u turn uttarkumara-ಶಿಸ್ತುಕ್ರಮ,ವಿರೋಧಕ್ಕೆ ಹೆದರಿ ಉಲ್ಟಾ ಹೊಡೆದ ಉತ್ತರಕುಮಾರ!

ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಗಾಂಧಿ ಅವಹೇಳನ ಮಾಡಿ ಸಾರ್ವಜನಿಕರಿಂದ ಚೀ..ತೂ… ಎಂದು ಉಗಿಸಿಕೊಂಡ ಮೇಲೆ ಇಂದು ತಾನು ಗಾಂಧಿ ಹೆಸರು ಹೇಳಿಲ್ಲ ಎನ್ನುವ ಮೂಲಕ ತನ್ನ ಮಾತು, ನಡವಳಿಕೆಗೆ ಯಾವ ಮಹತ್ವವಿದೆ ಎಂಬುದನ್ನು ಸಾಬೀತುಮಾಡಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ದುಷ್ಟಪರಿವಾರದ ಲಾಗಾಯ್ತಿನ ನಡವಳಿಕೆಯಂತೆ ಅನಂತಕುಮಾರ ಸ್ವಾತಂತ್ರ್ಯ ಹೋರಾಟ, ಗಾಂಧಿ ಮಹತ್ವವನ್ನು ಲೇವಡಿ ಮಾಡಿದ್ದರು. ಇಂಥ ಮತಾಂಧ ವಿವೇಕಶೂನ್ಯನ ಅವಿವೇಕದ ಮಾತು ನಡತೆಗೆ ಸಾರ್ವಜನಿಕ ವಲಯ,ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ವಿರೋಧಗಳ ಹಿನ್ನೆಲೆಯಲ್ಲಿ ತಾನು ಗಾಂಧಿ ಹೆಸರು ಹೇಳಿರಲಿಲ್ಲ ಎನ್ನುವ ಮೂಲಕ ಅನಂತಕುಮಾರ ಹೆಗಡೆ ಯು ಟರ್ನ್ ಹೊಡೆಯುವ ಮೂಲಕ ತಾನು ಉತ್ತರಕುಮಾರ ಎಂದು ಪ್ರತಿಬಿಂಬಿಸಿದ್ದಾರೆ.
ಅನಂತಕುಮಾರ ಹೆಗಡೆ ಸಂಸದರ ನಿಧಿ ಬಳಸದೆ, ಕ್ಷೇತ್ರದ ಕೆಲಸ ಮಾಡದೆ ಬೇಜವಾಬ್ಧಾರಿ ಜನಪ್ರತಿನಿಧಿಯೆಂದು ಆರೋಪಿಸಿಕೊಂಡಿರುವ ಮನುಷ್ಯ. ಕೆಲಸಮಾಡದೆ, ಜನಹಿತದ ಪರವಾಗಿ ವರ್ತಿಸದೆ ಅವಿವೇಕದ ಮಾತು, ನಡತೆಗಳಿಂದ ಕುಪ್ರಸಿದ್ಧನಾಗಿರುವ ಈ ಜನಪ್ರತಿನಿಧಿ ತನ್ನ ಅತಿರೇಕ,ಅವಿವೇಕದ ಮಾತು, ಮತಾಂಧತೆಯ ಹೀನ ನಡತೆಗಳಿಂದ ಪಕ್ಷ,ರಾಜಕೀಯ ವಲಯದಲ್ಲೂ ತಿರಸ್ಕರಿಸಲ್ಪಟ್ಟ ವ್ಯಕ್ತಿ.
ಹಿಂದಿನ ಎನ್.ಡಿ.ಎ. ಸರ್ಕಾರದಲ್ಲಿ ಸಚಿವನಾಗಿದ್ದ ಅನಂತಕುಮಾರ ಹೆಗಡೆ ರಾಜ್ಯದಲ್ಲಿ ಪ್ರಚಾರ ಮಾಡುವುದು ಬೇಡ, ಚುನಾವಣಾ ಪ್ರಚಾರಕ್ಕೆ ಅವರನ್ನು ಕರೆಯಲು ತಮ್ಮ ವಿರೋಧವಿದೆ ಎಂದು ಬಿ.ಜೆ.ಪಿ. ಮುಖಂಡರೇ ಹೈಕಮಾಂಡ್ ಗೆ ದೂರು ನೀಡಿದ್ದರು.
