿಸಿತು.

ನಂತರ ಸದಸ್ಯ ವಿವೇಕ ಭಟ್ ತಮ್ಮ ಭಾಗದ ಕಂದಾಯ ನಿರೀಕ್ಷಕರೊಬ್ಬರ ಪ್ರಜಾಪೀಡನೆ ಬಗ್ಗೆ ಸಭೆಯ ಗಮನ ಸೆಳೆದರು. ಇದಕ್ಕೆ ಧ್ವನಿ ಕೂಡಿಸಿದ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಹಣವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ನಮ್ಮ ಸಹಕಾರಿ ಸಂಘದ ಜಾಗವೊಂದರ ನೋಂದಣಿಗೆ ಲಂಚಕ್ಕಾಗಿ ಕೆಲಸ ವಿಳಂಬ ಮಾಡಿದರು. ಎಂದರು.

ಇದೇ ಚರ್ಚೆ ಮುಂದುವರಿದು ತಾಲೂಕಿನಲ್ಲಿ ಲಂಚಗುಳಿತನ ಹೆಚ್ಚಾಗಿದೆ. ಇದರಿಂದ ಶಾಸಕರು, ಸಂಸದರಿಗೆ ಕೆಟ್ಟ ಹೆಸರು ಬರುತ್ತಿದೆ. ತಾಲೂಕಿನ ಲಂಚಗುಳೀತನ, ವೃಥಾ ವಿಳಂಬಗಳಿಂದ ಸಾರ್ವಜಿನಿಕರಿಗೆ ತೊಂದರೆ ಮಾಡದೆ ಕೆಲಸ ನಿರ್ವಹಿಸಲು ಮಹಾಬಲೇಶ್ವರ ಹೆಗಡೆ ಅಧಿಕಾರಿಗಳಿಗೆ ವಿನಂತಿಸಿದರು.

ಇದರ ನಂತರ ಅರಣ್ಯ ಇಲಾಖೆಯ ಬಗ್ಗೆ ಆಕ್ಷೇಪಗಳು ಕೇಳಿಬಂದವು. ಸಭೆಯಲ್ಲಿ ಅಧಿಕಾರಿಯನ್ನು ಪ್ರಶ್ನಿಸಿದ ವಿವೇಕ ಭಟ್ ಅರಣ್ಯ ಇಲಾಖೆಯ ಕೆಲಸ, ಪ್ರಗತಿ ವಿವರಿಸುತ್ತೀರಿ ಅದಕ್ಕೆ ಕರ್ಚಾದ ಹಣ ಎಷ್ಟು ಎಂದು ಎಲ್ಲಿಯೂ ಹೇಳುವುದಿಲ್ಲ. ಎಂದು ಪ್ರಶ್ನಿಸಿದರು. ಈ ಚರ್ಚೆ ಮುಂದುವರಿಸಿದ ಅಧ್ಯಕ್ಷ ಸುಧೀರ್ ಗೌಡರ್ ಅರಣ್ಯ ಇಲಾಖೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಸಾರ್ವಜನಿಕರ ಸಹಕಾರ ಇಲ್ಲದೆ ಅರಣ್ಯ, ವನ್ಯಪ್ರಾಣಿಗಳು ಉಳಿಯಲು ಸಾಧ್ಯವೆ? ಎಂದು ಪ್ರಶ್ನಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಲು ಆದೇಶಿಸಿದರು.

ಹೀಗೆ ಅರಣ್ಯ, ಕಂದಾಯ, ಲೋಕೋಪಯೋಗಿ, ಸಣ್ಣ ನೀರಾವರಿ, ಕುಡಿಯುವ ನೀರು ಪೂರೈಕೆ ಇಲಾಖೆಗಳ ಬಗ್ಗೆ ಆಕ್ಷೇಪಿಸಿದ ತಾ.ಪಂ. ಸದಸ್ಯರು ತಮ್ಮ ಇಲಾಖೆಯಾದ ಪಂಚಾಯತ್ ರಾಜ್ ಇಲಾಖೆಯ ಗುತ್ತಿಗೆ ಆಧಾ ರಿತ ಕಾಮಗಾರಿಗಳ ದೆಸೆಯಿಂದಾಗಿ ಜನಸಾಮಾನ್ಯ ರೈತರಿಗೆ ಸಲ್ಲಬೇಕಾದ ನರೇಗಾ ಯೋಜನೆಯ ಅನುಷ್ಠಾನ ವಿಫಲತೆಯ ಪ್ರಶ್ನೆಯನ್ನು ಯಾರೂ ಕೇಳಲೇಇಲ್ಲ. ಹಿಂದಿನ ವಾರ ತಾಲೂಕಿಗೆ ಭೇಟಿ ನೀಡಿದ್ದ ನರೇಗಾ ಒಂಬುಡ್ಸ್ ಮನ್ ಆರ್.ಜಿ. ನಾಯಕ ಪಂಚಾಯತ್ ರಾಜ್ ಇಲಾಖೆಯ ನಿರ್ಲಕ್ಷ, ಕರ್ತವ್ಯ ಲೋಪದಿಂದ ತಾಲೂಕಿಗೆ ನೂರಾರು ಕೋಟಿ ಹಾನಿಯಾಗಿರುವ ಬಗ್ಗೆ ಆಕ್ಷೇಪಿಸಿದ್ದರು. ಸಾವಿರ, ಲಕ್ಷ ರೂಪಾಯಿಗಳ ಲೆಕ್ಕದ ಅವ್ಯವಸ್ಥೆಗಳನ್ನು ಉಗ್ರವಾಗಿ ಖಂಡಿಸಿ ಹಾರಾಡಿ, ಚೀರಾಡಿದ ಸದಸ್ಯರು ತಾ.ಪಂ. ನರೇಗಾ ಲೋಪ, ವಿಫಲತೆಗಳ ಬಗ್ಗೆ ಮುಗುಮ್ಮಾಗಿರುವುದೇಕೆ ಎಂದು ಕೆಲವರು ಪ್ರಶ್ನಿಸಿದ್ದು ಮಾಧ್ಯಮ ಪ್ರತಿನಿಧಿಗಳ ಕಿವಿಗಳಿಗೆ ಬೀಳದೆ ಇರಲಿಲ್ಲ.

ಒಟ್ಟಾರೆ ಈ ಅವ್ಯವಸ್ಥೆ, ದುರಾಡಳಿತಗಳಿಗೆ 25 ವರ್ಷಗಳಿಂದ ಜನಪ್ರತಿನಿಧಿಗಳಾಗುತ್ತಾ ಸ್ವಜಾತಿ ನೌಕರರನ್ನು ತುಂಬಿಕೊಂಡು ಹಿಂದುತ್ವ, ಧರ್ಮ ರಕ್ಷಿಸುತ್ತಿರುವ ಬ್ರಷ್ಟ-ದುಷ್ಟ ಶಾಸಕರು, ಸಂಸದರೇ ಈ ಕರಾಳತನಗಳ ಪೋಷಕರು ಎನ್ನುವ ಆಕ್ಷೇಪವನ್ನೂ ಸಾರ್ವಜನಿಕ ವಲಯ ಎತ್ತುತ್ತಿರುವುದು ಇಲ್ಲಿಯ ಶಾಸಕರು,ಸಂಸದರ ಯೋಗ್ಯತೆ, ಕಾರ್ಯವೈಖರಿಗೆ ಹಿಡಿದ ಕನ್ನಡಯಂತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *