ತ್ಯಾಗ,ಶ್ರಮ,ಆತ್ಮವಿಶ್ವಾಸದಿಂದ ಇಷ್ಟಪಟ್ಟು ಓದುವವರು ಸಾಧಿಸಬಲ್ಲರೆ ಹೊರತು ಕಷ್ಟಪಟ್ಟು ಓದಿದವರು ಯಾರೂ ಗುರಿಮುಟ್ಟಲಾರರು, ಜನಸಾಮಾನ್ಯರ ಕಷ್ಟ ಅರಿತವರು ಉತ್ತಮ ಆಡಳಿತಗಾರರಾಗಬಲ್ಲರೆ ಹೊರತು ಸುಖದ ಸುಪ್ಪತ್ತಿಗೆಯಲ್ಲಿದ್ದವರು ಉತ್ತಮ ಆಡಳಿತಗಾರರು,ಪ್ರಭುಗಳು ಆದ ದೃಷ್ಟಾಂತಗಳಿಲ್ಲ.
-ಚನ್ನಬಸಪ್ಪ ಕೆ.
ಬೇಡದ ವಿಷಯ-ವಿಚಾರಗಳು ನಮ್ಮನ್ನು ಆಳುತ್ತಿರುವ ಈ ವಿಷಮ ಕಾಲದಲ್ಲಿ ಆತ್ಮವಿಶ್ವಾಸ,ನಿರಂತರ ಪರಿಶ್ರಮದ ಜೊತೆಗೆ ಗುಣಾತ್ಮಕ ವಿಷಯವಸ್ತು ಆಯ್ಕೆಯಿಂದ ಯುವಕರು ಗುರಿಮುಟ್ಟುವ ಧ್ಯೇಯ ಬೆನ್ನಟ್ಟಬೇಕು ಎಂದು ಸಲಹೆ ನೀಡಿರುವ ತುಮಕೂರು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ. ದೊಡ್ಡಗುರಿ ಬೆನ್ನಟ್ಟುವ ಮೂಲಕ ದೊಡ್ಡದನ್ನು ಸಾಧಿಸಲು ಸಾಧ್ಯ ಎಂದಿದ್ದಾರೆ.
(ಸಿದ್ಧಾಪುರ) ಇಲ್ಲಿಯ ನಾಮಧಾರಿ,ದೀವರು, ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ಮಹಾತ್ಮರು,ಸಾಧಕರು,ಪ್ರಸಿದ್ಧರ ಬಗ್ಗೆ ಓದದೆ,ತಿಳಿಯದೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಲ್ಫಜ್ಞಾನವನ್ನು ವೈಭವೀಕರಿಸುತಿದ್ದಾರೆ.ಇಂಥ ಅಪಸವ್ಯಗಳನ್ನು ಅನುಸರಿಸುವ ಮೂಲಕ ಯುವಜನತೆ ತಮ್ಮ ಅಮೂಲ್ಯ ಶ್ರಮ,ಕಾಲ ವ್ಯರ್ಥ ಮಾಡುತಿದ್ದಾರೆ. ಒಳ್ಳೆಯ ಆಯ್ಕೆಯಿಂದ ಮಾತ್ರ ಒಳ್ಳೆಯ ವಿಚಾರ, ಉತ್ತಮ ಸಾಧನೆ ಸಾಧ್ಯ ಎಂದು ಅರಿತು ನಡೆದಾಗ ಮಾತ್ರ ಶ್ರೇಷ್ಠಸಾಧನೆ ಸಾಧ್ಯ ಎಂದರು.
Really very good suggestions.