ಬಿ.ಜೆ.ಪಿ. ಧೂಳೀಪಟ.. ಹೀಗೆಂದ ಸ್ವಾಮೀಜಿ ಯಾರು ಗೊತ್ತಾ?

2023ರ ಚುನಾವಣೆಯಲ್ಲಿ ದೇವಿ ಶಾಪದಿಂದ ಬಿಜೆಪಿ ಪಕ್ಷ ಧೂಳೀಪಟ ಆಗಲಿದೆ : ಕಲ್ಲಿನಾಥ ಸ್ವಾಮೀಜಿ ಭವಿಷ್ಯ

ಧರ್ಮದ ಆಧಾರದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಎಲ್ಲರೂ ಅವರನ್ನ ನಂಬಿ ವೋಟ್ ಹಾಕಿದ್ದಾರೆ. ಆದರೆ, ಹಿಂದೂಗಳ ದೇವಸ್ಥಾನಗಳನ್ನ ಕೆಡವಿದ್ದು ನಮಗೆ ನೋವಾಗಿದೆ. ನೂರಕ್ಕೆ ನೂರಾವೊಂದು ಪರ್ಸೆಂಟ್ ಹಿಂದೂಗಳ ಶಾಪ ಅವರಿಗೆ ತಟ್ಟುತ್ತೆ ಎಂದರು..

ಬಾಗಲಕೋಟೆ : 2023ರಲ್ಲಿ ದೇವಿ ಶಾಪದಿಂದ ಬಿಜೆಪಿ ಧೂಳೀಪಟ ಆಗಲಿದೆ. ದೇವರ ಹಾಗೂ ರೈತರ ಶಾಪದಿಂದ ಬಿಜೆಪಿ ಹೋಗುವ ಕಾಲ ಬರಬಹುದು ಎಂದು ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಅವರು ಬಾದಾಮಿ ಶ್ರೀ ಬನಶಂಕರಿ ಜಾತ್ರೆ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬಾದಾಮಿ ಶ್ರೀ ಬನಶಂಕರಿ ದೇವಿ ಜಾತ್ರೆ ಶತಮಾನದ ಇತಿಹಾಸ ಹೊಂದಿದೆ. ಭಾರತ ದೇಶ ನಂಬಿಕೆ ಮೇಲೆ, ಧಾರ್ಮಿಕ ಭಾವನೆ ಮೇಲೆ ಪರಂಪರೆಯನ್ನ ಹೊಂದಿರುವ ರಾಷ್ಟ್ರವಾಗಿದೆ.

ಎರಡು ವರ್ಷಗಳಿಂದ ಕೋವಿಡ್ ನೆಪ ಹೇಳಿ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರ ಧಾರ್ಮಿಕ ಕಾರ್ಯಕ್ರಮಗಳು ಮತ್ತು ರೈತರ ಮೇಲೆ ಶೋಚನೀಯ ಪರಿಸ್ಥಿತಿ ನಡೆಸಿದೆ ಎಂದು ಆರೋಪಿಸಿದರು.

ಕೊಲ್ಹಾರದ ಶ್ರೀ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಮಾತನಾಡಿರುವುದು..

ಕಾನೂನು ಕಟ್ಟಳೆ ಮಾಡಿ ರೈತರನ್ನ ಮತ್ತು ಧಾರ್ಮಿಕ ಕಾರ್ಯಕ್ರಮವನ್ನ ತುಳಿಯುತ್ತಿದ್ದಾರೆ. ಧಾರ್ಮಿಕ ಆಚರಣೆ ಮಾಡಿ ದೇವಿ ಹತ್ರ ಕೇಳಿದ್ರೆ, ಸಂಪೂರ್ಣ ಕೋವಿಡ್ ನಿಯಂತ್ರಣ ಮಾಡುವ ಶಕ್ತಿ ದೇವಿಯಲ್ಲಿದೆ. ಬನಶಂಕರಿ ಜಾತ್ರೆಯಲ್ಲಿ ಭಕ್ತರನ್ನ ಹೊಡೆಯುವುದನ್ನು ನೋಡಿದರೆ, ದೇವಿ ಶಾಪದಿಂದ 2023ರ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟ ಆಗಲಿದೆ.

