

ಸಿದ್ಧಾಪುರದ ಬುಧವಾರದ ವಾರದ ಸಂತೆಯ ದಿವಸ ನಗರದಲ್ಲಿ ಎರಡು ಸುದ್ದಿಗಳು ಗೊಂದಲಕ್ಕೆ ಕಾರಣವಾದವು. ಮೊದಲನೆ ಸುದ್ದಿಯೆಂದರೆ ಕಾವಂಚೂರು ಗ್ರಾ.ಪಂ. ನ ಕಲ್ಲೂರಿನಲ್ಲಿ ರಸ್ತೆಯ ನಿರ್ಮಾಣಕ್ಕೆ ಅಡ್ಡಿಯುಂಟುಮಾಡಿದ ಕೆಲವರು ಈ ವಿಚಾರದಲ್ಲಿ ವಸಂತನಾಯ್ಕ ಮತ್ತವರ ಆಪ್ತರ ಮೇಲೆ ಪೊಲೀಸ್ ದೂರು ನೀಡಿ ಠಾಣೆಯಲ್ಲಿ ಹೊಂದಾಣಿಕೆಯಿಂದ ಬಗೆಹರಿಸಿಕೊಂಡರು.
ಈ ವಿಚಾರ ಚರ್ಚೆ, ವಿವಾದವಾಗಿ ಪೊಲೀಸ್ ಠಾಣೆ ಎದುರು ಜನ ಜಮಾಯಿಸಿದ್ದರಿಂದ ಕೆಲಕಾಲ ಗೊಂದಲವಾದಂತೆ ಕಂಡುಬಂತು ಆದರೆ ಈ ಪ್ರಕರಣ ಸುಖಾಂತವಾಗಿದೆ ಎಂದು ಮಾಹಿತಿ ದೊರೆತಿದೆ.
ಇನ್ನೊಂದು ಪ್ರಕರಣ ಬಲು ರೋಚಕ ಪ್ರಕರಣ ಸಿದ್ಧಾಪುರದ ಬುಧವಾರದ ಸಂತೆ ದಿವಸ ಮೊಬೈಲ್ ಪರ್ಸ್ ಕದಿಯುವ ಕಳ್ಳರ ವ್ಯವಸ್ಥಿತ ತಂಡವೊಂದು ಕಾರ್ಯನಿರ್ವಹಿಸುತ್ತಿದೆ. ಈ ತಂಡ ವಾರಬಿಟ್ಟು ವಾರ ಅಥವಾ 2-3 ವಾರಗಳಿಗೊಮ್ಮೆ ಸಿದ್ಧಾಪುರಕ್ಕೆ ಬರುತ್ತಿದೆ. ಈ ತಂಡದ ಕೈಚಳಕದಿಂದ ಗ್ರಾಮೀಣ ಪ್ರದೇಶದ ಜನರು ಸೇರಿದಂತೆ ಅನೇಕರು ತಮ್ಮ ಪರ್ಸ್, ಮೊಬೈಲ್
ಕಳೆದುಕೊಂಡಿದ್ದಾರೆ.
ಇಂಥ ಕೆಲವರು ಪೊಲೀಸ್ ಠಾಣೆಗೆ ದೂರು ನೀಡಿದರೆ ಕೆಲವರು ಸುಮ್ಮನಾಗಿದ್ದಾರೆ. ಈ ಪ್ರಕರಣ ಬೇಧಿಸಲು ಪೊಲೀಸರು ಮುಫ್ತಿಯಲ್ಲಿ ಕಾರ್ಯನಿರ್ವಹಿಸುತಿದ್ದು ಈ ಬುಧವಾರದ ವರೆಗೆ ಕಳ್ಳರನ್ನು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಈ ವಿಚಾರ ಚರ್ಚೆಯಾಗಿ ಪೊಲೀಸ್ ಠಾಣೆ ಎದುರು ಜನರು ಜಮಾವಣೆಯಾದ್ದರಿಂದ ಮೊಬೈಲ್ ಕಳೆದುಕೊಂಡವರು ಮೊಬೈಲ್ ಕಳ್ಳರೇ ಸಿಕ್ಕಿದ್ದಾರೆಂದು ಬ್ರಮಿಸಿ ಠಾಣೆ ಕಡೆಗೆ ಬೈಕ್ ತಿರುಗಿಸಿ ಬೇಸರದಿಂದ ವಾಪಾಸಾದವರು ಇದ್ದಾರೆ. ಇಂದಿನ ಈ ಎರಡು ಘಟನೆಗಳು ಪರಸ್ಫರ ಜನರ ಗೊಂದಲಕ್ಕೆ ಕಾರಣವಾಗಿರುವ ಬಗ್ಗೆ ಬಲ್ಲ ಮೂಲಗಳು ಸಮಾಜಮುಖಿಗೆ ಮಾಹಿತಿ ನೀಡಿವೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
