ಸಿಕ್ಕಿಬಿದ್ದ ಹವಾಲಾ ಹಣ, ಕರ್ಚಿಗೊಂದು ಮೋರಿ!
ಮುಕುಂದ ಜೋಡಿ
ಸೂಪರ್ ದಂಪತಿಗಳು
ಸಿದ್ಧಾಪುರದಲ್ಲಿ ಸದ್ದಿಲ್ಲದೆ ನಡೆದ ಕಲರ್ ಸೂಪರ್ ವಾಹಿನಿಯ ಸೂಪರ್ ದಂಪತಿಗಳ ಆಯ್ಕೆಯಲ್ಲಿ ನಗರದ ಹಾಡುಗಾರ ಮುಕುಂದ ಪೈ ದಂಪತಿಗಳು ಆಯ್ಕೆಯಾಗಿದ್ದಾರೆ.
ನಗರದ ಹೊಸಪೇಟೆಯ ಮುಕುಂದ ಖಾಸಗಿ ಉದ್ಯೋಗಿ ಮತ್ತು ಹವ್ಯಾಸಿ ಹಾಡುಗಾರ. ಅವರ ಪತ್ನಿ ಶಾಲಾ ಶಿಕ್ಷಕಿ ಮಾತು-ಹಾಡು, ರಗಳೆ,ತಮಾಸೆಗಳ ಈ ದಂಪತಿಗಳು ತಮ್ಮ ವಿಶೇಶ ಅರ್ಹತೆಗಳಿಂದ ಸೂಪರ್ ದಂಪತಿಗಳಾಗಿಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಟೆಂಪೋಕ್ಕೆ ಬಿತ್ತು 50ಸಾವಿರ ದಂಡ!
ಸಿದ್ಧಾಪುರ ತಾಲೂಕಿನ ಟೆಂಪೋ ಡ್ರೈವರ್ ರೊಬ್ಬರಿಗೆ ಹುಬ್ಬಳ್ಳಿ ಸಾರಿಗೆ ಅಧಿಕಾರಿಗಳು ಬರೋಬ್ಬರಿ 51 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಸಿದ್ಧಾಪುರದಿಂದ ಪರ ಊರಿಗೆ ಹೋಗುವ ವಾಹನ ಚಾಲಕರು, ಮಾಲಕರು ಸಾರಿಗೆ ನಿಯಮ ಕಟ್ಟುನಿಟ್ಟಾಗಿ ಅನುಸರಿಸುವುದು ದುಸ್ಥರ. ಇಂಥ ಸ್ಥಿತಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ಕೊಂಡೊಯ್ಯುತಿದ್ದ ಆರೋಪದ ಮೇಲೆ ಟೆಂಪೋ ಚಾಲಕನಿಗೆ 51 ಸಾವಿರ ದಂಡ ವಿಧಿಸಿದ ಹುಬ್ಬಳ್ಳಿ ಸಾರಿಗೆ ಅಧಿಕಾರಿಗಳು ದಾಖಲೆ ಮಾಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಿಂದ ಪ್ರಾರಂಭವಾಗಿ ದೇಶದ ಯಾವ ಮೂಲೆಯಲ್ಲಿ ಈ ರೀತಿ ದುಬಾರಿ ದಂಡ ವಿಧಿಸಿದರೂ ಅಲ್ಲಿನ ಜನಪ್ರತಿನಿಧಿಗಳು ಬಾಧಿತರ ನೆರವಿಗೆ ಬಂದು ಅಧಿಕಾರಿಗಳಿಗೆ ಹಣ್ಣುಗಾಯಿ, ನೀರುಗಾಯಿ ಮಾಡುತಿದ್ದರು ಆದರೆ ನಮ್ಮ ಮೈಕ್ ಮತ್ತು ಸ್ಫೀಕರ್ 5 ವರ್ಷಕ್ಕೊಮ್ಮೆ ಹಿಂದೂ,ಹಿಂದುತ್ವದ ಮುವಾಡದ ವೈದಿಕನೀಚತನಗಳಿಂದ ಸೌಂಡುಮಾಡುವುದು ಬಿಟ್ಟರೆ ಜನ ಸಾಯುತಿದ್ದರೂ ‘ಅಧಿಕಾರಿಗಳೇ ಅವರನ್ನು ಕಾನೂನಿನ ಪ್ರಕಾರ ಬದುಕಿಸಲು ಬಂದರೆ ಬದುಕಿಸಿ ಇಲ್ಲವಾದರೆ ಜನಿವಾರ ನೋಡಿ ಕತೆಮುಗಿಸಿ’ ಎನ್ನುತ್ತಾರಾದ್ದರಿಂದ ಇವರನ್ನು ಹಿಂದುತ್ವದ ಕಾರಣಕ್ಕೆ ಆಯ್ಕೆಮಾಡಿದ್ದಕ್ಕೆ ನಾವು ಜೀವ ಬಿಡಬೇಕಾಗಿದೆ ಎಂದು ಜನಸಾಮಾನ್ಯ ಚಾಲಕ,ಮಾಲಕರು ಗೊಣಗಿದರು ಎನ್ನಲಾಗಿದೆ.
