ಅಡಿಕೆ: ಕಳ್ಳರಿದ್ದಾರೆ ಎಚ್ಚರಿಕೆ! ಮತಾಂಧರ ಕೈವಾಡದ ಶಂಕೆ?

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆ ಕದಿಯಲು ಬಂದ ಕಳ್ಳರು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಶಿರಸಿ-ಸಿದ್ಧಾಪುರದ ಕೆಲವೆಡೆ ಕಳ್ಳರು ಅಡಿಕೆ ಕದಿಯುವ ಹಿನ್ನೆಲೆಯಲ್ಲಿ ನಾನಾ ವೇಷಗಳಲ್ಲಿ ಹೊಂಚುಹಾಕುತಿದ್ದಾರೆ ಎನ್ನುವ ಗಾಳಿಸುದ್ದಿಗಳು ಕೇಳಿಬರುತ್ತಿವೆ.
ಕಳೆದ ವಾರ ಒಂದು ರಾತ್ರಿ ಅವರಗುಪ್ಪಾದಲ್ಲಿ (ಸಿದ್ಧಾಪುರ) ಅಡಿಕೆ ಸಂಗ್ರಹಿಸಿಟ್ಟಿದ್ದ ಮನೆಯ ಮುಂದೆ ಮಾರುತಿ ಒಮಿನಿಯಲ್ಲಿ ಬಂದಿದ್ದ ಜನರು ಹಾರ್ನ್ಮಾಡಿ ಮನೆಯ ಜನರು ಬೆಳಕು ಹೊತ್ತಿಸುತ್ತಲೇ ಪರಾರಿಯಾದ ಘಟನೆ ನಡೆದಿದೆ.
ಇದೇ ರಾತ್ರಿ ಬಹುತೇಕ ಇದೇ ಸಮಯದಲ್ಲಿ ಇದೇ ಒಮಿನಿಯಲ್ಲಿ ಬಂದಿರಬಹುದಾದ ಕೆಲವು ಜನರು ಅವರಗುಪ್ಪಾದ ಗೌಡರ್ ಮನೆಯಲ್ಲಿ ಸಂಗ್ರಹಿಸಿದ್ದ ಕೆಂಪುಅಡಿಕೆಯ ಚೀಲಗಳನ್ನು ಕೊಂಡುಯ್ಯುವ ಪ್ರಯತ್ನದಲ್ಲಿದ್ದಾಗ ಲೈಟ್ ಹಾಕಿದ ಮನೆಯವರು ಎಚ್ಚರಾಗಿರಬಹುದು ಎಂದು ತಿಳಿದು ಕಳ್ಳರು ಪರಾರಿಯಾಗಿದ್ದಾರೆ.
ಈ ಕಳ್ಳರು ಗೌಡರ ಮನೆಯ ಒಣ(ಚಾಲಿ)ಅಡಿಕೆ ಚೀಲಕ್ಕೆ ಕೈಹಾಕದೆ, ಕೆಂಪು ಅಡಿಕೆ ಚೀಲವನ್ನೇ ಹುಡುಕಿ ಬಾಗಿಲ ವರೆಗೆ ಎಳೆದುತಂದು ದಿಢೀರ್ ಹೊತ್ತಿದ ಬೆಳಕಿನಿಂದಾಗಿ ಓಡಿ ಪರಾರಿಯಾಗಿದ್ದಾರೆ. ಮನೆಯವರು ಶೌಚಕ್ಕೆ ಎದ್ದಿದ್ದರು ಎನ್ನಲಾಗಿದ್ದು. ಅಡಿಕೆ ಸಂಗ್ರಹಿಸುವ ಪ್ರದೇಶ, ಚಾಲಿ ಅಡಿಕೆ ಚೀಗಳೊಂದಿಗಿದ್ದ ಕೆಂಪು ಅಡಿಕೆ ಚೀಲವನ್ನೇ ಗುರುತಿಸಿ ಕೈ ಹಚ್ಚಿದ್ದು, ರಾತ್ರಿ 2ರಿಂದ ಮೂರರ ಅವಧಿಯಲ್ಲಿ ಈ ಘಟನೆ ನಡೆದಿದ್ದು ಈ ಎಲ್ಲಾ ಅಂಶಗಳ ಆಧಾರದಲ್ಲಿ ಸಿದ್ಧಾಪುರದಲ್ಲಿ ಸ್ಥಳಿಯರ ಸಹಕಾರ, ನೆರವಿನಿಂದ ಒಳಗಿನವರು, ಹೊರ ಊರವರೆಲ್ಲಾ ಸೇರಿ ಈ ಕಳ್ಳತನ ಮಾಡುತ್ತಿರಬಹುದು ಎನ್ನುವ ಸಂಶಯ ವ್ಯಕ್ತವಾಗಿದೆ.
ಅಡಿಕೆಗೆ 30-35ಸಾವಿರಗಳಷ್ಟಿದ್ದ ಬೆಲೆ ಇತ್ತೀಚಿನ ದಿನಗಳಲ್ಲಿ ಹತ್ತು ಸಾವಿರದಷ್ಟು ಹೆಚ್ಚಿದ್ದು ಅಡಿಕೆ ಕದಿಯುವ ಕಳ್ಳರಿಗೆ ಉತ್ತೇಜನ ನೀಡಿದಂತಾಗಿದೆ.
20 ವರ್ಷಗಳ ಹಿಂದೆ ಹಗಲು ದೇಶಪ್ರೇಮಿಗಳು ರಾತ್ರಿ ಕಳ್ಳರು ಆಗಿ ಹೊನ್ನಾವರ-ಸಿದ್ಧಾಪುರ ಭಾಗದಲ್ಲಿ ದೇವಾಲಯಗಳ ಕಳ್ಳತನ ಮಾಡಿ ರಾಜಕಾರಣ ಮಾಡುತಿದ್ದ ಮತಾಂಧರಿಗೆ ಈಗ ಸರ್ಕಾರ, ಜನಪ್ರತಿನಿಧಿತ್ವ ಎಲ್ಲವೂ ಅವರ ಬಳಿಯೇ ಇರುವುದರಿಂದ ಈ ಹಗಲು ದೇಶಭಕ್ತರು ರಾತ್ರಿ ಕಳ್ಳರಾಗುವ ಮತಾಂಧರೆ ಇರಬಹುದು ಎನ್ನುವ ಶಂಕೆಯೂ ವ್ಯಕ್ತವಾಗಿದೆ.
ಅಂದಹಾಗೆ 20-25 ವರ್ಷಗಳ ಹಿಂದೆ ರಾತ್ರಿ ದೇವಸ್ಥಾನಗಳ ಕಳ್ಳತನ ಮಾಡಿ ದೇಶಭಕ್ತರ ಗೆಟಪ್ ಹಾಕುತಿದ್ದವರು ಮಾಜಿ ಸಚಿವರೊಬ್ಬರ ಆಪ್ತರು, ಹಿಂಬಾಲಕರು ಆಗಿದ್ದ ಅವರಲ್ಲಿ ಬದುಕಿರುವ ಕೆಲವರು ನಾಗಪುರದ ಅವರ ಹೆಡ್ಡಾಫೀಸ್ ಬಳಿ ಸೇರಿಕೊಂಡಿದ್ದಾರೆ ಎನ್ನುವ ಮಾಹಿತಿಗಳು ಪೊಲೀಸರ ಬಳಿ ಇರುವುದು ಮತಾಂಧರ ದ್ವಿಪಾತ್ರ,ತ್ರಿಪಾತ್ರಗಳಿಗೆ ದೃಷ್ಟಾಂತ ಎನ್ನಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *