

ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪಕ್ಷದ ಪ್ರಮುಖರಿಂದಲೇ ಬಹಿರಂಗ ತರಾಟೆಗೆ ಗುರಿಯಾದ ಪ್ರಕರಣ ಇಂದು ಸಿದ್ಧಾಪುರದಲ್ಲಿ ನಡೆದಿದೆ.ಕಾರ್ಯಕರ್ತರ ಅವಗಣನೆ, ಅಭಿವೃದ್ಧಿಕಾರ್ಯಗಳ ನಿರ್ಲಕ್ಷದ ಹಿನ್ನೆಲೆಯಲ್ಲಿ ಬಿ.ಜೆ.ಪಿ. ಸದಸ್ಯರು, ಜನಪ್ರತಿನಿಧಿಗಳೇ ಬಹಿರಂಗವಾಗಿ ವಿಧಾನಸಭಾ ಅಧ್ಯಕ್ಷರನ್ನುತರಾಟೆಗೆ ತೆಗೆದುಕೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಿದ್ಧಾಪುರದ ಸಾಯಿನಗರದ ರಸ್ತೆ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದ ವಿಧಾನಸಭಾಧ್ಯಕ್ಷ ಕಾಗೇರಿ ತಮ್ಮ ನಿಗದಿತ ಕೆಲಸ ಮುಗಿಸುತಿದ್ದಂತೇ ಸ್ಥಳಿಯ ಪಟ್ಟಣ ಪಂಚಾಯತ್ ಸದಸ್ಯರು, ಬಿ.ಜೆ.ಪಿ.ಪದಾಧಿಕಾರಿಗಳೂ ಆಗಿರುವ ಕೆಲವರು ಶಾಸಕರಿಗೆ ನಮ್ಮ ಬೇಡಿಕೆ,ಅಹವಾಲು ಕೇಳಲು ಸಮಯವಿಲ್ಲ,ಜನ ಅಭಿವೃದ್ಧಿಯೂ ಇಲ್ಲ, ನಮ್ಮ ಪರಿಗಣನೆಯೂ ಇಲ್ಲ ಎಂದು ನಮ್ಮನ್ನು ಪ್ರಶ್ನಿಸುತ್ತಾರೆ. ಹಿಂದೆ ನಮ್ಮ ಸರ್ಕಾರ ಬರಲಿ ಕೆಲಸ ಮಾಡೋಣ ಎನ್ನುತಿದ್ದವರು ಈಗ ಕಾರ್ಯಕರ್ತರಿಗೆ ಮಾತನಾಡಲೂ ಸಮಯ ನಿಡುತ್ತಿಲ್ಲ. ಯಾಕೆ ಹೀಗೆ? ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳ ಅಹವಾಲು ಕೇಳಲು ಸಮಯವಿದೆಯೆ? ಎಂದೆಲ್ಲಾ ಪ್ರಶ್ನಿಸತೊಡಗಿದಂತೆ ಮಾತನಾಡೋಣ, ಸಮಯಕೊಡುತ್ತೇನೆ ಎಂದು ಟಾಟಾ ಕೂಡಾ ಮಾಡದೆ ಸಭಾಧ್ಯಕ್ಷರು ಕಾರ್ ಹತ್ತಿ ನಡೆದಿರುವ ಬಗ್ಗೆ ಬಿ.ಜೆ.ಪಿ. ಕಾರ್ಯಕರ್ತರೇ ಮಾಹಿತಿ ನೀಡಿದ್ದಾರೆ.