ನಂತರ ಚುನಾವಣೆ ಮುಗಿದು ಅನಂತಕುಮಾರರಿಗೆ ಸಚಿವಸ್ಥಾನದ ಅವಕಾಶ ತಪ್ಪಿಸಿದ್ದು ಅವರ ಅವಿವೇಕದ ನಾಲಿಗೆಯೆ.
ಕೆಲವು ದಿವಸ ಸುಮ್ಮನಿರುವುದು, ಮತಾಂಧರು, ಬ್ರಾಹ್ಮಣರ ಸಂಘಟನೆ, ಸಂಘಗಳಲ್ಲಿ ಹುಚ್ಚನಂತೆ ವರ್ತಿಸುವುದು ಮಾಡುವ ಈ ಸಂಸದ ಬುದ್ಧಿನೆಟ್ಟಗಿಲ್ಲದವನು ಎನ್ನುವುದಕ್ಕೆ 25 ವರ್ಷಗಳ ನೂರಾರು ದೃಷ್ಟಾಂತಗಳಿವೆ. ಇಂಥ ಮತಾಂಧ ವೈದಿಕ ಈಗ ಮತ್ತೆ ತನ್ನ ಹಿಂದಿನ ಚಾಳಿಯಂತೆ ಅವಿವೇಕದ ಮಾತನಾಡಿ,ಕ್ಷಮೆ ಕೇಳಿದ್ದಾರೆ. ಇಂಥ ಅವಿವೇಕದ ಮಾತು,ಅತಿರೇಕ, ಅನಾಚಾರದ ನಡವಳಿಕೆಗಳಿಂದ ಉತ್ತರಕನ್ನಡದ ಮಾನವನ್ನು ರಾಜ್ಯ,ರಾಷ್ಟ್ರಮಟ್ಟದಲ್ಲಿ ಕಳೆದ ಅನಂತಹೆಗಡೆ ವಿರುದ್ಧ ಜಿಲ್ಲೆ ರಾಜ್ಯದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಕುತಂತ್ರಿಯ ಪರವಾಗಿ ಶೂದ್ರ ಸಂಘಿ ಹೇಸಿಗೆಗಳು ಬೊಗಳುತ್ತಿರುವುದು ಗುಲಾಮಿತನದ ಅತಿರೇಕ ಎನಿಸಿಕೊಳ್ಳುತ್ತಿದೆ.

ಅನಂತ ವಿರೋಧ,
ವ್ಯಾಪಕ ಖಂಡನೆ
ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧಿ ನಿಂದನೆ ಮಾಡಿದ ಸಂಸದ ಅನಂತಕುಮಾರ ಹೆಗಡೆ ಮತಾಂಧ ನಡವಳಿಕೆ ವಿರೋಧಿಸಿ ತಾಲೂಕು, ಜಿಲ್ಲೆ, ರಾಜ್ಯದಿಂದ ರಾಷ್ಟ್ರಮಟ್ಟದವರೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಶಿರಸಿಯಲ್ಲಿ ಪ್ರತಿಭಟನೆ ಮಾಡಿದ ಜಿಲ್ಲಾ ಕಾಂಗ್ರೆಸ್ ನಗರದ ಮಾರುಕಟ್ಟೆಯ ಗಾಂಧಿ ಪ್ರತಿಮೆ ಎದುರು ಸಾಂಕೇತಿಕ ಧರಣಿ ನಡೆಸಿದೆ.ಅನಂತಕುಮಾರ ಹೆಗಡೆಯವರನ್ನು ಸಂಸದ ಸ್ಥಾನದಿಂದ ವಜಾಮಾಡಲು ಆಗ್ರಹಿಸಿ ಲೋಕಸಭೆಯ ಸ್ಪೀಕರ್ ರಿಗೆ ಮನವಿ ಮಾಡಿದ್ದರೆ. ಸ್ವಯಂ ಬಿ.ಜೆ.ಪಿ. ಪಕ್ಷದ ಪ್ರಮುಖರೇ ಈ ಅವಿವೇಕಿಯ ಬಾಯಿ ಮುಚ್ಚಿಸುವಂತೆ ತಮ್ಮ ಪಕ್ಷದ ವರಿಷ್ಠರನ್ನು ಆಗ್ರಹಿಸಿದ್ದಾರೆ.

