
ಉತ್ತರಕನ್ನಡ ಜಿಲ್ಲೆಯಲ್ಲಿ ಎಲ್ಲಾ ಮುಂಜಾಗೃತೆಗಳ ನಡುವೆ ಮಂಗನಕಾಯಿಲೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟ ದುರ್ಘಟನೆ ನಡೆದಿದೆ. ಮೃತವ್ಯಕ್ತಿ ಸಿದ್ಧಾಪುರದ ಮಳಗುಳಿಯ ಭಾಸ್ಕರ್ ಹೆಗಡೆ ಎನ್ನಲಾಗಿದ್ದು ಮೃತರು ಮಂಗನಖಾಯಿಲೆಯ ವಿಶೇಶ ಮುತುವರ್ಜಿಯ ಸರ್ಕಾರಿ ಆಸ್ಫತ್ರೆಗೆ ದಾಖಲಾಗದೆ ಖಾಸಗಿ ಅಸ್ಫತ್ರೆಯಲ್ಲಿ ಕಾಲಹರಣ ಮಾಡಿ ಸೂಕ್ತ ವ್ಯವಸ್ಥೆ, ಚಿಕಿತ್ಸೆ ದೊರೆಯದೆ ಅಸುನೀಗಿದ್ದಾರೆ.
ಜಿಲ್ಲಾಡಳಿತ ಕೂಡಾ ಮಂಗನಕಾಯಿಲೆ ರೋಗಿಗಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆಯನ್ನು ಸರ್ಕಾರಿ ಆಸ್ಫತ್ರೆಯಲ್ಲಿ ಮಾಡದಿರುವುದು ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.

ಶಂಕರಮಠದಲ್ಲಿ ನಟರಾಜ ನೃತ್ಯಶಾಲೆಯ 27ನೇ ವಾರ್ಷಿಕೋತ್ಸವ,ಮುದನೀಡಿದ ಭರತನಾಟ್ಯ
ನಟರಾಜ ನೃತ್ಯಶಾಲೆ ಸಿದ್ದಾಪುರ ಶಾಖೆಯ 27ನೇ ವರ್ಷದ ವಾರ್ಷಿಕ ನೃತ್ಯೋತ್ಸವ ಕಾರ್ಯಕ್ರಮ ಪಟ್ಟಣ ವ್ಯಾಪ್ತಿಯ ಶಂಕರಮಠದಲ್ಲಿ ನಡೆಯಿತು. ವಿದುಷಿ ಸೀಮಾ ಭಾಗ್ವತ್, ನಟರಾಜನಿಗೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನೃತ್ಯ ಶಿಕ್ಷಕಿ ಸೌಭಾಗ್ಯ ಹಂದ್ರಾಳ ಹಾಗೂ ನೃತ್ಯಗುರು ವಿದುಷಿ ಸೀಮಾ ಭಾಗ್ವತರನ್ನು ಪಾಲಕರು ವೇದಿಕೆಯಲ್ಲಿ ಗೌರವಿಸಿದರು.