ಧರ್ಮದ ಆಧಾರದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಎಲ್ಲರೂ ಅವರನ್ನ ನಂಬಿ ವೋಟ್ ಹಾಕಿದ್ದಾರೆ. ಆದರೆ, ಹಿಂದೂಗಳ ದೇವಸ್ಥಾನಗಳನ್ನ ಕೆಡವಿದ್ದು ನಮಗೆ ನೋವಾಗಿದೆ. ನೂರಕ್ಕೆ ನೂರಾವೊಂದು ಪರ್ಸೆಂಟ್ ಹಿಂದೂಗಳ ಶಾಪ ಅವರಿಗೆ ತಟ್ಟುತ್ತೆ ಎಂದರು.

ದೇವರನ್ನ ವಿರೋಧ ಮಾಡಿದವರು ಇವತ್ತಿನವರೆಗೂ ಬೆಳೆದಿಲ್ಲ. ಭಾರತ ದೇಶ ಧರ್ಮದ ತಳಹದಿಯ ಮೇಲೆ ನಿಂತಿದೆ. ಕಳೆದ ಬಾರಿ ಕೋವಿಡ್​ನಲ್ಲಿ ಕೆರಕಲಮಟ್ಟಿ ಮತ್ತು ಬೆಳಗಾವಿಗೆ ಅಮಿತ್ ಶಾ ಬಂದು ಹೋಗಿದ್ದರು. ನಿಮ್ಮ ರಾಷ್ಟ್ರೀಯ ಅಧ್ಯಕ್ಷರು ಕೇಂದ್ರ ಗೃಹ ಮಂತ್ರಿಗಳು ಬಂದಾಗ ಲಕ್ಷ ಗಟ್ಟಲೆ ಜನ ಬಂದ್ರೆ ಕೊರೊನಾ ಬರೋದಿಲ್ಲವೇ ಎಂದು ಅವರು ಪ್ರಶ್ನೆ ಮಾಡಿದರು.

ಆದರೆ, ಬನಶಂಕರಿ ಜಾತ್ರೆಯಲ್ಲಿ ಜನ ಬಂದ್ರೆ ಕೊರೊನಾ ಬರುತ್ತೆ ಎಂದು ಭಕ್ತರ ಮೇಲೆ ಶೋಷಣೆ ಮಾಡೋದು ನೋವಾಗಿದೆ. ಈ ಬಾರಿಯೂ ಲಾಕ್​ಡೌನ್​​ ಮಾಡಿದ್ರೆ ಅದರ ಪರಿಸ್ಥಿತಿ ಸಿಎಂ ಬೊಮ್ಮಾಯಿಯವರಿಗೆ ತಟ್ಟುತ್ತದೆ ಎಂದರು. (etbk)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಪ್ರತಿಭೋತ್ಸವ: ಕಲಾವಿದರಿಗೆ ಸನ್ಮಾನ

ಸಿದ್ದಾಪುರ: ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ನಡೆಯುತ್ತಿರುವ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾ ವಿದ್ಯಾಲಯ ದ ಸಿದ್ದಾಪುರ ಶಾಖೆಯ ಪ್ರತಿಭೋತ್ಸವ ಕಾರ್ಯಕ್ರಮ ಅಕ್ಟೋಬರ್...

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

Latest Posts

ಪ್ರತಿಭೋತ್ಸವ: ಕಲಾವಿದರಿಗೆ ಸನ್ಮಾನ

ಸಿದ್ದಾಪುರ: ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ನಡೆಯುತ್ತಿರುವ ಶ್ರೀ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾ ವಿದ್ಯಾಲಯ ದ ಸಿದ್ದಾಪುರ ಶಾಖೆಯ ಪ್ರತಿಭೋತ್ಸವ ಕಾರ್ಯಕ್ರಮ ಅಕ್ಟೋಬರ್ 25 ರಂದು ಇಲ್ಲಿಯ ಶಂಕರಮಠದಲ್ಲಿ ಜರುಗಲಿದೆ ಎಂದು ಸಂಗೀತ ಶಿಕ್ಷಕಿ ವಿದುಷಿ ವಸುದಾ ಶರ್ಮಾ ತಿಳಿಸಿದರು.ಪಟ್ಟಣದ ನಿವೇದಿತಾ ಮಹಿಳಾ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಪ್ರಸ್ತುತ 35...

Recommended For You

About the Author: Kanneshwar Naik

Leave a Reply

Your email address will not be published. Required fields are marked *