

ಸಿದ್ಧಾಪುರ ನಗರದಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಹೋಳಿಹಬ್ಬದ ಆಚರಣೆ ಶಾಂತಿಯುತವಾಗಿ ನಡೆಯಿತು. ನಗರದ ಕೆಲವೆಡೆ ಕಾಮನ ದಹನ ಮಾಡಿದ ಜನರು ಮಂಗಳವಾರ ಬಣ್ಣ ಹಚ್ಚಿಕೊಂಡು ಸಂಬ್ರಮಿಸಿದರು. ಯುವಕರು ಹಾಡು-ಕುಣಿತದ ಮೆರವಣಿಗೆ ಮೂಲಕ ಹೋಳಿಯನ್ನು ಸಂಬ್ರಮಿಸಿದರು.
ರವೀಂದ್ರನಗರದ ಯುವಕರು ಪ್ರತಿವರ್ಷದಂತೆ ಈ ವರ್ಷವೂ ಬಣ್ಣಹಚ್ಚಿ ಮೊಸರುಮಡಿಕೆ ಒಡೆಯುವ ಸಾಹಸ ಪ್ರದರ್ಶಿಸಿದರು. ಸೋಮವಾರ, ಮಂಗಳವಾರಗಳ ಎರಡು ದಿವಸಗಳ ಹೋಳಿ ಶಾಂತಿಯುತವಾಗಿ ಇಂದು ಮುಕ್ತಾಯವಾಯಿತು.

ಭವ್ಯಭಾರತ ಸಾಗುತ್ತಿರುವ ದಾರಿ ಭಯಹುಟ್ಟಿಸುತ್ತಿದೆಯೇ?
ಅಮೇರಿಕಾದ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡಿ ಮರಳಿದ್ದಾರೆ.
ಟ್ರಂಪ್ ಭಾರತ ಭೇಟಿ ಹಿನ್ನೆಲೆಯ ಉದ್ದೇಶಗಳಲ್ಲಿ ಅಮೇರಿಕಾದಲ್ಲಿರುವ ಭಾರತೀಯ ಮತದಾರರ ಓಲೈಕೆ ಹಾಗೂ ಯುದ್ಧಾಸ್ತ್ರಗಳು ಸೇರಿದಂತೆ ಅಮೇರಿಕಾಕ್ಕೆ ವ್ಯಾಪಾರಿ ಲಾಭ ಮಾಡುವ ಉದ್ಧೇಶ ಎನ್ನಲಾಗುತ್ತಿದೆ. ಭಾರತದಲ್ಲಿ ಮೋದಿ ನೇತೃತ್ವದಲ್ಲಿ ಎನ್.ಡಿ.ಎ. ಸರ್ಕಾರಗಳ ಆರಂಭಾ ಕಾಲದಿಂದಲೂ ಈ ಸರ್ಕಾರಗಳಿಗೆ ಬಂಡವಾಳಶಾಹಿ ಅಮೇರಿಕಾ ಮೇಲೆ ಪ್ರೀತಿ ಯಾಕೆಂದರೆ ಭಾರತದಲ್ಲಿ ಮೋದಿ ಮತ್ತವರ ಪರಿವಾರ ಮಾಡುತ್ತಿರುವ ಉಳ್ಳವರ ಓಲೈಕೆಯ ಬಂಡವಾಳಶಾಹಿ, ಧಾರ್ಮಿಕ ರಾಷ್ಟ್ರೀಯತೆಯ ಕೋಮುವಾದಿ ಕಾರ್ಯಾಚರಣೆಗಳಿಗೂ ಟ್ರಂಪ್ ನೀತಿಗಳಿಗೂ ಸಾಮ್ಯತೆಗಳಿವೆ. ಅಮೇರಿಕಾ ಬಹಿರಂಗವಾಗಿ ಭಾರತವನ್ನು ಓಲೈಸಿ, ಹಿಂದಿನಿಂದ ಪಾಕಿಸ್ತಾನಕ್ಕೆ ಬೆಂಬಲಿಸುತ್ತಿರುವ ಅಂಶ ಬಹಿರಂಗ ಗುಟ್ಟು ಆದರೆ ಜನಸಾಮಾನ್ಯರ ವಿರೋಧಿ ಕಾರ್ಯಾಚರಣೆಯ ಮೋದಿ ಮತ್ತು ಟ್ರಂಪ್ ಚಲನೆಗಳ ಹಿಂದೆ ಅಭಿವೃದ್ಧಿ-ಸಂಬಂಧಗಳ ಸುಧಾರಣೆಯ ನೆಪದ ಆಂತರಿಕ ಸಮಾನ ಹಿತಾಸಕ್ತಿಗಳ ಕಾರಣಎಂಬುದನ್ನು ಭಾರತೀಯರು ಮರೆಯಬಾರದು.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