ಇಂದಿನ ಸಾಯಿನಗರದ ಕಾರ್ಯಕ್ರಮಕ್ಕೆ ಯಾರನ್ನೂ ಆಹ್ವಾನಿಸದಿರುವುದು, ಗ್ರಾಮೀಣಭಾಗದ ನಿಗದಿತ ಕಾರ್ಯಕ್ರಮಕ್ಕೆ ಬಂದಿದ್ದ ಕಾಗೇರಿ ಸಾಯಿನಗರದ ಸಣ್ಣ ಕಾಮಗಾರಿಯ ಶಂಕುಸ್ಥಾಪನೆ ಮಾಡಿರುವುದು. ಸಿದ್ಧಾಪುರ ತಾಲೂಕು ಮತ್ತು ಶಿರಸಿ ಕ್ಷೇತ್ರದಲ್ಲಿ ಸಭಾಧ್ಯಕ್ಷ ಕಾಗೇರಿ ಬಿ.ಜೆ.ಪಿ.ಜನಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಿರುವುದು, ಸರ್ಕಾರದ ಕೆಲವು ಕೆಲಸಗಳನ್ನು ಜಾತಿ,ನಾಯಕರ ಮೇಲಿನ ಅಸಮಾಧಾನಕ್ಕೆ ತಡೆಹಿಡಿದಿರುವುದು ಸೇರಿದಂತೆ ಚುನಾವಣೆ,ಪಕ್ಷದ ಕೆಲಸಗಳನ್ನು ಮಾಡಿರುವ ಪ್ರಾಮಾಣಿಕರನ್ನು ಕಡೆಗಣಿಸಿ ಗುಟ್ಟಾಗಿ ಕೆಲವರಿಗೆ ಮಾತ್ರ ಸಕಲ ಅನುಕೂಲ ಮಾಡುತ್ತಿರುವ ಕಾಗೇರಿಯವರ ಇತ್ತೀಚಿನ ನಡವಳಿಕೆಯಿಂದ ಬೇಸತ್ತ ಪಕ್ಷದ ಕಾರ್ಯಕರ್ತರೇ ಈ ಘಟನೆಗೆ ಮುಂದಾಗಿ, ಮುಜುಗರ ಉಂಟುಮಾಡಿದ್ದು ಸತ್ಯ ಎಂದು ಸ್ಥಳಿಯರು ತಿಳಿಸಿದ್ದಾರೆ.
ಕಾರವಾರದಿಂದ ಬಂದಿದ್ದ ಗುರುಭಜಕರು- ರಥೋತ್ಸವ,ಜಾತ್ರೆ,ಉತ್ಸವ
ಗ್ರೀನ್‍ಲ್ಯಾಂಡ್‍ಶುಭಾರಂಭ-
ಸಿದ್ಧಾಪುರ ತಾಲೂಕಿನ ಭುವನಗಿರಿಯ ಮೂಕಾಂಬಿಕಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಗಳು ನಡೆದವು.
ನಗರದ ಬಸವೇಶ್ವರ ದೇವರ ಜಾತ್ರೆ ಇಂದು ನಾಳೆ ನಡೆಯಲಿದೆ. ಸೋಮವಾರ ಪುಷ್ಫರಥೋತ್ಸವ ನಡೆದರೆ,ಮಂಗಳವಾರ ಮಹಾರಥೋತ್ಸವ ನಡೆಯಲಿದೆ.ಸಿದ್ಧಾಪುರ ಕೊಂಡ್ಲಿ ಹಾಳದಕಟ್ಟಾದಲ್ಲಿ ನಡೆದ ಗುರುಪ್ರತಿಪದಾ ಉತ್ಸವ ಸೋಮುವಾರ ನಡೆಯಿತು.ಕಾರವಾರ ಬಾಡದ ಗುರುಮಠದ ಶಿಷ್ಯ ವರ್ಗಸೇರಿದಂತೆ ಅನೇಕರು ಕಾರವಾರದಿಂದ ಸಿದ್ಧಾಪುರಕ್ಕೆ ಆಗಮಿಸಿ ಈ ಉತ್ಸವದಲ್ಲಿ ಪಾಲ್ಗೊಂಡರು.
ಭಜನೆ,ಅನ್ನಸಂತರ್ಪಣೆ ವೇಳೆ ಸ್ಥಳಿಯರಿಗಿಂತ ಕಾರವಾರದಿಂದ ಬಂದ ಭಜಕರು ಪಾಲ್ಗೊಂಡು ಗುರುಪ್ರತಿಪದಾ ಉತ್ಸವ ಸಂಪನ್ನಮಾಡಿದರು.
