

ಕ್ಯಾಂಪಸ್ ಕಲರವ-




ಸಿದ್ಧಾಪುರದ ಎಂ.ಜಿ.ಸಿ.ಪದವಿ ಕಾಲೇಜಿನ ವಿದ್ಯಾರ್ಥಿಗಳು ಅಂಚೆಕಾರ್ಡಿನಲ್ಲಿ ಪತ್ರ ಬರೆಯುವ ಮೂಲಕ ಪತ್ರಬರೆಯುವ ಹವ್ಯಾಸ ಪ್ರಯೋಗ ಮಾಡಿದರು.
ವಿಭಿನ್ನತೆ,ವಿನೂತನತೆಗಳಿಂದ ವಿದ್ಯಾರ್ಥಿಗಳನ್ನು ಹೊಸಕಾಲಕ್ಕೆ ಸಜ್ಜುಮಾಡುತ್ತಿರುವ ಕನ್ನಡ ಉಪನ್ಯಾಸಕ ಡಾ.ವಿಠ್ಠಲ್ ಭಂಡಾರಿ ಈ ಪ್ರಯೋಗದ ಹಿಂದಿನ ಸೂತ್ರಧಾರಿ.
ವಿದ್ಯಾರ್ಥಿ,ವಿದ್ಯಾರ್ಥಿನಿಯರು ಖುಷಿಯಿಂದ ಗೀಚಿದ ಅಂಚೆಕಾರ್ಡ್‍ಗಳು ಅವರ ಆತ್ಮೀಯರ್ಯಾರ್ಯಾರಿಗೆ ತಲುಪಲಿವೆಯೋ ಎನ್ನುವ ಕುತೂಹಲ ಅವರ ಪಾಲಕರಿಗಿರಬಹುದೇನೋ? ಅವರವರೇ ಬರೆದುಕೊಂಡ ಪ್ರೀತಿಪತ್ರಗಳಾದರೆ…. ಅವು ತಲುಪಿದಮೇಲೆ ಫಜೀತಿಯಾಗಬಹುದೇನೋ?!
ಕಾಲೇಜಿನಲ್ಲಿ ಆಚರಿಸುವ ಸಂಪ್ರದಾಯ ದಿನಕ್ಕಿಂತ ಇದು ಉತ್ತಮ ಕೆಲಸ ಎಂದು ಕೆಲವರು ಉಚತ ಸಲಹೆಮಾದರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟಿಸಿರುವ ಬಗ್ಗೆಯೂ ಮಾಹಿತಿ ಇಲ್ಲ.
ಅನಾಥ ಹಿರಿಯಜೀವಗಳೊಂದಿಗೆ ಅವರ ಪೊಷಕರನ್ನು ಸನ್ಮಾನಿಸಿದ ವಿದ್ಯಾರ್ಥಿಗಳು!
ಸಿದ್ಧಾಪುರ ತಾಲೂಕಿನ ಸ.ಪ್ರ.ದ.ಕಾಲೇಜಿನ
ರೋವರ್ಸ್ & ರೇಂಜರ್ಸ್ ಘಟಕಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಾಲೂಕಿನ ಮುಗದೂರಿನ ಪ್ರಚಲಿತ ಆಶ್ರಯಧಾಮಕ್ಕೆ ಬಂದು ಶ್ರಮದಾನ ಮಾಡುವ ಮೂಲಕ ಸೇವೆ ಸಲ್ಲಿಸಿದರು.
ಅನಾಥಹಿರಿಯ ಜೀವಿಗಳಿಗೆ ಊಟ ತಯಾರಿಸಿ, ಬಡಿಸುವ ಮೂಲಕ ತಮ್ಮ ಕಳಕಳಿ ಪ್ರದರ್ಶಿಸಿದರು. ವಿದ್ಯಾರ್ಥಿಗಳು,ಉಪನ್ಯಾಸಕರು ಸೇರಿ ಈ ಆಶ್ರಯಧಾಮದ ಮುಖ್ಯಸ್ಥರು, ನಿರ್ವಾಹಕರಾದ ನಾಗರಾಜ್ ಮತ್ತು ಮಮತಾರನ್ನು ಸನ್ಮಾನಿಸಿ ಗೌರವಿಸುವ ಮೂಲಕ ತಮ್ಮ ಅಭಿಮಾನದ ಕೃತಜ್ಞತೆಗಳನ್ನು ಸಮರ್ಪಿಸಿದರು. ಇದರಿಂದಾಗಿ ಕಲಿಕಾರ್ಥಿಗಳಿಗೆ ಹೊಸಲೋಕವೊಂದರ ಪರಿಚಯವಾದಂತಾಯಿತು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