ಅನಂತ ಹೆಗಡೆಗೆ ಕ್ಷಮೆಯಾಚಿಸಲು ಪಕ್ಷದ ಆದೇಶ
ಉತ್ತರಕನ್ನಡದ ಸಂಸದ ಮಾಜಿ ಸಚಿವ ಅನಂತಕುಮಾರ ಹೆಗಡೆ ಉಸುರವಳ್ಳಿಯಂತೆ ವರ್ತಿಸುವುದು, ಮಾತನಾಡುವುದು ಅವರ ಲಾಗಾಯ್ತಿನ ಚಾಳಿ.
ಇದೇ ಮನುಷ್ಯ ಕೆಲವು ತಿಂಗಳುಗಳ ಹಿಂದೆ ಗಾಂಧಿ ಪರವಾಗಿ ಬಿ.ಜೆ.ಪಿ. ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಪರವಾಗಿ ಮಾತನಾಡಿ ನಾಟಕಮಾಡಿದ.್ದ
ಹೀಗೆ ಗಾಂಧಿ ಮಹಾತ್ಮನನ್ನು ರಾಜಕೀಯ ಲಾಭಕ್ಕಾಗಿ ಇವರು ಹೊಗಳಿದ ಹಿಂದೆಮುಂದೆ ಅವರು ಗಾಂಧಿಯನ್ನು ತೆಗಳಿದ ಸಂದರ್ಭಗಳ್ಯಾವುವು ಎಂಬುದನ್ನು ಅರಿಯಬೇಕು.
ಬ್ರಾಹ್ಮಣರ ಸಮ್ಮೇಳನ,ಬ್ರಾಹ್ಮಣರು, ಬ್ರಾಹ್ಮಣ್ಯದ ಪೋಶಕ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಮತಿವಿಕಲನಂತೆ ಅರಚಿ ತನ್ನ ಬ್ರಾಹ್ಮಣಿಕೆಯ ಹುಚ್ಚುತನ ಪ್ರದರ್ಶಿಸುವ ಈ ವೈದಿಕವೈರಸ್ ಹಿಂದುಳಿದವರು, ದಲಿತರಾದ ಭಾರತೀಯ ಬಹುಸಂಖ್ಯಾತರೆದುರು ಮತಾಂಧತೆಯ ಹಿಂದುತ್ವದ ಭಾಷಣ ಮಾಡುತ್ತಾರೆ.
ಉತ್ತರಕನ್ನಡದಲ್ಲಿ ಮತಾಂಧವೈದಿಕತೆಯನ್ನು ಬೆಂಬಲಿಸುವ ಕುತಂತ್ರಿಗಳನ್ನು ಬಿಟ್ಟರೆ ಈ ಉತ್ತರಕುಮಾರನ ಅವಾಂತರಗಳು, ಹುಚ್ಚುತನದ ಹೇಳಿಕೆಗಳನ್ನು ಉಪೇಕ್ಷಿಸುವವರೆ ಹೆಚ್ಚು, ಈ ಉಪೇಕ್ಷೆಯಲ್ಲಿ ಕೆಲವು ಬಾರಿ ಈ ವಿವೇಕಶೂನ್ಯನನ್ನು ನಿರ್ಲಕ್ಷಿಸುವುದಿರಬಹುದು ಆದರೆ ಅನೇಕಬಾರಿ ಈತನ ಹುಚ್ಚುತನಗಳನ್ನು ಉಪೇಕ್ಷಿಸಿದಂತೆ ಮಾಡಿ ಈತನ ಮಂಗಾಟಕ್ಕೆ ಪರೋಕ್ಷವಾಗಿ ಬೆಂಬಲಿಸುವ ಕುತಂತ್ರಗಳೂ ನಡೆಯುವುದುಂಟು.
ಅನಂತಕುಮಾರ ಹೆಗಡೆ ಕಾಂಗ್ರೆಸ್‍ನಿಂದಿಸುವುದು, ಜಾತ್ಯಾತೀತರು, ಪ್ರಗತಿಪರರು, ಧರ್ಮನಿರಪೇಕ್ಷರನ್ನು ದೂಷಿಸುವುದು ಸರ್ವೇಸಾಮಾನ್ಯ. ಆದರೆ ಇವರ ನಡೆ ನುಡಿಗಳನ್ನು ನೋಡಿದರೆ ಇವರ ಆಶಾಢಭೂತಿತನ, ಕಪಟತನ ಅರ್ಥವಾಗುತ್ತದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *