

ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಸಿದ್ದಾಪುರ ತಾಲೂಕಿನ ಕೆಲವು ಗ್ರಾಮಗಳನ್ನು ಸೇರಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲು ಮಾರ್ಚ 3 ಮುಂಜಾನೆ 10 ಘಂಟೆಗೆ ಹೆಗ್ಗರಣೆ ಸೊಸೈಟಿಯ ಹತ್ತಿರ ಬೃಹತ್ ಪ್ರತಿಭಟನಾ ಸಭೆ ಜರುಗಿಸಲು ನಿರ್ಧರಿಸಲಾಗಿದೆ.
ತಂಡಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆಯ ಈಶ್ವರ ದೇವಾಲಯದ ಆವರಣದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂಧ್ರ ನಾಯ್ಕ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಯಿತು.
ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಸಿದ್ದಾಪುರ ತಾಲೂಕಿನ ನಿಲ್ಕುಂದ, ಮುಳಗುಂದ, ಹಳ್ಳಿಬೈಲ್, ಉಂಚಳ್ಳಿ, ಶಿವಳಮನೆ, ಹುಕ್ಕಳಿ, ಶಜಗುಳಿ, ನೈಗಾರ, ಕಡವಾಡ, ಹೊನ್ನೆಕೊಪ್ಪ, ನೀರಗೋಡ, ಸುರಗಾಲ, ಹೇಮಗಾರ, ಹೆಜನಿ, ಕುಡಗುಂದ, ಮಲೆಮನೆ, ಸೂತ್ಲಮನೆ, ವಾಜಗೋಡ, ದಾನಮಾಂವ, ತೇಳಿಕೇರಿ, ಮುಂತಾದ 20 ಗ್ರಾಮಗಳ 9045.73 ಹೇಕ್ಟೇರ್ ಪ್ರದೇಶ ಸೇರ್ಪಡೆಗೊಂಡಿರುವುದರಿಂದ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಕಳೆದ ವರ್ಷ ಜೂನ್ 7 ರಂದು ಸರಕಾರ ಆದೇಶ ಹೊರಡಿಸಿದರೂ, ಇಲ್ಲಿಯವರೆಗೂ ಜನರಿಗೆ ಕತ್ತಲೆಯಲ್ಲಿ ಇಟ್ಟು ಯೋಜನೆ ಜಾರಿಗೆ ಸರಕಾರ ನಿರ್ಧರಿಸುವುದಕ್ಕೆ ಸಭೆಯಲ್ಲಿ ಸರಕಾರದ ನೀತಿಯನ್ನು ಖಂಡಿಸಲಾಯಿತು. ಅಲ್ಲದೇ ಸರಕಾರದ ಜನವಿರೋಧಿ ನೀತಿಯನ್ನು ಬಹಿರಂಗ ಹಾಗೂ ಕಾನೂನಾತ್ಮಕ ಹೋರಾಟದ ಮೂಲಕ ಪ್ರತಿಭಟಿಸಲು ಸಭೆ ನಿರ್ಧರಿಸಿದೆ.
ಸಭೆಯನ್ನು ಉದ್ದೇಶಿಸಿ ಸೀತಾರಾಮ ಲಿಂಗ ಗೌಡ ಹುತ್ಗಾರ, ಶೇಖರ ನಾಯ್ಕ ಹೆಗ್ಗರಣಿ, ನಾಗಪತಿ ಗೌಡ ಹುತ್ಗಾರ, ಸೀತಾರಾಮ ಹುಲಿಯಾ ಗೌಡ ಹುಕ್ಕಳಿ, ಸುರೇಶ ಹೆಗಡೆ ತಂಡಾಗುಂಡಿ ಮುಂತಾದವರು ಮಾತನಾಡಿದರು.
ವೇದಿಕೆಯ ಮೇಲೆ ಲಿಂಗ ಬೀರಾ ಗೌಡ ನಿಲ್ಕುಂದ, ಗಣಪ ಯಂಕ ಗೌಡ ತಾರಿಮನೆ, ವೆಂಕಟಮ ನಾಯ್ಕ ಕೊಪ್ಪದಜಡಿ, ಉಪಸ್ಥಿತರಿದ್ದರು. ಹರಿಹರ ನಾಯ್ಕ ಸ್ವಾಗತಿಸಿ ವಂದಿಸಿದರು.
ಜನರ ತೀವ್ರ ಆಕ್ಷೇಪ:
ಜನರಿಗೆ ಕತ್ತಲೆಯಲ್ಲಿ ಇಟ್ಟು, ಜನರ ವಿಶ್ವಾಸ ತೆಗೆದುಕೊಳ್ಳದೇ ಏಕಾಎಕಿಯಾಗಿ ಅಭಯಾರಣ್ಯ ಪ್ರದೇಶಕ್ಕೆ ಗ್ರಾಮಗಳ ಸೇರ್ಪಡೆಗೆ ಜನರ ತೀವ್ರ ಆಕ್ಷೇಪವಿದ್ದು, ಈ ಯೋಜನೆಯಿಂದ ಸ್ಥಳೀಕರು ಭಯ ಭೀತರಾಗಿದ್ದಾರೆ. ಸರಕಾರ ಈ ದಿಶೆಯಲ್ಲಿ ಜನರ ವಿಶ್ವಾಸಗಳಿಸಬೇಕೆಂದು ತಂಡಾಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಹರ ನಾಯ್ಕ ಸಭೆಯಲ್ಲಿ ಆಕ್ಷೇಪಿಸಿದರು.