ಸಿಕ್ಕಿಬಿದ್ದ ಹವಾಲಾ ಹಣ, ಕರ್ಚಿಗೊಂದು ಮೋರಿ!
ತಾಲೂಕಿನ ಹೇರೂರಿನ ಅಡಿಕೆ ವ್ಯಾಪಾರಿಗಳು ಎನ್ನಲಾದ ಇಬ್ಬರನ್ನು ಮೊನ್ನೆ ಶಿರಸಿ ಪೊಲೀಸರು ದಾಖಲೆ ಇಲ್ಲದ ಹಣ ಸಾಗಿಸುತಿದ್ದ ಆರೋಪದ ಮೇಲೆ ಬಂಧಿಸಿ 56 ಲಕ್ಷಗಳನ್ನು ವಶಕ್ಕೆ ಪಡೆದಿದ್ದಾರೆ.
ತೆರಿಗೆ ತಪ್ಪಿಸಿ ಅಡಿಕೆ ಮಾರುವ ಜಾಲದ ಹವಾಲಾ ಹಣ ಇದಾಗಿರುವ ಬಗ್ಗೆ ಗುಮಾನಿಗಳಿವೆ. ಕೇಂದ್ರದ ಗಬ್ಬರ್ ಸಿಂಗ್ ತೆರಿಗೆಯಿಂದ ಕಂಗೆಟ್ಟ ಅಡಿಕೆ ವ್ಯಾಪಾರಿಗಳು ಹವಾಲಾ ಮೂಲಕ ಅಡಿಕೆ ವಹಿವಾಟು ನಡೆಸುತಿದ್ದಾರೆ ಎನ್ನುವ ಆರೋಪಕ್ಕೆ ಈ ಪ್ರಕರಣ ಪುಷ್ಠಿ ನೀಡಿದಂತಾಗಿದೆ.
ಕರ್ಚಿಗೊಂದು ಮೋರಿ!
ನಗರದ ಪ.ಪಂ. ವ್ಯಾಪ್ತಿಯ ಹಾಳದಕಟ್ಟಾ ಬಳಿ ನಾಮಕಾವಾಸ್ಥೆ ಮೋರಿ ಒಂದನ್ನು ಕಟ್ಟಿದ್ದು, ಈ ಕೆಲಸದ ಕಳಪೆ, ಕಾಮಗಾರಿ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಸ್ಥಳಿಯರಿಗೆ ಪ.ಪಂ. ಪ್ರಮುಖ ಮುಖಂಡರೊಬ್ಬರು ಇದರ ಕತೆ ಬಿಡಿ, ಒಂದುವರ್ಷದೊಳಗೆ ಇದಕ್ಕೆ ದೊಡ್ಡ ಮೋರಿಯನ್ನೇ ನಿರ್ಮಿಸುತ್ತೇವೆ ಎಂದು ಆಶ್ವಾಸನೆ ನೀಡಿ ಈ ಕೆಲಸ ಜನರಿಗಾಗಿ ಅಲ್ಲ ಎಂದು ಸಮಾಜಾಯಿಸಿ ನೀಡಿರುವ ಬಗ್ಗೆ ನಗರದಲ್ಲಿ ಚರ್ಚೆ ನಡೆಯುತ್ತಿದೆ.
ಇ -ಪತ್ರಿಕೆ ವೇಗವಾಗಿ ಜನರನ್ನು ಹೆಚ್ಚು ಸೆಳೆಯುತ್ತಿದೆ.ಶುಭವಾಗಲಿ