

ಸಿದ್ಧಾಪುರದ ಐಶ್ವರ್ಯ ಹೊನ್ನೆಗುಂಡಿ ಬೆಳಗಾವಿ ತಾಂತ್ರಿಕ ವಿಶ್ವ ವಿದ್ಯಾಲಯದ 2 ನೇ ರ್ಯಾಂಕ್ ಗಳಿಸಿದ್ದಾರೆ.
ನಗರದ ವೆಂಕಟೇಶ್ ಮತ್ತು ಕುಸಮಾ ಹೊನ್ನೆಗುಂಡಿಯವರಪುತ್ರಿಯಾಗಿರುವ ಇವಳು ದಾವಣಗೆರೆಯ ಬಿ.ಟಿ.ಡಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗಮಾಡಿದ್ದರು. ಶನಿವಾರ ಬೆಳಗಾವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಈ ಶ್ರೇಣಿಪ್ರದಾನ ಮಾಡಲಾಯಿತು.
ವೀರಾಗ್ರಣಿ-
ಇತ್ತೀಚೆಗೆ ಜೋಯಿಡಾದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ತಾಲೂಕಿನ ಕಾನಳ್ಳಿಯ ಚೌಡೇಶ್ವರಿ ಯುವಕ ಸಂಘದ ಸದಸ್ಯರು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಲಾವಣಿ, ಕೋಲಾಟ, ಸಣ್ಣಾಟ, ಹಾಗೂ ದೊಡ್ಡಾಟ ಸ್ಪರ್ಧೆಯಲ್ಲಿ ಪ್ರಥಮ, ಜಾನಪದ ನೃತ್ಯ, ವೀರಗಾಸೆ ಹಾಗೂ ಚರ್ಮವಾದ್ಯಮೇಳ ಸ್ಪರ್ಧೆಯಲ್ಲಿ ದ್ವೀತಿಯ ಮತ್ತು ಭಜನೆ, ರಂಗಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡು ವೀರಾಗ್ರಣಿ ಪ್ರಶಸ್ತಿಯನ್ನು ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಎಂ.ಎಲ್.ಭಟ್ ಪುನರಾಯ್ಕೆ-
ಸಿದ್ದಾಪುರ ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯು ದಿ-31-1-2020 ರಂದು ನಡೆದಿದ್ದು ಈ ಕೆಳಗಿನಂತೆ ಆಡಳಿತ ಮಂಡಳಿ ಸದಸ್ಯರು ಆಯ್ಕೆಯಾಗಿರುತ್ತಾರೆ.
ಮಂಜುನಾಥ ಲಕ್ಷ್ಮಣ ಭಟ್ಟ ಉಂಚಳ್ಳಿ (ಸಾಲಗಾರರಲ್ಲದ ಪ್ರತಿನಿಧಿ)
ಸುಬ್ರಾಯ ಲಕ್ಷ್ಮೀನಾರಾಯಣ ಹೆಗಡೆ ಸಾಯಿಮನೆ (ಸಾಮಾನ್ಯ ಕ್ಷೇತ್ರದ ಪ್ರತಿನಿಧಿ )
ಮಹಾಬಲೇಶ್ವರ ಶಿವರಾಮ ಹೆಗಡೆ ವಟರಜಡ್ಡಿ (ಸಾಮಾನ್ಯ ಕ್ಷೇತ್ರದ ಪ್ರತಿನಿಧಿ)
ಶ್ರೀಪತಿ ಶಂಕರ ಹೆಗಡೆ ಗೋಳಿಕೈ (ಸಾಮಾನ್ಯ ಕ್ಷೇತ್ರದ ಪ್ರತಿನಿಧಿ)
ಗಣಪತಿ ರಾಮಕೃಷ್ಣ ಹೆಗಡೆ ಹಿರೇಹದ್ದ (ಸಾಮಾನ್ಯ ಕ್ಷೇತ್ರದ ಪ್ರತಿನಿಧಿ)
ನರಸಿಂಹ ವೆಂಕಟ್ರಮಣ ಹೆಗಡೆ ಹಿರೇಕೈ(ಸಾಮಾನ್ಯ ಕ್ಷೇತ್ರದ ಪ್ರತಿನಿಧಿ)
ಲಕ್ಷ್ಮಣ ಈಶ್ವರ ಗೌಡ ಕುಳಿಕಟ್ಟು (ಸಾಮಾನ್ಯ ಕ್ಷೇತ್ರದ ಪ್ರತಿನಿಧಿ)
ಚೌಡು ರಾಮ ಗೌಡ ಬಿಳೆಕಲ್ಮನೆ (ಹಿಂದುಳಿದ “ಅ” ವರ್ಗ ಪ್ರತಿನಿಧಿ)
ಚಂದ್ರಶೇಖರ ಹುಲಿಯಾ ಗೌಡ ದಿಗೋಡಿ (ಹಿಂದುಳಿದ “ಅ” ವರ್ಗಪ್ರತಿ ನಿಧಿ)
ನೇತ್ರಾವತಿ ಮಂಜುನಾಥ ಭಟ್ಟ ಹೊಸ್ತೋಟ (ಮಹಿಳಾ ಪ್ರತಿನಿಧಿ)
ವಿಮಲಾ ಕೊಂ ತಿಮ್ಮ ನಾಯ್ಕ ಹೆಗ್ಗರಣಿ (ಮಹಿಳಾ ಪ್ರತಿನಿಧಿ)
ಮಂಜ ಗಣಪ ಹರಿಜನ ಹುಲ್ಲುಂಡೆ (ಎಸ.ಸಿ. ಪ್ರತಿನಿಧಿ)
ದಿನಾಂಕ-7-2-2020 ರಂದು ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಹಿಂದಿನ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಮಂಜುನಾಥ ಲಕ್ಷ್ಮಣ ಭಟ್ಟ ಉಂಚಳ್ಳಿ ಅಧ್ಯಕ್ಷರಾಗಿ, ಚೌಡು ರಾಮ ಗೌಡ ಬಿಳೆಕಲ್ಮನೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಚುನಾವಣಾಧಿಕಾರಿಯಾಗಿ ಶ್ರೀಧರ ಎಸ ಭಟ್ಟ (ಪ್ರಾಚಾರ್ಯರು ಪ.ಪೂ.ಕಾಲೇಜ- -ಹೆಗ್ಗರಣಿ) ಕಾರ್ಯನಿರ್ವಹಿಸಿದ್ದರು.


