ಶಿರಸಿ & ಶಿವಮೊಗ್ಗ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕಂಚಿಕೈ ಜನತೆ

ಹಣಕ್ಕಾಗಿ ಅಮಾಯಕರನ್ನು ಬೆದರಿಸುವ ಪುಂಡರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸಿದ್ದಾಪುರ ತಾಲೂಕಿನ ಕಂಚಿಕೈ ನಲ್ಲಿ ನಡೆದಿದೆ. ರವಿವಾರ ಭೀಮನಗುಡ್ಡ, ಉಂಚಳ್ಳಿ ಫಾಲ್ಸ್‌ ನೋಡುವ ಬರುವ ಪ್ರವಾಸಿಗರು ಅನೇಕ ಇಂಥ ಪ್ರವಾಸಿಗರನ್ನು ರಸ್ತೆ ಮಧ್ಯೆ ನಿಲ್ಲಿಸಿ ಹಣ ಸಂಪಾದಿಸಬಹುದೆಂದು ಯೋಚಿಸಿ ದರೋಡೆಗೆ ಇಳಿದ ಶಿರಸಿಯ ಒಬ್ಬ ವ್ಯಕ್ತಿ ಮತ್ತು ಆತನ ಸ್ನೇಹಿತ ಶಿವಮೊಗ್ಗದ ಇನ್ನೊಬ್ಬ ಪೊಲೀಸ್‌ ಆತಿಥ್ಯದಡಿ ಈಗ ಸಿದ್ಧಾಪುರ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ರವಿವಾರ ಬೆಳಿಗ್ಗೆ ಶಿರಸಿಯಿಂದ ಬೈಕ್‌ ಕದ್ದು ಶಿರಸಿ ಕುಮಟಾ ಮಾರ್ಗದಲ್ಲಿ ಕೋಳಿ ಸಾಗಿಸುತಿದ್ದ ಬೊಲೇರೋ ವಾಹನ ನಿಲ್ಲಿಸಿ ಹಣ ಕಿತ್ತ ಈ ಜೋಡಿ ಕೋಳಿ ಗಾಡಿಯವನಿಂದ ಕಿತ್ತ ೨.೫ ಸಾವಿರ ಸಾಕಾಗದೆ ಶಿರಸಿ-ಸಿದ್ಧಾಪುರ ಒಳರಸ್ತೆ ಪ್ರವೇಶಿಸಿ ಅಲ್ಲಿ ಭೀಮನಗುಡ್ಡ ನೋಡಿ ಬರುತಿದ್ದ ಯುವಜೋಡಿಯಿಂದ ಹಣ ಬಂಗಾರ ಕೀಳುವ ಪ್ರಯತ್ನ ನಡೆಸಿದೆ. ಈ ವೇಳೆ ಚೀರಿಕೊಂಡ ಯುವತಿಯ ಕೂಗನ್ನು ಆಲಿಸಿ ಬಂದ ಸ್ಥಳೀಯರು ಈ ಭಲೇಜೋಡಿಯನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಸ್ಥಳೀಯರಿಂದ ಗೂಸಾ ತಿಂದ ಕಳ್ಳರ ತಂಡದ ಇಬ್ಬರು ಸದಸ್ಯರು ಈಗ ಸ್ಥಳೀಯ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ವಿವರ- ಆ.೨೭ ರ ರವಿವಾರ ಬೆಳಿಗ್ಗೆ ಶಿರಸಿ ಹಂಚಿನಕೇರಿಯಶಹೀದ್‌ ಇಸ್ಮಾಯಿಲ್‌ ಶೇಖ್‌ ಬಳಿ ಬರುವ ಶಿವಮೊಗ್ಗ ಟಿಪ್ಪು ನಗರದ ಇರ್ಪಾನ್‌ ಅನ್ವರ್‌ ಪಾಶಾ ಹಣದ ತೊಂದರೆ ಹೇಳಿಕೊಳ್ಳುತ್ತಾನೆ. ಇಬ್ಬರೂ ಯೋಜನೆ ರೂಪಿಸಿ ಶಿರಸಿ ನಗರದಲ್ಲಿ ಒಂದು ಬೈಕ್‌ ಕಳ್ಳತನ ಮಾಡಿ ಅಲ್ಲಿಂದ ಕುಮಟಾ ರಸ್ತೆಯಲ್ಲಿ ಸಾಗಿ ಕುಮಟಾ ರಸ್ತೆ ಬಂಡಲ್‌ ಬಳಿ ಕೋಳಿವಾಹನ ತಡೆದು ನಿಲ್ಲಿಸಿ ವಾಹನ ಚಾಲಕನಿಂದ ೨೫೦೦ ರೂಪಾಯಿ ಅಪಹರಿಸುತ್ತಾರೆ. ನಂತರ ಶಿರಸಿ-ಕುಮಟಾ ಮಾರ್ಗದಿಂದ ಸಿದ್ಧಾಪುರ ಮಾರ್ಗವಾಗಿ ಒಳರಸ್ತೆ ಪ್ರವೇಶಿಸಿ ಕಂಚಿಕೈ ಬಳಿ ಯುವ ಜೋಡಿಯೊಂದನ್ನು ಹೆದರಿಸಿ ಹಣ-ಬಂಗಾರ ಕೀಳುವ ವಿಫಲ ಯತ್ನ ಮಾಡಿದಾಗ ಕಂಗಾಲಾದ ಯುವತಿಯ ಕೂಗು ಕೇಳಿ ಸೇರಿದ ಸ್ಥಳೀಯರು ಈ ಪುಂಡರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ.

ಎರಡು ದೂರು ದಾಖಲು- ಈ ಬಗ್ಗೆ ಎರಡು ಪೊಲೀಸ್‌ ದೂರುಗಳು ದಾಖಲಾಗಿದ್ದು ಶಿರಸಿ ದೇವನಳ್ಳಿ ಕುದ್ರಗೋಡ್‌ ಸುಬ್ರಮಣ್ಯ ಗೌಡ ತಮ್ಮನ್ನು ಹೆದರಿಸಿ ಈ ಇಬ್ಬರು ಹಣ-ಬಂಗಾರ ದೋಚಿದ್ದಾರೆ ಎಂದು ದೂರು ನೀಡಿದರೆ.

ಶಹೀದ್‌ ಮತ್ತು ಇರ್ಪಾನ್‌ ಪರವಾಗಿ ಶಹೀದ್‌ ಸಿದ್ಧಾಪುರ ಪೊಲೀಸರಿಗೆ ದೂರು ನೀಡಿದ್ದು

ತಾವಿಬ್ಬರು ಹೆಗ್ಗರಣಿ ಬಳಿ ನಡೆದುಕೊಂಡು ಬರುತ್ತಿರುವಾಗ ಆರೆಂಟು ಜನರ ಗುಂಪು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ನ್ಯಾಯ ಕೇಳಿದ್ದಾನೆ!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *